ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ 50 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಮೂಲಕ ಮೂರ್ತಿ ಮತ್ತೊಮ್ಮೆ ರವಿವಾರ ವರ್ಣರಂಜಿತವಾಗಿ ಲೋಕಾರ್ಪಣೆಗೊಂಡಿತು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಕೋಟೆಯಲ್ಲಿ ಭಾಗವಹಿಸಿದ್ದಾರೆ. ರಾಜಹಂಸಗಡ ಕೋಟೆಯ ಎಲ್ಲೆಡೆಯೂ ಭಗವಾಮಯವಾಗಿದ್ದು, ಭಗವಾಧ್ವಜಗಳು ರಾರಾಜಿಸುತ್ತಿವೆ.
ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಶಂಭುರಾಜೆ ಭೋಸಲೆ, ಲಾತೂರನ ಕಾಂಗ್ರೆಸ್ ಶಾಸಕ ಧೀರಜ್ ದೇಶಮುಖ, ಕೊಲ್ಲಾಪುರ ಶಾಸಕ ಸತೇಜ್‌ಉರ್ಫ ಬಂಟಿ ಪಾಟೀಲ ಸೇರಿದಂತೆ ಅನೇಕ ಗಣ್ಯರು ಶಿವಾಜಿಯ ಭವ್ಯ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿದರು.
ಅತ್ಯಂತ ಸುಂದರ ಹಾಗೂ ಅದ್ಧೂರಿಯಾಗಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು. ಢೋಲ್‌ತಾಷಾ, ಹಲಗಿ ವಾದನ ಸೇರಿದಂತೆ ವಿವಿಧ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ಮೆರವಣಿಗೆ ಹಾಗೂ ಧ್ವಜಾರೋಹಣ ಮಾಡಿ ಬಳಿಕ ಪ್ರತಿಮೆ ಉದ್ಘಾಟಿಸಲಾಯಿತು.