Advertisement
2021ನೇ ಸಾಲಿನ ಸಾಹಿತ್ಯ ಪ್ರಶಸ್ತಿ (ಕೊಂಕಣಿ)- ಅಮರ್ ಕೊಂಕಣಿ (ಸಂಪಾದಕ ಮೆಲ್ವಿನ್ ಪಿಂಟೊ), ಸಾಹಿತ್ಯ ಪ್ರಶಸ್ತಿ (ತುಳು)- ಡಾ| ಸುನಿತಾ ಎಂ. ಶೆಟ್ಟಿ (ಅವರ ಪರವಾಗಿ ವತ್ಸಲಾರಿಂದ ಸ್ವೀಕಾರ), ಸಂದೇಶ ಮಾಧ್ಯಮ ಪ್ರಶಸ್ತಿ- ನಾಗೇಶ ಹೆಗಡೆ (ಉತ್ತರ ಕನ್ನಡ), ಕೊಂಕಣಿ ಸಂಗೀತ ಪ್ರಶಸ್ತಿ- ಮೀನ ರೆಬಿಂಬಸ್ (ದಕ್ಷಿಣ ಕನ್ನಡ), ಕಲಾ ಪ್ರಶಸ್ತಿ- ಅವಿತಾಸ್ ಕುಟಿನ್ಹಾ (ದಕ್ಷಿಣ ಕನ್ನಡ), ಶಿಕ್ಷಣ ಪ್ರಶಸ್ತಿ- ಡಾ| ಲಕ್ಷ ¾ಣ್ ಸಾಬ್ ಚೌರಿ (ಬಾಗಲಕೋಟೆ), ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್ ನ ಮಹಾಂತೇಶ್ ಜಿ. ಕಿವುಡಸಣ್ಣವರ್ ಅವರಿಗೆ ನೀಡಲಾಯಿತು.
ಪ್ರಶಸ್ತಿ ಪ್ರದಾನಿಸಿದ ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಮಾತನಾಡಿ, ಸಮಾಜದ ಸರ್ವರೂ ಒಂದಾಗುವುದೇ ಬಹುದೊಡ್ಡ ಶ್ರೀಮಂತಿಕೆ. ಪ್ರತಿಯೊಬ್ಬರೂ ದೇವರು ನೀಡಿದ ಅವಕಾಶ ಗಳನ್ನು ಸದುಪಯೋಗ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
Related Articles
Advertisement
ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ| ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ| ವಲೇರಿಯನ್ ರಾಡ್ರಿಗಸ್, ಪ್ರತಿಷ್ಠಾನದ ವಿಶ್ವಸ್ತರಾದ ರೊಯ್ ಕ್ಯಾಸ್ತಲಿನೊ, ಐವನ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.