ಬೆಂಗಳೂರು: ಸೌರಾಷ್ಟ್ರ ವಿರುದ್ಧ ಫೆ. 8ರಿಂದ 12ರ ವರೆಗೆ ನಡೆಯುವ ರಣಜಿ ಸೆಮಿಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟವಾಗಿದೆ.
ಪಂದ್ಯ ಬೆಂಗಳೂರಿನಲ್ಲೇ ನಡೆಯುವುದು ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ತಂಡದಲ್ಲಿ ಭಾರೀ ಬದಲಾವಣೆಗಳೇನು ಸಂಭವಿಸಿಲ್ಲ. ಮಾಯಾಂಕ್ ಅಗರ್ವಾಲ್ ನಾಯಕರಾಗಿ ಮುಂದುವರಿದಿದ್ದಾರೆ.
ಆರ್.ಸಮರ್ಥ್ ಉಪನಾಯಕರಾಗಿದ್ದಾರೆ. ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ, ಎಸ್.ಶರತ್ (ವಿಕೆಟ್ ಕೀಪರ್) ಸಹಜವಾಗಿ ಸ್ಥಾನ ಪಡೆದಿದ್ದಾರೆ. ಇನ್ನು ಕ್ವಾರ್ಟರ್ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಗೋಪಾಲ್, ಎಂ.ವೆಂಕಟೇಶ್ ತಂಡದ ಮುಖ್ಯ ಆಟಗಾರರಾಗಿದ್ದಾರೆ.
ಇನ್ನೊಂದು ಸೆಮಿಫೈನಲ್ ಪಂದ್ಯವು ಇಂಧೋರ್‌ನಲ್ಲಿ ಮಧ್ಯಪ್ರದೇಶ ಮತ್ತು ಬಂಗಾಲ ನಡುವೆ ನಡೆಯಲಿದೆ.