ಸುರತ್ಕಲ್: ಮಾರುತಿ ಫ್ರೆಂಡ್ಸ್ ಹೊಸಬೆಟ್ಟು ಇದರ ಆಶ್ರಯದಲ್ಲಿ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಹಗ್ಗ-ಜಗ್ಗಾಟ ಸ್ಪರ್ಧೆಯು ಕುಳಾಯಿ ಹೊಸಬೆಟ್ಟುವಿನ ಮಾರುತಿ ಕಡಲ ಕಿನಾರೆಯಲ್ಲಿ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ಹತ್ತು ಹಲವಾರು ಬಲಿಷ್ಟ ತಂಡಗಳು ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿ ಯಾಗಿಸುವಲ್ಲಿ ಸಹಕರಿಸಿದರು. ಕಾರ್ಯ ಕ್ರಮದ ಸಮಾರೋಪ ಹೊಸಬೆಟ್ಟು ಮೊಗವೀರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಟಿ. ಕರ್ಕೇರ ಹೊಸಬೆಟ್ಟು ಅವರ ಅಧ್ಯ ಕ್ಷತೆಯಲ್ಲಿ ನಡೆಯಿತು.
ಅತಿಥಿಗಳಾಗಿ ಹೊಸಬೆಟ್ಟು ಮೊಗವೀರ ಸಂಘದ ಮಾಜಿ ಅಧ್ಯಕ್ಷ ಯೋಗೀಶ್ ಕರ್ಕೇರ, ಹೊಸಬೆಟ್ಟು ಸತ್ಯಜಾರಂದಾಯ ದೈವಸ್ಥಾನದ ಮೊಕ್ತೇಸರ ಶಶಿಧರ ಗುರಿಕಾರ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ, ಡಾ| ತಾರ ನಾಥ್ ಶೆಟ್ಟಿ ದ.ಕ. ಉಡುಪಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಕರ್ನಾಟಕ ಪರ್ಸಿನ್ ಮೀನು ಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಪೂಂಜ, ಉದ್ಯಮಿ ಹರೀಶ್ ಶೆಟ್ಟಿ, ಹಿಂದೂ ಯುವಸೇನೆ ಉಡುಪಿ ಅಧ್ಯಕ್ಷ ಮಂಜು ಕೊಳ, ಹೊಸಬೆಟ್ಟು ಮೀನುಗಾರರ ಸಹಕಾರಿ ಸಂಘ ಅಧ್ಯಕ್ಷ ಸಂತೋಷ್ ಹೊಸಬೆಟ್ಟು, ಯುವ ಉದ್ಯಮಿ ಚರಣ್ ಶ್ರೀಯಾನ್, ಮಾರುತಿ ಫ್ರೆಂಡ್ಸ್ ಹೊಸ ಬೆಟ್ಟು ಇದರ ಗೌರವಾಧ್ಯಕ್ಷ ಗಣೇಶ್ ಹೊಸಬೆಟ್ಟು, ಅಧ್ಯಕ್ಷ ಹರೀಶ್ ಪುತ್ರನ್ ಹೊಸಬೆಟ್ಟು ಉಪಸ್ಥಿತರಿದ್ದರು. ಶಿಫಾಲಿ ಎನ್. ಹೊಸಬೆಟ್ಟು ಸ್ವಾಗತಿಸಿ, ಪೂಜಾ ರಾವ್ ಸುರತ್ಕಲ್ ನಿರೂಪಿಸಿದರು.
ಪ್ರಶಸ್ತಿ ಪ್ರದಾನ
ವಿಜೇತ ತಂಡಗಳಿಗೆ ನಗದು ಪುರಸ್ಕಾರ ಮತ್ತು ಶಾಶ್ವತ ಫಲಕ “ಮಾರುತಿ ಟ್ರೋಫಿ-2019′ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪುರುಷರ ವಿಭಾಗದಲ್ಲಿ: ಪ್ರಥಮ ಸ್ಥಾನವನ್ನು ಬೀಚ್ ಫ್ರೆಂಡ್ಸ್ ಯುನೈಟೆಡ್ ಹೊಸಬೆಟ್ಟು, ದ್ವಿತೀಯ ಸ್ಥಾನವನ್ನು ಶ್ರೀ ರಾಮಭಕ್ತಾಂ ಜನೇಯ ಬಿ.ಸಿ. ರೋಡ್, ತೃತೀಯ ಸ್ಥಾನವನ್ನು ನಮ್ಮ ಜವನೆರ್ ಮಂಜನಕಟ್ಟೆ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ: ಪ್ರಥಮ ಸ್ಥಾನವನ್ನು ಪಡುಕೆರೆ ಫ್ರೆಂಡ್ಸ್ ಪಡುಕೆರೆ ಮಲ್ಪೆ, ದ್ವಿತೀಯ ಸ್ಥಾನವನ್ನು ಫ್ರೆಂಡ್ಸ್ ಮಹಿಳೆಯರು ಹೊಸಬೆಟ್ಟು ಪಡೆದುಕೊಂಡಿತು.