ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮುಯಿಥಾಯ್ ಅಸೋಸಿಯೇಶನ್ ವತಿಯಿಂದ ಕರ್ನಾಟಕ ರಾಜ್ಯ ಮುಯಿಥಾಯ್ ಚಾಂಪಿಯನ್‌ಶಿಪ್ ರವಿವಾರ ನಗರದ ಆಫೀಸರ್ ಕ್ಲಬ್‌ನಲ್ಲಿ ನಡೆಯಿತು. ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮುಯಿಥಾಯ್ ಸಮರ ಕಲೆಯಾಗಿದ್ದು, ಮತ್ತಷ್ಟು ಜನಮನ್ನಣೆಗಳಿಸಬೇಕಿದೆ ಎಂದು ಹೇಳಿದರು.
100 ಮಂದಿ ಸ್ಪರ್ಧಾಳುಗಳು
ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ರಾಜ್‌ಗೊàಪಾಲ್ ರೈ ಅವರು ಪ್ರಾಸ್ತಾವಿಕ ಮಾತನಾಡಿ, ಮುಯಿಥಾಯ್ ಈ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ 25 ಕ್ಲಬ್‌ಗಳಿಂದ ಸುಮಾರು 100 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಅಂಡರ್ -19 ಮತ್ತು 19 ವರ್ಷದ ಅನಂತರದ ವಿಭಾಗದ ಸ್ಪರ್ಧೆಗಳು ಎಂಬ ಎರಡು ವಿಭಾಗಗಳನ್ನು ಮಾಡಲಾಗಿತ್ತು ಎಂದರು.
ಮಹಾರಾಷ್ಟ್ರದ ಪುಣೆಯಲ್ಲಿ ನ. 14ರಿಂದ 18ರ ವರೆಗೆ ಯುನೈಟೆಡ್ ಅಮೆಚ್ಯೂರ್ ಮುಯಿಥಾಯಿ ಅಸೋಸಿಯೇಶನ್ ಆಫ್ ಇಂಡಿಯಾ ವತಿಯಿಂದ ರಾಷ್ಟ್ರ ಮಟ್ಟದ ಮುಯಿಥಾಯ್ ಚಾಂಪಿಯನ್ ಶಿಪ್ ನಡೆಯಲಿದ್ದು, ರಾಜ್ಯದಿಂದ ಬಲಿಷ್ಠ ತಂಡವನ್ನು ತಯಾರು ಮಾಡಲು ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ತರಬೇತುದಾರ ಬಾಲಕೃಷ್ಣ ಶೆಟ್ಟಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ಪಾಲಿಕೆ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಪಿಂಟೋ, ನ್ಯಾಯವಾದಿ ರಾಘವೇಂದ್ರ ರಾವ್, ದಯಚಂದ್ರ ಬೋಳ, ಅಸ್ಮಾಂ, ಮಹಮ್ಮದ್ ನವೀದ್, ಅಣ್ಯಯ್ಯ ಕುಲಾಲ್, ಚಂದ್ರಹಾಸ ಶೆಟ್ಟಿ, ಕರುಣಾ ಕರನ್, ಮಹೇಶ್ ಪಾಂಡ್ಯ, ಬಿಪಿನ್ ರಾಜ್ ರೈ, ಸಚಿನ್ ರಾಜ್ ರೈ, ವಿಕ್ರಂ ದತ್ತ್ ಸೇರಿದಂತೆ ಮತ್ತಿತರರು ಇದ್ದರು.
ಸ್ವರಕ್ಷಣೆಗಿರುವ ಕಲೆ
ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿ, ಮುಯಿಥಾಯ್ ಸ್ವಂತ ರಕ್ಷಣೆಗೆ ಇರುವಂತಹ ಕಲೆಯಾಗಿದೆ. ಹೆಚ್ಚಿನ ಕ್ರೀಡೆಗಳು ಮಂಗಳೂರಿನಲ್ಲಿ ಪ್ರಾರಂಭವಾಗಿ ಜಗತ್ತಿನ ವಿವಿಧ ಕಡೆಗಳಲ್ಲಿ ಹಬ್ಬಿವೆ. ಅದೇ ರೀತಿ ಕರಾವಳಿಯ ಪ್ರತಿಭೆಗಳು ಮುಯಿಥಾಯ್ ಕಲೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲಿ ಎಂದರು.