Advertisement
ವಿಯಟ್ನಾಂ ಯೋಗ: ಯೋಗದಿಂದ ಬದುಕು ಕಟ್ಟಿಕೊಳ್ಳಲು ವಿದೇಶಕ್ಕೆ ಹಾರಿದ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ ಸಂತೋಷ ಉಮಚಗಿ,ಧಾರವಾಡದ ದೇವರಾಜ ದೇವಾಡಿಗ ಹಾಗೂ ಕುಂದಗೋಳದ ಮಂಜುನಾಥ ಕಲ್ಮಠ ಎಂಬ ಯೋಗಪಟುಗಳು ವಿಯೆಟ್ನಾಂ ದೇಶದಲ್ಲಿ ಆರಂಭಿಸಿರುವ “ಶುಭ ಯೋಗ’ ಹೆಸರಿನ ಎರಡು ಕೇಂದ್ರಗಳು ಆ ದೇಶದ ಜನರ ಪ್ರೀತಿಗೆ ಪಾತ್ರವಾಗಿವೆ. ಸದ್ಯ ಈ ಎರಡೂ ಕೇಂದ್ರದಲ್ಲಿ ದಿನ ನಿತ್ಯ 600 ಜನ ಯೋಗಾಭ್ಯಾಸಕ್ಕೆ ಭೇಟಿ ನೀಡುತ್ತಿದ್ದಾರೆ.
Related Articles
Advertisement
ಗುರು ಇಲ್ಲದೇ ಯೋಗ ಗುರಿ ಸಾಧಿಸಿದರು : ಡಾ| ಬಾಬು ನಾಗೂರ ವಿಜಯಪುರ ಜಿಲ್ಲೆಯ ಜನರಿಗೆ ಕ್ರೀಡಾ ರಂಗದಲ್ಲಿ ಎಲ್ಲರಿಗೂ ಚಿರಪರಿಚಿತ ಹೆಸರು. 40 ವರ್ಷಗಳ ಹಿಂದೆ ಫುಟ್‌ಬಾಲ್ ಆಟಗಾರರಾಗಿದ್ದ ನಾಗೂರ ಅವರ ಬೀದಿಯ ಗೋಡೆಯಲ್ಲಿದ್ದ ಯೋಗ ಭಿತ್ತಿಪತ್ರದಿಂದ ಸ್ಫೂರ್ತಿಗೊಂಡು ಗುರು ಇಲ್ಲದೇ ಯೋಗ ಸಾಧನೆ ಮಾಡಿದರು. ಚೀನಾ, ಮಲೇಷಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಜರುಗಿದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಹಾಗೂ ನಗದು ಬಹುಮಾನ ಪಡೆದಿದ್ದಾರೆ. ಕಳೆದ ಮೇ ತಿಂಗಳಲ್ಲಿ ಥೈಲ್ಯಾಂಡ್ ದೇಶದಲ್ಲಿ ಜರುಗಿದ ಅಂತಾರಾಷ್ಟ್ರೀಯ ಯೋಗ ಅಥ್ಲೆಟಿಕ್ ಸ್ಪರ್ಧೆಯ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಇವರ ಯೋಗ ಸಾಧನೆಗೆ ಸಾಕ್ಷಿ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಯೋಗ ಡಿಪ್ಲೊಮಾ ಕೋರ್ಸ್ ಆರಂಭಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಯೋಗಾಂದೋಲಕ: ಯೋಗ ಕಲಿಕೆಯನ್ನು ಆಂದೋಲ ನವನ್ನಾಗಿಸಿದ ಕೀರ್ತಿ ಕೋಲಾರ ಜಿಲ್ಲೆಯ ಕಾಮಧೇನಹಳ್ಳಿ ಚೌಡಪ್ಪರಿಗೆ ಸಲ್ಲುತ್ತದೆ. ಮಲ್ಲಾಡಹಳ್ಳಿ ಶ್ರೀರಾಘವೇಂದ್ರಸ್ವಾಮಿಜಿ ಮಠಕ್ಕೆ ಹೋಗಿ ಯೋಗಾಭ್ಯಾಸವನ್ನು ಶಿಸ್ತುಬದ್ಧವಾಗಿ ಕಲಿತು ವಾಪಸ್ಸಾದ ಚೌಡಪ್ಪ, ಡಾ.ಕೆ. ಎಂ.ಜೆ.ಮೌನಿ ಮತ್ತು ಡಾ.ಕೃಷ್ಣಮೂರ್ತಿ ಇತರರೊಂದಿಗೆ ಕೂಡಿ ಕಾಮಧೇನು ಯೋಗಾಶ್ರಮ ಸ್ಥಾಪಿಸಿ ಯೋಗಾಭ್ಯಾಸ ತರಗತಿಗಳನ್ನು ಆರಂಭಿಸಿದ್ದರು.
ಜಲಯೋಗ ಸಾಧಕ:ಅಪ್ರತಿಮ ಯೋಗಪಟುವಾಗಿ ಗುರುತಿಸಿಕೊಂಡಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದ್ರವನಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಜಲಯೋಗದಲ್ಲೂ ಅಪ್ರತಿಮ ಸಾಧನೆ ಮಾಡಿದವರು. 18ನೇ ವಯಸ್ಸಿನಲ್ಲೇ ಹಿಮಾಲಯದ ಯೋಗಿಯೊಬ್ಬರಿಂದ ಪ್ರೇರಿತರಾಗಿ ಯೋಗ ಕಲಿಯಲು ಆರಂಭಿಸಿದರು. ಈಗ ಕಳೆದ ಹದಿನೈದು ವರ್ಷಗಳಿಂದ ಜಲಯೋಗಕ್ಕೆ ಆಕರ್ಷಿತರಾಗಿ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.