Advertisement

ಸೌಕರ್ಯಗಳಿರುವಲ್ಲಿ ವಿದ್ಯಾರ್ಥಿಗಳಿಲ್ಲ; ವಿದ್ಯಾರ್ಥಿಗಳಿರುವಲ್ಲಿ ಸೌಲಭ್ಯಗಳೇ ಇಲ್ಲ

09:52 AM May 19, 2022 | Team Udayavani |

ಉಳ್ಳಾಲ: ಎಲ್ಲ ಸೌಕರ್ಯಗಳಿರುವ ಶಾಲೆಯಲ್ಲಿ ವಿದ್ಯಾ ರ್ಥಿಗಳ ಸಂಖ್ಯೆ ಕಡಿಮೆಯಿದ್ದರೆ, ವಿದ್ಯಾ ರ್ಥಿಗಳ ಸಂಖ್ಯೆ ಅಧಿಕವಿರುವ ಶಾಲೆಯಲ್ಲಿ ಸೌಲಭ್ಯಗಳೇ ಇಲ್ಲ. ಇದು ಉಳ್ಳಾಲ ಹೋಬಳಿಯ ದೇರಳಕಟ್ಟೆ ಮತ್ತು ಕೊಣಾಜೆ ಕುಂಟಲಗುಳಿ ಸರಕಾರಿ ಶಾಲೆಗಳ ದುಸ್ಥಿತಿ.

Advertisement

ಕಳೆದ ಬಾರಿ 108 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆಯಲ್ಲಿ ಈ ಬಾರಿ ಶಾಲಾರಂಭದ ಪ್ರಥಮ ದಿನದಂದು 130 ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಮೂಲಕ ಹೋಬಳಿಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದ ಶಾಲೆಯೆಂದೇ ಹೆಗ್ಗಳಿಕೆಯನ್ನು ಪಡೆದಿದೆ. ಸರಕಾರ ನಾಲ್ಕು ವರ್ಷಗಳ ಹಿಂದೆ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು , 1ರಿಂದ 4ನೇ ತರಗತಿ ಮತ್ತು 6ರಿಂದ 8ನೇ ತರಗತಿವರೆಗೆ ಸುಮಾರು 600 ವಿದ್ಯಾರ್ಥಿಗಳಿದ್ದಾರೆ.

ಮೂಲ ಸೌಕರ್ಯದ ಕೊರತೆ

ಶಾಲೆಯಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ತರಗತಿ ಕೋಣೆಗಳು, ಪೀಠೊಪಕರಣಗಳು, ಶೌಚಾಲಯದ ವ್ಯವಸ್ಥೆ ಇಲ್ಲ. ಶಾಲಾಭಿವೃದ್ಧಿ ಸಮಿತಿ ಈ ಬಾರಿ ದಾನಿಗಳ ಸಹಾಯ ಪಡೆದು ಪೀಠೊಪಕರಣಗಳನ್ನು ತಂದಿದ್ದರೂ ಈ ಬಾರಿ ಒಂದನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾದ ಕಾರಣ ಪೀಠೊ ಪಕರಣದ ಸಮಸ್ಯೆ ಎದುರಾಗಿದೆ. ಕೊಠಡಿಯ ಕೊರತೆಯಿಂದ 1 ಹಾಲ್‌ 3 ತರಗತಿ ಕೋಣೆಯಾಗಿ ಮಾರ್ಪ ಡಿಸಿದ್ದು, ಪಕ್ಕದ ಪ್ರೌಢಶಾಲೆಯ 4 ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ನೀಡ ಲಾಗಿದೆ. ಸಿಆರ್‌ಪಿ ಕೊಠಡಿಯೂ ವಿದ್ಯಾ ರ್ಥಿಗಳಿಗೆ ಮೀಸಲಾಗಿದೆ. ವಿದ್ಯಾರ್ಥಿ ಗಳ ಸಂಖ್ಯೆ ಹೆಚ್ಚಾಗುತ್ತಾ ಬಂದ ಕಾರಣ ಕಳೆದ ವರ್ಷದಿಂದ ಮೂಲ ಸೌಕರ್ಯ ಅಭಿವೃದ್ಧಿಗೆ ಜನಪ್ರತಿಧಿಗಳಿಗೆ, ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದು, ದಾನಿಗಳ ಸಹಾಯದಿಂದ ಕೆಲವು ಮೂಲ ಸೌಕರ್ಯ ವನ್ನು ಮಾಡಿದ್ದರೂ ಅನುದಾನದ ಅಗತ್ಯ ಇದೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್‌ ಹನೀಫ್‌.

Advertisement

ಶಿಕ್ಷಕರ ಕೊರತೆ

ಶಾಲೆಯಲ್ಲಿ ಐದು ಮಂದಿ ಖಾಯಂ ಶಿಕ್ಷಕರಿದ್ದು, ಈ ಬಾರಿ ಆರಂಭದಿಂದಲೇ 3 ಅತಿಥಿ ಶಿಕ್ಷಕರನ್ನು ಇಲಾಖೆ ನೀಡಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾ.ಶಾಲೆಗೆ ಮೂವರು ಶಿಕ್ಷಕರ ಅಗತ್ಯ ಇದ್ದು ಒಬ್ಬರು ಮಾತ್ರ ಇದ್ದಾರೆ. ಒಂದನೇಯಿಂದ 4ನೇ ತರಗತಿಯವರೆಗೆ 14 ಶಿಕ್ಷಕರ ಅಗತ್ಯತೆಯಿದ್ದು, ಪ್ರಸ್ತುತ 7 ಶಿಕ್ಷಕರಿದ್ದಾರೆ. ಒಟ್ಟು ಈ ಶಾಲೆಗೆ 9 ಶಿಕ್ಷಕ ಕೊರತೆಯಿದೆ. ಒಟ್ಟು 13 ವಿದ್ಯಾರ್ಥಿಗಳು ಕೊಣಾಜೆ ಕುಂಟಲಗುಳಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಇರುವ ವಿದ್ಯಾರ್ಥಿಗಳ ಸಂಖ್ಯೆ 13. ಆದರೆ ಪ್ರಥಮ ದಿನ ಶಾಲೆಗೆ ಬಂದವರು ನಾಲ್ವರು ಮಾತ್ರ. ಓರ್ವ ಶಿಕ್ಷಕರನ್ನು ಹೊಂದಿರುವ ಈ ಶಾಲೆಯಲ್ಲಿ ಐದು ತರಗತಿಯನ್ನು ಒಂದೇ ಕೊಠಡಿಯಲ್ಲಿ ನಿರ್ವಹಿಸಲಾಗುತ್ತಿದೆ. ಶಾಲಾರಂಭವನ್ನು ಆಚರಣೆ ಮಾಡಿದರೂ ವಿದ್ಯಾರ್ಥಿಗಳ ಕಲರವ ಇಲ್ಲದ ಈ ಶಾಲೆಗೆ ಇಬ್ಬರು ವಿದ್ಯಾರ್ಥಿಗಳು ಸೇರ್ಪಡೆಯಾಗುವ ಭರವಸೆ ನೀಡಿದ್ದು, ಒಂದೆರಡು ದಿನಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳು ದಾಖಲಾತಿ ಪಡೆಯಲಿದ್ದಾರೆ ಎನ್ನುತ್ತಾರೆ ಶಾಲಾ ಶಿಕ್ಷಕಿ. ಕೆಲವು ವರ್ಷಗಳಿಂದ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಕೂಲಿ ಕಾರ್ಮಿಕರ ವಿದ್ಯಾರ್ಥಿಗಳು ಕೋವಿಡ್‌ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಿದ್ದರಿಂದ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ. ಆದರೆ ಇಲ್ಲಿ ಅಗತ್ಯ ಬೇಕಾದ ಎಲ್ಲ ಸೌಲಭ್ಯ ಇದೆ.

ಕಲಿಕಾ ವಿಧಾನದಿಂದ ಆಕರ್ಷಣೆ

ಎರಡು ವರ್ಷಗಳಿಂದ ಈ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳ ಹೆತ್ತವರಿಗೆ ಬೇರೆ ಶಾಲೆಗಳಿಗೆ ತೆರಳುವಂತೆ ಮನವೊಲಿಸಲಾಗುತ್ತಿದೆ. ಇಲ್ಲಿನ ಶಿಕ್ಷಕರ ಕಲಿಕಾ ವಿಧಾನ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ಶಿಕ್ಷಕರ ಕೊರತೆ ನೀಗಿಸಿದರೆ ಇನ್ನಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಆಲಿಸ್‌ ವಿಮಲಾ, ಮುಖ್ಯ ಶಿಕ್ಷಕಿ ದೇರಳಕಟ್ಟೆ ಹಿ.ಪ್ರಾ. ಶಾಲೆ

ಶಾಸಕರಿಗೆ ಮನವಿ

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಮೂಲ ಸೌಕರ್ಯಕೆ ಹೆಚ್ಚಿನ ಆದ್ಯತೆ ನೀಡಲು ಶಾಸಕ ಯು.ಟಿ.ಖಾದರ್‌ ಅವರಿಗೆ ಮನವಿ ಮಾಡಿದ್ದು, ಶಾಸಕರು ಒಪ್ಪಿಕೊಂಡಿದ್ದಾರೆ. ಈ ಬಾರಿ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗುವುದು. ಅಬ್ದುಲ್‌ ಸತ್ತಾರ್‌, ಬೆಳ್ಮ ಗ್ರಾ.ಪಂ. ಅಧ್ಯಕ್ಷ

 ವಸಂತ್‌ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next