Advertisement
ಭಾರತದಿಂದ ಕಬ್ಬಿಣದ ಅದಿರು ವಿದೇಶಗಳಿಗೆ ರಫ್ತಾಗುತ್ತಿದೆ. ಚೀನದ ಬೇಡಿಕೆ ಈ ವರ್ಷದ ಎಪ್ರಿಲ್-ಜುಲೈ ಅವಧಿಯಲ್ಲಿ ಶೇ. 63ರಷ್ಟು ಹೆಚ್ಚಿದೆ. ಎಡಲ್‌ವೈಸ್ ಸಂಸ್ಥೆಯ ವರದಿ ಪ್ರಕಾರ 2019ರ ಸೆಪ್ಟಂಬರ್‌ನಿಂದ 2020ರ ಸೆಪ್ಟಂಬರ್ ವರೆಗೆ ಚೀನದ ಉಕ್ಕಿನ ಆಮದು ಶೇ. 9ರಷ್ಟು ಏರಿದೆ. ನಮ್ಮಿಂದ ಶೇ. 80ರಷ್ಟು ಕಬ್ಬಿಣದ ಅದಿರು ಚೀನಕ್ಕೆ ರಫ್ತಾಗಿದೆ.
ಉಕ್ಕು, ಸಿಮೆಂಟ್ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ರಿಯಲ್ ಎಸ್ಟೇಟ್ ವೆಚ್ಚ ಇನ್ನಷ್ಟು ಏರಿಕೆ ಉಂಟಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಕ್ರೆಡಾೖ ಉಪಾ ಧ್ಯಕ್ಷ ಸುರೇಶ್ ಹರಿ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಲೇಬೇಕು ಎಂದಿದ್ದಾರೆ.