Advertisement

ಉದ್ಯಮಶೀಲತೆಯಲ್ಲಿ ರಾಜ್ಯವೇ ನಂ.1

06:00 AM Nov 21, 2017 | Harsha Rao |

ಹೊಸದಿಲ್ಲಿ: ಉದ್ದಿಮೆದಾರರಿಗೆ ಅತ್ಯಂತ ಸ್ನೇಹಿ ರಾಜ್ಯವೆಂದರೆ ಅದು ಕರ್ನಾಟಕ!
ಹೌದು, ದೇಶದ ಎಲ್ಲ ರಾಜ್ಯಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಇಂಡಿಯಾ ಟುಡೇ ನಿಯತ ಕಾಲಿಕೆ ಸಮೀಕ್ಷೆ ನಡೆಸಿದ್ದು ಇದರಲ್ಲಿ ಉದ್ದಿಮೆದಾರರ ಸ್ವರ್ಗವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಆದರೆ, ದೇಶದ ಒಟ್ಟಾರೆ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, ಹಿಮಾಚಲ ಪ್ರದೇಶ ಮೊದಲ ಸ್ಥಾನದಲ್ಲಿದೆ.

Advertisement

ಈ ಸಮೀಕ್ಷೆಯ ಪ್ರಕಾರ, ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ. 20.9ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದು, ಬಡ ರಾಜ್ಯಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದರೆ ಶ್ರೀಮಂತ ರಾಜ್ಯಗಳಲ್ಲಿ ಗೋವಾ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕಕ್ಕೆ 10ರಲ್ಲಿ ಯಾವ ಸ್ಥಾನವೂ ಇಲ್ಲ. ಅಲ್ಲದೆ ವಾರ್ಷಿಕ ತಲಾ ಆದಾಯ ಅಧಿಕವಾಗಿರುವ 5 ರಾಜ್ಯಗಳ ಪಟ್ಟಿಯಲ್ಲೂ ರಾಜ್ಯ ಯಾವುದೇ ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದ್ದು, 2,26,583 ರೂ. ತಲಾ ಆದಾಯವನ್ನು ಹೊಂದಿದೆ. ಇನ್ನೊಂದೆಡೆ ಅರುಣಾಚಲ ಪ್ರದೇಶ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಆರ್ಥಿಕತೆ ಅಭಿವೃದ್ಧಿಯ ವೇಗ ಶೇ.16.5 ಇದೆ. ಹಾಗೆಯೇ ಜಮ್ಮು ಕಾಶ್ಮೀರ (ಶೇ.  14.7), ಗೋವಾ (ಶೇ. 11.5), ಗುಜರಾತ್‌ (ಶೇ. 11.1) ಮತ್ತು ಆಂಧ್ರ (ಶೇ. 11) ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಶಿಕ್ಷಣದಲ್ಲಿ  ಹಿಂದೆ: ವಿವಿಧ ವಿಭಾಗಗಳಾದ ಶಿಕ್ಷಣ (15), ಪರಿಸರ ಮತ್ತು ಸ್ವತ್ಛತೆ (6), ಅಭಿವೃದ್ಧಿ(6), ಮೂಲಸೌಕರ್ಯ (9), ಕಾನೂನು ಸುವ್ಯವಸ್ಥೆ(13), ಪ್ರವಾಸೋದ್ಯಮ(4), ಕೃಷಿ(9), ಆಡಳಿತ(11), ಆರ್ಥಿಕತೆ(6), ಆರೋಗ್ಯ (4) ಮತ್ತು ಉದ್ಯಮಶೀಲತೆ(1) ಕ್ಷೇತ್ರಗಳಲ್ಲಿನ ಪಟ್ಟಿಗಳಲ್ಲಿ ಯಾವುದರಲ್ಲೂ ಕರ್ನಾಟಕ ಮೊದಲ ಸ್ಥಾನ ಪಡೆದಿಲ್ಲ.

ಉದ್ಯಮಶೀಲತೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇತರ ರಾಜ್ಯಗಳಲ್ಲಿ ಉದ್ಯಮಶೀಲತೆಯ ಸುಧಾರಣೆಯಲ್ಲಿ ಸಾಕಷ್ಟು ದತ್ತಾಂಶ ಲಭ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಶಿಕ್ಷಣದಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿ ಅಂದರೆ 15ನೇ ಸ್ಥಾನದಲ್ಲಿರುವ ಕರ್ನಾಟಕ, ಕಾನೂನು ಸುವ್ಯವಸ್ಥೆ ಯಲ್ಲಿ 13 ಹಾಗೂ ಆಡಳಿತದಲ್ಲಿ 11ನೇ ಸ್ಥಾನದಲ್ಲಿದೆ. ರಾಜ್ಯವು ದೇಶ ಜಿಡಿಪಿಗೆ 8.14 ಲಕ್ಷ ಕೋಟಿ ರೂ. ಕೊಡುಗೆ ನೀಡುತ್ತಿದ್ದು, ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.
ಹಿಮಾಚಲ ಪ್ರಥಮ: ಬಹುತೇಕ ವಿಭಾಗಗಳಲ್ಲಿ ಹಿಮಾಚಲ ಪ್ರದೇಶ ಮೊದಲ ಸ್ಥಾನವನ್ನು ಪಡೆದಿದ್ದು, ದೊಡ್ಡ ರಾಜ್ಯಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ. ಹೊಸ ರಾಜ್ಯ ತೆಲಂಗಾಣ ಎರಡನೇ ಸ್ಥಾನದಲ್ಲಿದೆ.

15 ವರ್ಷಗಳಿಂದಲೂ ಈ ಸಮೀಕ್ಷೆ ನಡೆಸಲಾಗುತ್ತಿದ್ದು, ಕಾಲಕಾಲಕ್ಕೆ ಇದರ ಮಾನದಂಡಗಳನ್ನು ಬದಲಿಸಲಾಗುತ್ತಿರುವುದು ಪ್ರಮುಖ ಅಂಶ.

Advertisement

Udayavani is now on Telegram. Click here to join our channel and stay updated with the latest news.

Next