Advertisement

ಐಫೋನ್‌ 14ರಲ್ಲಿ ಹೊಸದೇನಿಲ್ಲ

12:26 AM Sep 09, 2022 | Team Udayavani |

ವಾಷಿಂಗ್ಟನ್‌: ಆ್ಯಪಲ್‌ ಕಂಪೆನಿ ತನ್ನ ಐಫೋನ್‌ 14 ಮಾಡೆಲ್‌ಗ‌ಳನ್ನು ಬುಧವಾರ ಮಾರುಕಟ್ಟೆಗೆ ಪರಿಚಯಿಸಿದ ಬೆನ್ನಲ್ಲೇ ಕಂಪೆನಿಗೆ ಹೊಸತನದ ಕೊರತೆಯ ಕುರಿತು ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.

Advertisement

ಇದಕ್ಕೆ ಇಂಬು ನೀಡುವಂತೆ ಆ್ಯಪಲ್‌ ಸಹ ಸಂಸ್ಥಾಪಕ ಮತ್ತು ಸಿಇಒ ಸ್ವೀವ್‌ ಜಾಬ್ಸ್ ಮಗಳು ಈವ್‌ ಜಾಬ್ಸ್ (24), “ಆ್ಯಪಲ್‌ ಮೂಲತಃ ತನ್ನ ಪ್ರತೀ ಹೊಸ ಪೀಳಿಗೆಯ ಐಪೋನ್‌ಗಳೊಂದಿಗೆ ಹಿಂದಿನ ವಿನ್ಯಾಸಗಳನ್ನು ಮರು      ಜೋಡಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈವ್‌ ಜಾಬ್ಸ್ ಮೀಮ್‌ ಒಂದನ್ನು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಈಗಾಗಲೇ ಧರಿಸಿರುವ ಶರ್ಟ್‌ಗೆ ಹೋಲುವ ಇನ್ನೊಂದು ಶರ್ಟ್‌ ಅನ್ನು ಕೈಯಲ್ಲಿ ಹಿಡಿದು ತೋರಿಸುತ್ತಿರುವ ಪೋಟೋ ಹಾಕಿದ್ದಾರೆ.

ಇದೇ ರೀತಿ ಭಾರತದಲ್ಲಿ ಕೂಡ, “ಐಫೋನ್‌ 13ಗೆ ಹೋಲಿಸಿದರೆ ಐಫೋನ್‌ 14ರಲ್ಲಿ ಹೊಸತೇನಿಲ್ಲ’ ಎಂದು ಮೀಮ್‌ಗಳೊಂದಿಗೆ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಅನೇಕರು ಹಾಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next