Advertisement

ಶಿವಮೊಗ್ಗದಲ್ಲಿ ರಾಜ್ಯದ ಮೊದಲ ಮೈಸ್‌ ಕಾಲೋನಿ!

10:05 AM Dec 07, 2019 | mahesh |

ಶಿವಮೊಗ್ಗ: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ, ಹಂದಿಗೋಡು, ನಿಫಾ…ಹೀಗೆ ಅನೇಕ ಕಾಯಿಲೆಗಳು ಪ್ರತಿ ವರ್ಷ ಕಾಣಿಸಿಕೊಳ್ಳುತ್ತಿವೆ. ನಿಗದಿತ ಔಷಧವಿಲ್ಲದ ಈ ಎಲ್ಲ ಕಾಯಿಲೆಗಳಿಗೆ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅನೇಕ ಪ್ರಯೋಗಗಳನ್ನು ಮಾಡುತ್ತಿದೆ. ಇಂತಹ
ಪ್ರಯೋಗಗಳಿಗಾಗಿಯೇ ನಗರದಲ್ಲಿ ರಾಜ್ಯದ ಮೊದಲ “ಮೈಸ್‌ ಕಾಲೋನಿ’ ಆರಂಭಗೊಳ್ಳುತ್ತಿದೆ.

Advertisement

ಒಂದು ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ಸಿದ್ದವಾಗಿದ್ದು, ಅಗತ್ಯ ಯಂತ್ರೋಪಕರಣಗಳನ್ನು ತಂದು ಜೋಡಿಸಬೇಕಿದೆ. ಈ ಕಟ್ಟಡ ಪೂರ್ಣ ಪ್ರಮಾಣದಲ್ಲಿ ಹವಾ ನಿಯಂತ್ರಿತವಾಗಿರಲಿದೆ. ಪ್ರಯೋಗಕ್ಕೆ ಅಗತ್ಯ ವಾಗಿರುವ ಇಲಿ ಮರಿಗಳ ಸಾಕಣೆ, ಸಂತಾನ ಅಭಿವೃದ್ಧಿ ಹಾಗೂ ಆಹಾರ ತಯಾರಿಕೆ ಸೇರಿದಂತೆ ಆಯಾ ಉದ್ದೇಶಗಳಿಗೆ ಅನುಗುಣವಾಗಿ ಪ್ರತಿಯೊಂದಕ್ಕೂ ಪ್ರತ್ಯೇಕ ಕೋಣೆಗಳನ್ನು ಮೀಸಲಿಡಲಾಗುತ್ತಿದೆ.

ಪರೀಕ್ಷೆಗೆ ಅನುಕೂಲ: ಈಗಾಗಲೇ ನಗರದ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯದ ಆವರಣದಲ್ಲಿ ಹಲವು ವರ್ಷಗಳಿಂದ ಇಲಿಗಳ ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿದೆ. ಪ್ರಯೋಗಕ್ಕೆ ಅಗತ್ಯವಿರುವ 3-4 ವಾರದ ಇಲಿಗಳನ್ನು ಬೆಂಗಳೂರಿನ ಹೆಬ್ಟಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ (ಐಎಎಚ್‌ಆ್ಯಂಡ್‌ ವಿಬಿ)ಯಿಂದ 100 ರೂ.ಗೆ ಒಂದರಂತೆ ಖರೀದಿ ಮಾಡಲಾಗುತ್ತಿದೆ. ಶಿವಮೊಗ್ಗದಲ್ಲಿ ಪ್ರತ್ಯೇಕ “ಮೈಸ್‌ ಕಾಲೋನಿ’ ಆದ ನಂತರ ಹೊಸದಾಗಿ ಪತ್ತೆಯಾಗುತ್ತಿರುವ
ಕಾಯಿಲೆಗಳಿಗೆ ಲಸಿಕೆಗಳ ಪರೀಕ್ಷೆಗೆ ಅನುಕೂಲವಾಗಲಿದೆ. ಮಂಗನ ಕಾಯಿಲೆ ಜತೆಗೆ ಡೆಂಘೀ, ಚಿಕೂನ್‌ ಗುನ್ಯಾ, ನಿಫಾ ಇತರ ರೋಗಗಳ ಬಗ್ಗೆಯೂ ಅಧಿಕ ಒತ್ತು ನೀಡಬಹುದಾಗಿದೆ. ಕೇವಲ ಸಂಶೋಧನೆಯಷ್ಟೇ ಅಲ್ಲದೇ ಬೇರೆ ವೆಟರ್ನರಿ ಕಾಲೇಜುಗಳು-ಇತರ ಸಂಶೋಧನೆಗಳಿಗೆ ಬೇಕಾದ ಅಗತ್ಯ ಇಲಿಗಳನ್ನು ಮಾರಾಟ ಮಾಡಬಹುದಾಗಿದೆ. ಇದರಿಂದ ಇಲಾಖೆಗೆ ಆದಾಯವೂ ಸಿಗಲಿದೆ. ಪ್ರಾಥಮಿಕವಾಗಿ ಸಂಶೋಧನೆಗಷ್ಟೇ ಇಲಿಗಳನ್ನು ಬಳಸಿಕೊಂಡು ನಂತರ ಮಾರಾಟದ ಬಗ್ಗೆಯೂ ಚಿಂತನೆ ನಡೆದಿದೆ.

ಕೆಲಸ ಹೇಗೆ?: ಶಿವಮೊಗ್ಗದ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ 1957ರಲ್ಲಿ ಮೊದಲ ಬಾರಿಗೆ ಮಂಗನ
ಕಾಯಿಲೆ ವೈರಸ್‌ ಕಾಣಿಸಿಕೊಂಡಿತ್ತು. ಅನಂತರ ಇದಕ್ಕೆ ಕೆಎಫ್‌ಡಿ ಎಂದು ಹೆಸರಿಡಲಾಯಿತು. ಅಲ್ಲಿಂದ
ಇಲ್ಲಿವರೆಗೂ ಈ ಕಾಯಿಲೆಗೆ ನಿಗದಿತ ಔಷಧ ಇಲ್ಲ. ಕೆಎಫ್‌ಡಿ ಇತರೆ ಕಾಯಿಲೆಗಳಿಗೆ ಆವಿಷ್ಕರಿಸಿದ
ಲಸಿಕೆಯನ್ನು ಮೊದಲು ಮಂಗ ಹಾಗೂ ಬಿಳಿ ಇಲಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಈ ಕಾಯಿಲೆ
ಕಾಣಿಸಿಕೊಂಡ ನಂತರ ಲಸಿಕೆಗಳ ಪರೀಕ್ಷೆಗಾಗಿ 1984ರಲ್ಲಿ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಬಿಳಿ ಇಲಿ ಮತ್ತು ಮಂಗಗಳ ಕಾಲೋನಿಯನ್ನು ಆರಂಭಿಸಲಾಗಿತ್ತು. ಒಂದು ಬ್ಯಾಚ್‌ ಲಸಿಕೆ ಪರೀಕ್ಷೆಗೆ 100-150 ಇಲಿಗಳು ಬೇಕಾಗುತ್ತದೆ. 2,000ರಲ್ಲಿ ಇದನ್ನು ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯದ (ವಿಡಿಎಲ್‌) ಆವರಣಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಅಂತಾರಾಷ್ಟ್ರೀಯ ನಿಯಮಾವಳಿಗೆ
ಅನುಗುಣವಾಗಿ ಪ್ರಯೋಗಾಲಯ ಇಲ್ಲದ ಕಾರಣ ಇಲಿಗಳ ಅಭಿವೃದಿಟಛಿಗೆ ಅವಕಾಶ ಕೊಟ್ಟಿರಲಿಲ್ಲ.
ಪ್ರಯೋಗಕ್ಕೆ ಬೇಕಾದ ಇಲಿಗಳನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗಿತ್ತು. ಈ ಕೊರತೆಯನ್ನು “ಮೈಸ್‌
ಕಾಲೋನಿ’ ನೀಗಿಸಲಿ¨

ಅಂತಾರಾಷ್ಟ್ರೀಯ ಗುಣಮಟ್ಟದಂತೆ ಕಾಲೋನಿ ಅಭಿವೃದ್ಧಿಪಡಿಸಲಾಗುತ್ತಿದೆ. ಲಸಿಕೆ ಜತೆ ಇತರೆ
ಪರೀಕ್ಷೆಗಳಿಗೂ ಇದು ಅನುಕೂಲವಾಗಲಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಯಂತ್ರೋಪಕರಣಗಳನ್ನು ಸದ್ಯದಲ್ಲೇ ತರಲಾಗುವುದು. ಕೆಲವೇ ತಿಂಗಳಲ್ಲಿ ಕಾಲೋನಿ ಆರಂಭಗೊಳ್ಳಲಿದೆ.
● ಡಾ. ಎಸ್‌.ಕೆ. ಕಿರಣ್‌, ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯದ ನಿರ್ದೇಶಕ

Advertisement

● ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next