ನವದೆಹಲಿ: ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ ಬಳಿಯಲ್ಲಿದ್ದ 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ನೆನಪಿಗಾಗಿ ನಿರ್ಮಿಸಲಾಗಿದ್ದ ಸ್ಮಾರಕವನ್ನು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರಿಸಲಾಗಿದೆ.
ಕೆಲವು ತಿಂಗಳುಗಳ ಹಿಂದೆ ಇಂಡಿಯಾ ಗೇಟ್ ಬಳಿಯಿದ್ದ ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರಿಸಲಾಗಿತ್ತು. ಈಗ, ಹುತಾತ್ಮರ ನೆನಪಿಗಾಗಿ ಇದ್ದ ತಲೆಕೆಳಗಾದ ಬಂದೂಕು ಹಾಗೂ ಅದರ ಮೇಲೆ ಟೋಪಿ ಇದ್ದ ಸ್ಮಾರಕವನ್ನೂ ಸ್ಥಳಾಂತರಿಸಲಾಗಿದೆ.
1971ರ ಯುದ್ಧ ಸೇರಿದಂತೆ ಮೊದಲ ಮಹಾಯುದ್ಧ ಹಾಗೂ ಇನ್ನಿತರ ಯುದ್ಧಗಳಲ್ಲಿ ಮಡಿದ ಭಾರತದ ವೀರ ಯೋಧರ ಸ್ಮರಣೆಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿತ್ತು.