ಬೆಂಗಳೂರು: ವಿಧಾನ ಸೌಧದ ಮುಂದೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕೆಂಪೇಗೌಡರ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತ್ಯುತ್ಸವ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾಡಿನ ಶಕ್ತಿ ಕೇಂದ್ರ ಇರುವ ರಾಜಧಾನಿಯಲ್ಲಿ ಅದರ ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಯಾವತ್ತೋ ಆಗಬೇಕಿತ್ತು. ಈಗ ಕಾಲ ಕೂಡಿಬಂದಿದೆ. ಮುಂದಿನ ವರ್ಷ ಕೆಂಪೇಗೌಡರ ಜಯಂತಿ ಆಚರಣೆಗೆ ವೇಳೆ ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೊಳ್ಳಲಿದೆ. 2001ರಲ್ಲಿ ಈ ವಿಚಾರವಾಗಿ ಬೆಂಗಳೂರು ನಗರ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಿ, 12 ಲಕ್ಷ ರೂ. ಮೀಸಲಿಡಲಾಗಿತ್ತು. ಕಾರಣಾಂತರಗಳಿಂದ ಅದು ಸಾಕಾರಗೊಂಡಿರಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಈಗಿರುವ ಪ್ರತಿಮೆಗಳು
ವಿಧಾನಸೌಧ – ವಿಕಾಸಸೌಧ, ಶಾಸಕರ ಭವನದ ಆವರಣದಲ್ಲಿ ಈಗಾಗಲೇ ಮಹಾತ್ಮಾ ಗಾಂಧಿ, ಡಾ| ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವ್‌ರಾಂ, ನೆಹರೂ, ಲಾಲ್ ಬಹದ್ದೂರ್ ಶಾಸಿŒ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಕೆ.ಸಿ. ರೆಡ್ಡಿ, ಬೋಸ್, ನಿಜಲಿಂಗಪ್ಪ, ವಾಲ್ಮೀಕಿ ಮಹರ್ಷಿ, ಕನಸದಾಸರ ಪ್ರತಿಮೆಗಳಿವೆ.
Related Articles