Advertisement

ಆರ್ಥಿಕ ಸುಧಾರಣೆ ಅಬಾಧಿತ;ದಾವೋಸ್‌ ವಿಶ್ವ ಆರ್ಥಿಕ ಶೃಂಗದಲ್ಲಿ ನೀತಿ ಆಯೋಗದ ಸಿಇಒ ಪ್ರತಿಪಾದನೆ

08:03 PM May 23, 2022 | Team Udayavani |

ದಾವೋಸ್‌: ಭಾರತದಲ್ಲಿ ಅರ್ಥ ವ್ಯವಸ್ಥೆಯ ಸುಧಾರಣೆಗಳು ಮುಂದುವರಿಯಲಿವೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಸೋಮವಾರ ತಿಳಿಸಿದ್ದಾರೆ.

Advertisement

ಸ್ವಿಜರ್ಲೆಂಡ್‌ನ‌ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಡಿಜಿಟಲ್‌ ಕ್ಷೇತ್ರದ ತಂತ್ರಜ್ಞಾನದ ವ್ಯಾಪಿಸುವಿಕೆಯ ಹೊರತಾಗಿಯೂ ಸುಧಾರಣೆಗಳು ಮುಂದುವರಿಯಲಿವೆ ಎಂದಿದ್ದಾರೆ. ಇತ್ತೀಚೆಗೆ ಕೈಗೊಂಡಿರುವ ಆರ್ಥಿಕ ಸುಧಾರಣೆಗಳಿಂದ ದೇಶ ಅಭಿವೃದ್ಧಿಯ ಪಥದಲ್ಲಿ ಶರವೇಗದಲ್ಲಿ ಸಾಗುತ್ತಿದೆ ಎಂದು ಬಣ್ಣಿಸಿದ್ದಾರೆ.

ವಿಶ್ವನಾಯಕನಾಗಲಿದೆ:
ಹಸಿರು ಜಲಜನಕ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಮುಂದಿನ ದಿನಗಳಲ್ಲಿ ಜಗತ್ತಿನ ಅಗ್ರ ದೇಶವಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ದೇಶದಲ್ಲಿ ಬದಲಿ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದ ಸಚಿವರು, “ಇಥೆನಾಲ್‌ ಮಿಶ್ರಿತ ಪೆಟ್ರೋಲ್‌ ಅನ್ನು ಶೇ.20ಕ್ಕೆ ಏರಿಸುವ ಗುರಿ ಹೊಂದಲಾಗಿದೆ. 2030ರ ಬದಲಾಗಿ 2025ಕ್ಕೆ ಉದ್ದೇಶಿತ ಗುರಿ ಸಾಧನೆಯ ವರ್ಷ ಇಳಿಕೆ ಮಾಡಲಾಗಿದೆ. ಹಸಿರು ಜಲಜನಕ, ಜೈವಿಕ ಇಂಧನ ಮಿಶ್ರಣ ಮತ್ತು ಬದಲಿ ಇಂಧನ ಮೂಲಗಳ ಬಗ್ಗೆ ಶೋಧ ಪ್ರಗತಿಯಲ್ಲಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next