Advertisement

ಯುಎಇ: 14 ಕೋಟಿ ಜನರಿಗೆ ಆಹಾರ ಸಂಕಷ್ಟ: ಕ್ರಿಸ್ಟಾಲಿನಾ ಜಾರ್ಜಿವಾ

12:31 AM Oct 04, 2022 | Team Udayavani |

ದುಬಾೖ: ಅರಬ್‌ ಸಂಯುಕ್ತ ಸಂಸ್ಥಾನದಲ್ಲಿರುವ ಸರಿ ಸುಮಾರು 14.1 ಕೋಟಿ ಜನರು ಜಾಗತಿಕ ಆರೋಗ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕ್ರಿಸ್ಟಾಲಿನಾ ಜಾರ್ಜಿವಾ ಅವರು ಸೋಮವಾರ ತಿಳಿಸಿದ್ದಾರೆ.

Advertisement

ಸೌದಿ ಅರೇಬಿಯಾದ ರಿಯಾಧ್‌ ನಗರದಲ್ಲಿ ಸಮಾವೇಶವೊಂದರಲ್ಲಿ ಭಾಗವಹಿಸಿದ್ದ ಅವರು ಈ ಮಾತುಗಳನ್ನಾಡಿದ್ದಾರೆ. “ಜಾಗತಿಕ ಆಹಾರ ಸಮಸ್ಯೆಯು ವ್ಯಾಪಕವಾಗಿ ಹರಡಿದೆ.

ವಿಶ್ವಾದ್ಯಂತ ಒಟ್ಟು 48 ರಾಷ್ಟ್ರಗಳ ಜನರು ಈ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ. ಅದರಲ್ಲಿ ಅರ್ಧದಷ್ಟು ರಾಷ್ಟ್ರಗಳು ತುಂಬಾ ದುರ್ಬಲವಾಗಿದೆ’ ಎಂದು ಕ್ರಿಸ್ಟಾಲಿನಾ ಅವರು ಹೇಳಿದ್ದಾರೆ.

ಪರಿಸ್ಥಿತಿಯನ್ನು ಸರಾಗಗೊಳಿಸುವ ಸಲುವಾಗಿ ಆಹಾರ ವ್ಯಾಪಾರ ನಿರ್ಬಂಧಗಳ ವಿರುದ್ಧ ಹೋರಾಡುವುದಕ್ಕೆ ಐಎಂಎಫ್ ಕೂಡ ಸೇರಿಕೊಳ್ಳುತ್ತದೆ ಎಂದೂ ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next