Advertisement
ಡಾ.ಎಂ.ಶಂಕರ್ ನಾಯ್ಕ ಸ್ಮಾರಕ ಟ್ರಸ್ಟ್‌ವತಿಯಿಂದ ಭಾನುವಾರ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ದಿ.ಡಾ.ಶಂಕರ್ ನಾಯ್ಕ ಅವರ 71ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಶಂಕರ್ ನಾಯ್ಕ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು. ಗ್ರಾಮೀಣ ಜನರ ಸೇವೆಗೆ ಮುಂದಾಗಿದ್ದರು. ಲಂಬಾಣಿ ಸಮುದಾಯದ ಅಭಿವೃದ್ಧಿಗಾಗಿ ದೇಶಾದ್ಯಂತ ಸಂಚಾರ ಮಾಡಿ ಸಂಘಟನೆ ಮಾಡಿದ್ದರು. ರಾಜ್ಯದಲ್ಲಿ ಲಂಬಾಣಿ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದ್ದರೂ, ದೇಶದಲ್ಲಿ ಈ ಸ್ಥಿತಿ ಇಲ್ಲ. ಎಲ್ಲ ರಾಜ್ಯಗಳಲ್ಲೂ ಲಂಬಾಣಿಗಳು ಎಸ್ಸಿ ಪಟ್ಟಿಗೆ ಸೇರಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಥಾಕರ್ ನಾಯ್ಕ ಅವರಿಗೆ ಡಾ.ಶಂಕರ್ ನಾಯ್ಕ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾಮಂತ್ರಿ ಭಾರತ್ ಸಾಧು ಸಮಾಜ್ ಬೋಲಗಿರಿ ಆಶ್ರಮದ ಚೇತನ್‌ಗಿರಿ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವ, ವಿಶ್ರಾಂತ ಕುಲಪತಿ ಡಾ.ರವೀಂದ್ರ, ಶಾಸಕರಾದ ಪಿ.ರಾಜೀವ್, ಡಾ.ಉಮೇಶ್ ಜಿ.ಜಾಧವ್, ಟ್ರಸ್ಟ್‌ನ ಪ್ರಮುಖರಾದ ಸಪ್ತಗಿರಿ ಮೊದಲಾದವರು ಉಪಸ್ಥಿತರಿದ್ದರು.
ಶಂಕರ್ ನಾಯ್ಕ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದರು. ಹೀಗಾಗಿ ಮೂಡಬಿದರೆಯಲ್ಲಿ ಸಿದ್ಧವಾಗುತ್ತಿರುವ 250 ಹಾಸಿಗೆಗಳ ಆಸ್ಪತ್ರೆಗೆ ಅವರ ಹೆಸರನ್ನು ನಾಮಕರಣ ಮಾಡಲಿದ್ದೇವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಅವರ ಹೆಸರಿನಡಿ ಪ್ರತಿ ವರ್ಷ 5 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದ್ದೇವೆ.-ಡಾ.ಎಂ.ಮೋಹನ್ ಆಳ್ವ, ಮುಖ್ಯಸ್ಥ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ