Advertisement

ವಾಟ್ ಎ ‘ಲವ್‌ ಲಿ’ ಸಿನ್ಮಾ; ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ವಸಿಷ್ಟ- ಸ್ಟೆಫಿ

03:34 PM Sep 24, 2022 | Team Udayavani |

ಸ್ಯಾಂಡಲ್‌ವುಡ್‌ ನಟ ವಸಿಷ್ಟ ಸಿಂಹ ಸದ್ಯ “ಲವ್‌ ಲಿ’ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಈಗಾಗಲೇ ಸದ್ದಿಲ್ಲದೆ ಮೊದಲನೇ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ “ಲವ್‌ ಲಿ’ ಚಿತ್ರತಂಡ, ಇದೀಗ ಎರಡನೇ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. ಈಗಾಗಲೇ “ಲವ್‌ ಲಿ’ ಸಿನಿಮಾದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ, ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Advertisement

ಎಂ.ಆರ್‌ ರವೀಂದ್ರ ಕುಮಾರ್‌ ನಿರ್ಮಿಸುತ್ತಿರುವ “ಲವ್‌ ಲಿ’ ಸಿನಿಮಾಕ್ಕೆ ಚೇತನ್‌ ಕೇಶವ್‌ ನಿರ್ದೇಶನವಿದೆ. “ಇನ್ನು “ಲವ್‌ ಲಿ’ ಸಿನಿಮಾದ ಹೆಸರೇ ಹೇಳುವಂತೆ, ಇದೊಂದು ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಸಿನಿಮಾ. ಜೊತೆಗೆ ರೌಡಿಸಂ, ಆ್ಯಕ್ಷನ್‌, ಕಾಮಿಡಿ ಕೂಡ ಸಿನಿಮಾದಲ್ಲಿದೆ. ಇದೇ ಮೊದಲ ಬಾರಿಗೆ ವಸಿಷ್ಟ ಸಿಂಹ ತುಂಬ ವಿಭಿನ್ನ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುವುದು ಚಿತ್ರತಂಡದ ಮಾತು.

ಇದನ್ನೂ ಓದಿ:ಅಮಿತ್ ಶಾ ಗೊಂದಲಕ್ಕೊಳಗಾಗಿ ‘ಜಂಗಲ್ ರಾಜ್’ ಎನ್ನುತ್ತಿದ್ದಾರೆ : ಲಾಲು ತಿರುಗೇಟು

ಜಾರ್ಖಂಡ್‌ ಮೂಲದ ಸ್ಟೆಫಿ ಪಟೇಲ್‌ “ಲವ್‌ ಲಿ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ತಮಿಳು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿರುವ ಜೊತೆಗೆ ಕೊರಿಯನ್‌ ವೆಬ್‌ ಸೀರೀಸ್‌ ಒಂದರಲ್ಲೂ ಕಾಣಿಸಿಕೊಂಡಿರುವ ಸ್ಟೆಫಿ ಪಟೇಲ್‌ “ಲವ್‌ ಲಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಈ ಮೂಲಕ ಮತ್ತೂಬ್ಬ ಬಹುಭಾಷಾ ನಟಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ.

ಉಳಿದಂತೆ ಸಾಧುಕೋಕಿಲ, ಸಮೀಕ್ಷಾ, “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್‌, ವಂಶಿಕಾ ಮೊದಲಾದವರು “ಲವ್‌ ಲಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement

“ಲವ್‌ ಲಿ’ ಚಿತ್ರಕ್ಕೆ ಅಶ್ವಿ‌ನ್‌ ಕೆನಡಿ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ. “ಲವ್‌ ಲಿ’ ಸಿನಿಮಾದ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯಕ್ಕೆ “ಲವ್‌ ಲಿ’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next