ಮೆಲ್ಬರ್ನ್: ಸರ್ಬಿಯಾದ ಸ್ಟಾರ್ ಟೆನಿಸಿಗ ನೊವಾಕ್ ಜೊಕೋವಿಕ್ ಮತ್ತು ಗ್ರೀಕ್‌ನ ದೈತ್ಯ ಆಟಗಾರ ಸ್ಟೆಫನಸ್ ಸಿಸಿಪಸ್ ರವಿವಾರ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ಹೋರಾಡಲಿದ್ದಾರೆ.
ಶುಕ್ರವಾರದ ಸೆಮಿಫೈನಲ್ ಕಾಳಗದಲ್ಲಿ ಜೊಕೋಗೆ ಭಾರೀ ಎನಿಸುವ ಸವಾಲು ಎದುರಾ ಗಲಿಲ್ಲ. ಸೆಮಿಫೈನಲ್‌ಗೆ ಅಚ್ಚರಿಯ ಓಟ ಬೆಳೆಸಿದ್ದ ಅಮೆರಿಕದ ಟಾಮಿ ಪೌಲ್ ವಿರುದ್ಧ 7-5, 6-1, 6-2 ಅಂತರದ ಸುಲಭ ಜಯ ಸಾಧಿಸಿದರು.
ಆದರೆ ಸಿಸಿಪಸ್ ಸವಾಲು ಸುಲಭದ್ದಾಗಿರಲಿಲ್ಲ. ತೀವ್ರ ಪೈಪೋಟಿಯೊಡ್ಡಿದ ರಷ್ಯಾದ 18ನೇ ಶ್ರೇಯಾಂಕಿತ ಆಟಗಾರ ಕರೆನ್ ಕಶನೋವ್ ವಿರುದ್ಧ ಗೆಲ್ಲಲು ಭಾರೀ ಹೋರಾಟ ನಡೆಸ ಬೇಕಾಯಿತು. ಈ ಸ್ಪರ್ಧೆ 4 ಸೆಟ್‌ಗಳಿಗೆ ವಿಸ್ತರಿ ಸಲ್ಪಟ್ಟಿತು. 2 ಸೆಟ್ ಟೈ-ಬ್ರೇಕರ್‌ಗೆ ಎಳೆಯ ಲ್ಪಟ್ಟಿತು. ಸಿಸಿಪಸ್ ಇದನ್ನು 7-6 (7 -2), 6-4, 6-7 (6-8), 6-3ರಿಂದ ಗೆದ್ದರು.
ಇದು ನೊವಾಕ್ ಜೊಕೋವಿಕ್ ಕಾಣುತ್ತಿರುವ 10ನೇ ಆಸ್ಟ್ರೇಲಿಯನ್ ಓಪನ್ ಫೈನಲ್. ಹಿಂದಿನ 9 ಸಲವೂ ಅವರು ಚಾಂಪಿಯನ್ ಆಗಿ ಮೂಡಿಬಂದಿರುವುದನ್ನು ಮರೆಯುವಂತಿಲ್ಲ. ಈ ಸಲವೂ ಗೆದ್ದರೆ 22ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳೊಂದಿಗೆ ರಫೆಲ್ ನಡಾಲ್ ದಾಖಲೆಯನ್ನು ಸರಿದೂಗಿಸಿದಂತಾಗುತ್ತದೆ.
ಗೆದ್ದರೆ ನಂಬರ್ ವನ್
ಸ್ಟೆಫನಸ್ ಸಿಸಿಪಸ್ ಈವರೆಗೂ ಒಮ್ಮೆಯೂ ಗ್ರ್ಯಾನ್‌ಸ್ಲಾಮ್ ಕಿರೀಟ ಏರಿಸಿಕೊಂಡವರಲ್ಲ. ಇದು ಕೇವಲ ದ್ವಿತೀಯ ಫೈನಲ್. ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆದದ್ದು ಫ್ರೆಂಚ್ ಓಪನ್‌ನಲ್ಲಿ. ಅದು 2021ರ ಕೂಟ. ಎದುರಾಳಿ ಆಗಿದ್ದವರು ಇದೇ ಜೊಕೋವಿಕ್. 5 ಸೆಟ್‌ಗಳ ಈ ಕಾಳಗದಲ್ಲಿ ಜೊಕೋ ಜಯ ಸಾಧಿಸಿದ್ದರು.
Related Articles
ಫೈನಲ್‌ನಲ್ಲಿ ಜಯ ಸಾಧಿಸಿದರೆ ಸಿಸಿಪಸ್ ವಿಶ್ವದ ನಂ.1 ಟೆನಿಸಿಗನಾಗಿ ಮೂಡಿಬರಲಿದ್ದಾರೆ. ಸದ್ಯ ಅಗ್ರ ಕಿರೀಟ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಬಳಿ ಇದೆ. ಗಾಯಾಳಾದ ಕಾರಣ ಅವರು ಈ ಬಾರಿ ಮೆಲ್ಬರ್ನ್ಗೆ ಬಂದಿಲ್ಲ.