Advertisement
ವ್ಯಾನ್‌ನ ಒಂದು ವಿಶೇಷವೆಂದರೆ ರಾತ್ರಿ ಬಿಸಿಲು ಎಲ್ಲದಕ್ಕೂ ಸೈ ಎನಿಸಿಕೊಂಡಿದೆ. ರಾತ್ರಿ ಸಮಯ ನಿಮ್ಮ ಪಯಣ ನಿಲ್ಲುವುದಿಲ್ಲ. ಇದರಲ್ಲಿರುವ ಬ್ಯಾಟರಿಯು 600ಕಿ. ಮೀ. ವರೆಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ವ್ಯಾನ್‌ನ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು ನಿರಂತರ ಸೌರಶಕ್ತಿಯನ್ನು ನೀಡುತ್ತದೆ.
ಈ ವ್ಯಾನ್ ಒಂದು ಕೋಣೆ, ಡಬಲ್ ಬೆಡ್, ಡೈನಿಂಗ್ ಟೇಬಲ್ ಮತ್ತು ಕುಳಿತುಕೊಳ್ಳಲು ಸ್ವಲ್ಪ ಜಾಗವನ್ನು ಹೊಂದಿದೆ. ಇದರ ಹೊರತಾಗಿ ಆಹಾರ ತಯಾರಿಸಲು ಸುಲಭವಾಗುವಂತೆ ಒಲೆ ಅದರ ಬದಿಯಲ್ಲಿ ಸಿಂಕ್ ಹಾಗೂ ಸ್ನಾನಕ್ಕೆ ಶವರ್ ಕೂಡ ಇದೆ. ವ್ಯಾನ್‌ನ ಮುಂಭಾಗದಲ್ಲಿ ಚಾಲಕನ ಹೊರತು ಪಡಿಸಿ ಇಬ್ಬರು ಕುಳಿತುಕೊಳ್ಳಲು ಆಸನವಿದೆ. ಆದರೆ ವ್ಯಾನ್‌ನಲ್ಲಿ ಶೌಚಾಲಯವಿಲ್ಲ. ಅದಕ್ಕೆ ನೀವು ಹೋಗುವ ದಾರಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
ನೀವು ಸಾಗುತ್ತಾ ಸಾಗುತ್ತಾ ಎಷ್ಟು ಶಕ್ತಿ ಬೇಕಾಗುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಎಷ್ಟು ಟಿವಿ, ಮತ್ತು ಶವರ್ ಇನ್ನಿತರ ಕೆಸಲಗಳಿಗೆ ವ್ಯಯಿಸಲ್ಪಡುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಂಡಾಗ ನಿಮಗೆ ಆ ಶಕ್ತಿಯನ್ನು ಹೇಗೆ ಬಳಸಬಹುದು ಎಂಬುದು ಅರಿವಾಗುತ್ತದೆ. ಇದರ ಉದ್ದೇಶ?
ವಿದ್ಯಾರ್ಥಿಗಳು ಪ್ರವಾಸ ಮಾಡುವ ಸಮಯದಲ್ಲಿ ನಗರಗಳಲ್ಲಿ ಈ ವ್ಯಾನ್‌ಗಳ ಪ್ರದರ್ಶನ ನಡೆಸಿ, ಭವಿಷ್ಯದಲ್ಲಿ ಸೌರಶಕ್ತಿಯನ್ನು ಉಳಿಸಲು. ಮತ್ತು ಬಳಸಲು ಜನರಿಗೆ ಅರಿವು ಮೂಡಿಸುತ್ತಾರೆ. ಇದು ಕೇವಲ ವ್ಯಾನ್ ಅಲ್ಲ ಚಕ್ರಗಳ ಮೇಲೆ ನಿಂತಿರುವ ಮನೆ ಎಂದು ಅದನ್ನು ಹೆಮ್ಮೆಯಿಂದ ಬಣ್ಣಿಸುತ್ತಾರೆ ಈ ವಿದ್ಯಾರ್ಥಿಗಳು.
Advertisement
ಈ ವ್ಯಾನ್ ಗಂಟೆಗೆ 120ಕಿಮೀ ವೇಗದಲ್ಲಿ ಚಲಿಸುತ್ತದೆ. ಅಲ್ಲದೆ ಆಕಾಶ ಸ್ಪಷ್ಟವಾಗಿದ್ದು ಬಿಸಿಲಿನ ಪ್ರಮಾಣ ಪ್ರಕರವಾಗಿದ್ದಾಗ 730 ಕಿಮೀ ದೂರವನ್ನು 120 ಕಿಮೀ ವೇಗದಲ್ಲಿ ಕ್ರಮಿಸಬಹುದಾಗಿದೆ. ಇದು 60 kಗಜಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ನೀವು ರಾತ್ರಿಯೂ ಕೂಡ ಚಲಿಸಬಹುದು.
ಇಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ಯಂತ್ರಗಳು ಕೂಡ ಮಾರುಕಟ್ಟೆಗೆ ಬರುತ್ತಿದ್ದು ಇದಕ್ಕೆ ಟಕ್ಕರ್ ನೀಡಲು ಈ ಸೌರಶಕ್ತಿಯಾದಾರಿತ ವಾಹನಗಳನ್ನು ತಯಾರು ಮಾಡುತ್ತಿರುವುದು ಒಳ್ಳೆಯ ಸಂಗತಿಯಾಗಿದ್ದು. ಇನ್ನು ಮುಂಬರುವ ದಿನಗಳಲ್ಲಿ ಇಂತಹ ವಾಹನ ಹೆಚ್ಚು ಸುದ್ದಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಪ್ರೀತಿ ಭಟ್, ಗುಣವಂತೆ