Advertisement

ಪುರಸಭೆ ಅಭಿವೃದ್ಧಿ ಕೆಲಸಗಳು ಸಂಪೂರ್ಣ ವಿಫಲ : ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪ

02:56 PM Mar 17, 2020 | Suhan S |

ಕಾಪು : ಪುರಸಭೆಯಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಂಠಿತಗೊಂಡಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.

Advertisement

ತನ್ನ ಶಾಸಕತ್ವದ ಅವಧಿಯಲ್ಲಿ ಬಿಡುಗಡೆಗೊಳಿಸಿರುವ ಅಭಿವೃದ್ಧಿ ಕೆಲಸಗಳನ್ನೂ ಸರಿಯಾಗಿ ಅನುಷ್ಟಾನಗೊಳಿಸುವಲ್ಲಿ ಹಾಲಿ ಶಾಸಕ ಲಾಲಾಜಿ ಮೆಂಡನ್ ವಿಫಲವಾಗಿದ್ದಾರೆ ಎಮದು ಆರೋಪಿಸಿದರು. ಪುರಸಭೆಯ ಬಗ್ಗೆ ಶಾಸಕರ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆಗೆ ಸಿದ್ದತೆವಾಗಿದ್ದೇವೆ  ಮಾ. 21 ಶನಿವಾರ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ಎಚ್ಚರಿಕೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮೂಲ ಸೌಕರ್ಯಗಳ ಜೋಡಣೆ, ಯೋಜನೆಗಳ ಅನುಷ್ಟಾನ, ಭರವಸೆಗಳ ಈಡೇರಿಕೆ ಸಹಿತವಾಗಿ ಎಲ್ಲಾ ವಿಧದಲ್ಲೂ ಎದ್ದು ಶಾಸಕರ ವಿಫಲರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಮಹಮ್ಮದ್ ಸಾಧಿಕ್, ಮನಹರ್ ಇಬ್ರಾಹಿಂ, ಹರೀಶ್ ನಾಯಕ್, ದೀಪಕ್ ಎರ್ಮಾಳ್, ಅಮೀರುದ್ದೀನ್, ಪುರಸಭಾ ಸದಸ್ಯರಾದ ಎಚ್ ಉಸ್ಮಾನ್, ಅಬ್ದುಲ್ ಹಮೀದ್, ಶಾಬು ಸಾಹೇಬ್, ಮಹಮ್ಮದ್ ಇಮ್ರಾನ್, ಸುರೇಶ್ ದೇವಾಡಿಗ, ಮಾಲಿನಿ ಶೆಟ್ಟಿ, ಸೌಮ್ಯ, ವಿಜಯಲಕ್ಷ್ಮಿ, ಅಶ್ವಿನಿ, ಸುಲೋಚನ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next