Advertisement

Parliament ಪ್ರತಿಮೆಗಳ ಸ್ಥಳಾಂತರ: ಕಾಂಗ್ರೆಸ್‌ ಕಿಡಿ

12:31 AM Jun 07, 2024 | Team Udayavani |

ಹೊಸದಿಲ್ಲಿ: ಸಂಸತ್‌ ಭವನದ ಆವರಣ ದಲ್ಲಿರುವ ಮಹಾತ್ಮ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌, ಛತ್ರಪತಿ ಶಿವಾಜಿ ಪ್ರತಿಮೆಗಳನ್ನು ಸ್ಥಳಾಂತರಗೊ ಳಿಸಲಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್‌ ವಿರೋಧಿಸಿ ಬಿಜೆಪಿ ವಿರುದ್ಧ ಕಿಡಿಕಾರಿದೆ.

Advertisement

ಬಿಜೆಪಿಯ ಈ ಕಾರ್ಯ ಅತ್ಯಂತ ಹೀನವಾಗಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಕಿಡಿಕಾರಿದ್ದಾರೆ. ಚುನಾವಣೆಯಲ್ಲಿ ಮಹಾರಾಷ್ಟ್ರದ ಜನತೆ ಬಿಜೆಪಿ ಪರ ಮತ ನೀಡಿಲ್ಲ. ಹಾಗಾಗಿ ಶಿವಾಜಿ, ಅಂಬೇಡ್ಕರ್‌ ಮೂರ್ತಿ ಸ್ಥಳಾಂತರವಾಗಿದೆ. ಗುಜ ರಾತ್‌ನಲ್ಲೂ ಬಿಜೆಪಿಗೆ ಸಂಪೂರ್ಣ ಗೆಲುವು ಬಾರದ್ದಕ್ಕೆ ಗಾಂಧಿ ಪ್ರತಿಮೆ ಯನ್ನೂ ಸ್ಥಳಾಂತರಿಸಲಾಗಿದೆ. ಒಂದು ವೇಳೆ ಬಿಜೆಪಿ 400 ಸ್ಥಾನ ಗೆದ್ದಿದ್ದರೆ, ಸಂವಿಧಾನವನ್ನೇ ಬದಲಿಸುತ್ತಿದ್ದರು ಎಂದು ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಆರೋಪಿಸಿದ್ದಾರೆ.

ವಾಸ್ತವವಾಗಿ, 18ನೇ ಲೋಕಸಭೆಯ ಮೊದಲ ಕಲಾಪಕ್ಕೆ ಸಜ್ಜುಗೊಳಿಸಲು ಸಂಸತ್‌ ಆವರಣದಲ್ಲಿ ಮರುನಿರ್ಮಾ ಣ ಕಾಮಗಾರಿ ಚಾಲನೆಯಲ್ಲಿದೆ. ಎಲ್ಲ ಪ್ರತಿಮೆಗಳು ಒಂದೇ ಕಡೆ ಇರಲಿ ಎಂಬ ಉದ್ದೇಶದಿಂದ ಎಲ್ಲ ಪ್ರತಿಮೆಗಳನ್ನು ಹಳೇ ಸಂಸತ್ತಿನ ಐದನೇ ದ್ವಾರದ ಬಳಿ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next