Advertisement

ರಾಜ್ಯದ ಮತದಾನ ಪೂರ್ಣ : ಶಿವಮೊಗ್ಗದಲ್ಲೇ ಹೆಚ್ಚು , ರಾಯಚೂರಿನಲ್ಲಿ ಕಡಿಮೆ

01:27 AM Apr 24, 2019 | Team Udayavani |

ಬೆಂಗಳೂರು: ರಾಜ್ಯದ ಉತ್ತರ ಭಾಗದಲ್ಲಿನ ಶಾಂತಿಯುತ ಮತದಾನದ ಮೂಲಕ ಕರ್ನಾಟಕದ ಲೋಕಸಭೆ ಚುನಾವಣ ಸಂಭ್ರಮ ಸಂಪನ್ನಗೊಂಡಿತು. ಸರಿಯಾಗಿ ಇನ್ನು ಒಂದು ತಿಂಗಳಿಗೆ ಫ‌ಲಿತಾಂಶ ಹೊರಬರಲಿದ್ದು, ಅಲ್ಲಿಯ ತನಕ ಘಟಾನುಘಟಿಗಳ ಭವಿಷ್ಯ ಸ್ಟ್ರಾಂಗ್‌ ರೂಂಗಳಲ್ಲಿ ಇಡಲಾಗಿರುವ ಮತಯಂತ್ರಗಳಲ್ಲಿ ಭದ್ರವಾಗಿರಲಿದೆ.

Advertisement

ಮೊದಲ ಹಂತದ ದಕ್ಷಿಣಾರ್ಧಕ್ಕೆ ಹೋಲಿಸಿದರೆ ಉತ್ತರಾರ್ಧದಲ್ಲಿ ಮತದಾನದ ಪ್ರಮಾಣ ಕಡಿಮೆ. ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ ಶೇ.68.15ರಷ್ಟು ಮತದಾನವಾಗಿದೆ. ಮೊದಲ ಹಂತದಲ್ಲಿ ಶೇ.68ಕ್ಕೂ ಹೆಚ್ಚು ಮತದಾನವಾಗಿತ್ತು. ಉತ್ತರಾರ್ಧದ ಶಿವಮೊಗ್ಗ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.76.43ರಷ್ಟು ಮತದಾನವಾಗಿದ್ದರೆ, ರಾಯಚೂರಿನಲ್ಲಿ ಅತೀ ಕಡಿಮೆ ಶೇ. 57.89ರಷ್ಟು ಮತದಾನವಾಗಿದೆ. ಮಳೆಯ ನಡುವೆಯೂ ಶಿವಮೊಗ್ಗ ಮಂದಿ ಮತಗಟ್ಟೆಗೆ ಬಂದು ಮತ ಹಾಕಿದ್ದಾರೆ.

ಮತಯಂತ್ರ ದೋಷ
ಮತಯಂತ್ರ ದೋಷ ಕಾರಣ ಮತದಾನ ವಿಳಂಬ ಪ್ರಕರಣಗಳು ಎರಡನೇ ಹಂತದಲ್ಲೂ ಮರುಕಳಿಸಿದ್ದು, ಕೆಲವೆಡೆ ಮತದಾರರು ಮತ್ತು ಮತಗಟ್ಟೆ ಅಧಿಕಾರಿಗಳ ನಡುವೆ ಈ ವಿಚಾರದಲ್ಲಿ ಮಾತಿನ ಘರ್ಷಣೆಯೂ ನಡೆದಿದೆ. ಬಾಗಲಕೋಟೆ ನಗರ ಸರಕಾರಿ ಶಾಲೆ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ 50 ನಿಮಿಷ ಮತದಾನ ವಿಳಂಬವಾಯಿತು. ಕಲಬುರಗಿಯ ಸುರಪುರದಲ್ಲಿ ಮತಯಂತ್ರ ಒಡೆದು ಹೋದ ಕಾರಣ ಹೊಸ ಯಂತ್ರ ಅಳವಡಿಸಲಾಯಿತು.

ಫ‌ಲಿತಾಂಶದತ್ತ ಚಿತ್ತ
ರಾಜ್ಯದಲ್ಲಿ ಎರಡು ಹಂತಗಳಲ್ಲಿ 28 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಂತಾಗಿದ್ದು, ಮೇ 23ರ ಫ‌ಲಿತಾಂಶದತ್ತ ಎಲ್ಲರ ಚಿತ್ತ ಹರಿದಿದೆ. ಎ.18ರಂದು ಮೊದಲ ಹಂತದಲ್ಲಿ 14 ಕ್ಷೇತ್ರ, ಎರಡನೇ ಹಂತದಲ್ಲಿ ಮಂಗಳವಾರ 14 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮೊದಲ ಹಂತದಲ್ಲಿ 241, ಎರಡನೇ ಹಂತದಲ್ಲಿ 237 ಅಭ್ಯರ್ಥಿಗಳು ಕಣದಲ್ಲಿದ್ದರು. 21 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 7 ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಿತ್ತು. ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next