Advertisement

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

12:43 AM May 08, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಉತ್ತರ 14 ಕ್ಷೇತ್ರಗಳಲ್ಲಿ ಮಂಗಳವಾರ ನಡೆದಿದ್ದು, 227 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರಗೊಂಡಿದೆ. ಬಿರುಬಿಸಿಲಿನ ಹೊರತಾಗಿಯೂ ಮತದಾರರು ಅತ್ಯುತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ್ದು, ಶೇ. 71.4 ಮತದಾನವಾಗಿದೆ.

Advertisement

ಮೊದಲ ಹಂತದಲ್ಲಿ ಶೇ.69.56ರಷ್ಟು ಮತದಾನವಾಗಿದ್ದು, ಒಟ್ಟಾರೆಯಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ ಅಂದಾಜು ಸರಾಸರಿ ಶೇ. 70.48 ಮತ ಚಲಾವಣೆಯಾಗಿದೆ. ಇದ ರೊಂದಿಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪೂರ್ಣ ಗೊಂಡಂತಾಗಿದೆ. 7 ಹಂತಗಳ ಚುನಾವಣೆ ಜೂ. 1ರಂದು ಮುಕ್ತಾಯವಾಗಲಿದ್ದು, ಜೂ. 4ರಂದು ಫ‌ಲಿತಾಂಶ ಪ್ರಕಟ ವಾಗಲಿದೆ. ಹಾಗಾಗಿ ರಾಜ್ಯದ ಜನತೆ ಫ‌ಲಿತಾಂಶಕ್ಕಾಗಿ ಇನ್ನೂ 27 ದಿನ ಕಾಯಬೇಕಾಗಿದೆ.

ಹಂತ-2ರಲ್ಲಿ ಭಾರೀ ಮತದಾನ
2ನೇ ಹಂತದಲ್ಲಿ ಬಿಸಿಲು ಲೆಕ್ಕಿಸದೆ ಮತದಾರರು ಉತ್ಸಾಹ ತೋರಿದ್ದು, ಅಂತಿಮವಾಗಿ ಶೇ. 71.4 ಮತದಾನವಾಗಿದೆ. ಕಳೆದ ಬಾರಿಗಿಂತ ಶೇ. 2.55ರಷ್ಟು ಮತದಾನ ಹೆಚ್ಚಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ 14 ಕ್ಷೇತ್ರಗಳಲ್ಲಿ ಶೇ. 68.85ರಷ್ಟು ಮತದಾನವಾಗಿತ್ತು. ವಿಶೇಷವೆಂದರೆ ಮೊದಲ ಹಂತದಲ್ಲಿ ಮತದಾನ ನಡೆದ 14 ಕ್ಷೇತ್ರಗಳಿಗಿಂತ ಮಂಗಳವಾರ ಮತದಾನ ನಡೆದ 14 ಕ್ಷೇತ್ರಗಳಲ್ಲಿ ಪ್ರತೀ ಎರಡು ಗಂಟೆಗಳ ಸರಾಸರಿ ಮತದಾನದಲ್ಲಿ ಶೇ. 3ರಿಂದ 4ರಷ್ಟು ಹೆಚ್ಚಳವಾಗಿತ್ತು. ಅದರಂತೆ ಮೊದಲ ಹಂತದ 14 ಕ್ಷೇತ್ರಗಳ ಮತದಾರರಿಗಿಂತ ಎರಡನೇ ಹಂತದ 14 ಕೇತ್ರಗಳ ಮತದಾರರು ಮತದಾನದಲ್ಲಿ ಮೇಲುಗೈ ಸಾಧಿಸಿದ್ದಾರೆ. ಎರಡನೇ ಹಂತದಲ್ಲಿ ಅತೀ ಹೆಚ್ಚು ಮತದಾನ ಚಿಕ್ಕೋಡಿಯಲ್ಲಿ ಶೇ. 78.41 ಹಾಗೂ ಅತೀ ಕಡಿಮೆ ರಾಯಚೂರಿನಲ್ಲಿ ಶೇ. 62 ಮತದಾನವಾಗಿದೆ.

ಸುರಪುರ ಉಪಚುನಾವಣೆ: ಶೇ.73.76 ಮತದಾನ
ಸುರಪುರ: ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ಮಂಗಳವಾರ ನಡೆದ ಉಪಚುನಾವಣೆ ಸಣ್ಣಪುಟ್ಟ ಅಹಿತಕರ ಘಟನೆ ಹೊರತುಪಡಿಸಿದರೆ ಶಾಂತಿಯುತವಾಗಿತ್ತು. ಅಂದಾಜು ಶೇ.73.76 ಮತದಾನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next