Advertisement

ದಾಖಲೆ ಏರಿಕೆ ಕಂಡ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ, 12ಸಾವಿರ ಗಡಿ ತಲುಪಿದ ನಿಫ್ಟಿ

10:12 AM Nov 07, 2019 | Nagendra Trasi |

ಮುಂಬೈ: ವಾಣಿಜ್ಯ ನಗರಿ ಮುಂಬೈಯ ದೇಶೀಯ ಶೇರುಪೇಟೆಯಲ್ಲಿ ವಹಿವಾಟು ಏರುಗತಿಯಲ್ಲಿ ಸಾಗಿದ್ದು, ಬುಧವಾರವೂ ಕೂಡಾ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ದಾಖಲೆ ಮಟ್ಟದ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ಅಲ್ಲದೇ ಜೂನ್ 11ರ ನಂತರ ಇದೇ ಮೊದಲ ಬಾರಿಗೆ ನಿಫ್ಟಿ 12,000 ಗಡಿ ತಲುಪಿದೆ.

Advertisement

ಸೆನ್ಸೆಕ್ಸ್ ಸೂಚ್ಯಂಕ 221.55 ಅಂಕಗಳ ಏರಿಕೆಯೊಂದಿಗೆ 40,469.78 ಅಂಕಗಳ ವಹಿವಾಟಿನೊಂದಿಗೆ ಮುಕ್ತಾಯ ಕಂಡಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 48.85 ಅಂಕಗಳ ಏರಿಕೆಯೊಂದಿಗೆ 11,966.05 ದಾಖಲೆಯ ವಹಿವಾಟಿನೊಂದಿಗೆ ಅಂತ್ಯಕಂಡಿದೆ ಎಂದು ವರದಿ ತಿಳಿಸಿದೆ.

ಇನ್ಫೋಸಿಸ್ ಎಸ್ ಎಸ್ ಇ 2.33ರಷ್ಟು ಲಾಭಗಳಿಸಿದೆ. ಇನ್ಫೋಸಿಸ್ ಶೇರುಗಳ ಬೆಲೆ 713.45 ರೂಪಾಯಿಗೆ ಏರಿಕೆ ಕಂಡಿತ್ತು. ಮಾಜಿ ಉದ್ಯೋಗಿಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಇನ್ಫೋಸಿಸ್ ಹೇಳಿಕೆ ನೀಡಿದ್ದು, ಇದರಿಂದ ಹೂಡಿಕೆದಾರರು ಇನ್ಫೋಸಿಸ್ ಶೇರುಗಳ ಖರೀದಿಗೆ ಮುಗಿಬಿದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next