Advertisement

Statement ವಿವಾದ; ಪತ್ರಕರ್ತರ ಜತೆ ಹೋಲಿಕೆ ಸಲ್ಲ: ಉದಯನಿಧಿಗೆ ಸುಪ್ರೀಂ

12:40 AM Apr 02, 2024 | Team Udayavani |

ಹೊಸದಿಲ್ಲಿ: ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಪತ್ರಕರ್ತರ ವಿರುದ್ಧ ದಾಖಲಾದ ಪ್ರಕರಣಗಳಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಉದಯನಿಧಿ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅವುಗಳನ್ನು ಸಂಯೋ ಜಿಸಿ ಒಂದೆಡೆ ದಾಖಲಿಸಲು ಆದೇಶಿಸುವಂತೆ ಕೋರಿ ಉದಯನಿಧಿ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದರು. ಇಂಥದ್ದೇ ಪ್ರಕರಣ ಗಳನ್ನು ಎದುರಿಸು ತ್ತಿರುವ ಪತ್ರಕರ್ತ ರಾದ ಅರ್ನಬ್‌ ಗೋಸ್ವಾಮಿ, ಮೊಹಮ್ಮದ್‌ ಜುಬೈರ್‌ ಅವರ ವಿರುದ್ಧದ ಎಫ್ಐಆರ್‌ ಗಳನ್ನು ಒಗ್ಗೂಡಿಸಿರುವ ಉದಾಹರಣೆಗಳನ್ನೂ ನೀಡಿದ್ದರು. ನ್ಯಾ| ಸಂಜೀವ್‌ ಖನ್ನಾ, ನ್ಯಾ|  ದೀಪಂಕರ್‌ ದತ್‌ ಅವರ ಪೀಠ ಅರ್ಜಿ ಆಲಿಸಿದ್ದು, ಉದಯನಿಧಿ ಸ್ವಯಂ ಹೇಳಿಕೆ ನೀಡಿದ್ದಾರೆ. ಆ ಪ್ರಕರಣ ಟಿಆರ್‌ಪಿಗಾಗಿಯೋ ಮಾಲ ಕರ ಆದೇಶದಂತೆ ನಡೆಯಲೋ ಮಾಧ್ಯಮದವರು ನೀಡಿದ್ದ ಹೇಳಿಕೆಯ ಪ್ರಕರಣಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದೆ.

ಸೆಂಥಿಲ್‌ಗೆ ಜಾಮೀನು: ಇ.ಡಿ.ಗೆ ಸುಪ್ರೀಂ ನೋಟಿಸ್‌

ಅಕ್ರಮ ಹಣದ ವರ್ಗಾವಣೆ ಪ್ರಕರಣದಲ್ಲಿ ಕಳೆದ ವರ್ಷ ಬಂಧನಕ್ಕೆ ಒಳಗಾಗಿರುವ ತಮಿಳು ನಾಡು ಮಾಜಿ ಸಚಿವ ಸೆಂಥಿಲ್‌ ಬಾಲಾಜಿಗೆ ಜಾಮೀನು ನೀಡುವ ವಿಚಾ ರದಲ್ಲಿ ಜಾರಿ ನಿರ್ದೇ ಶನಾಲಯದ ಪ್ರತಿಕ್ರಿಯೆ ಯನ್ನು ಸುಪ್ರೀಂ ಕೋರ್ಟ್‌ ಕೇಳಿದೆ. ಪ್ರಕರಣ ದಲ್ಲಿ ಜಾಮೀನು ಕೋರಿ ಸೆಂಥಿಲ್‌ ಬಾಲಾಜಿ ಸುಪ್ರೀಂ ಕೋರ್ಟ್‌ ಮೆಟ್ಟಿಲು ಏರಿದ್ದು ನ್ಯಾ| ಅಭಯ್‌ ಎಸ್‌. ಓಕಾ ಮತ್ತು ನ್ಯಾ|ಉಜ್ಜಲ್‌ ಭುಯಾನ್‌ ಪೀಠ, ಇ.ಡಿ.ಗೆ ನೋಟಿಸ್‌ ಜಾರಿ ಮಾಡಿ ಎ.29ರ ಒಳಗೆ ಉತ್ತರಿಸುವಂತೆ ಸೂಚಿಸಿದೆ. ಎಐಎಡಿಎಂಕೆ ಅವಧಿ ಯಲ್ಲಿ ಸಾರಿಗೆ ಸಚಿವರಾಗಿದ್ದ ಸೆಂಥಿಲ್‌ ಬಾಲಾಜಿಯನ್ನು ನೌಕರಿ ಗಾಗಿ ಹಣ ಪಡೆದ ಪ್ರಕರಣದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಇ.ಡಿ. ಬಂಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next