Advertisement

Moodabidri ರಾಜ್ಯಮಟ್ಟದ ಜೂ. ಆ್ಯತ್ಲೆಟಿಕ್ಸ್‌ : ಆಳ್ವಾಸ್‌ಗೆ 50 ಪದಕ

11:39 PM Oct 02, 2023 | Team Udayavani |

ಮೂಡುಬಿದಿರೆ: ಮೊಗವೀರ ವ್ಯವಸ್ಥಾಪಕ ಮಂಡಳಿ ದ.ಕ. ಮತ್ತು ಉಡುಪಿ ಜಿಲ್ಲಾ ಶಾಖೆ ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ. ಮಂಗಳೂರು ರಾಜ್ಯ ಮತ್ತು ದ.ಕ. ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಸಹಯೋಗದೊಂದಿಗೆ ನಡೆದ ದಿ| ಲೋಕನಾಥ ಬೋಳಾರ್‌ ಸ್ಮರಣಾರ್ಥ ರಾಜ್ಯಮಟ್ಟದ ಆ್ಯತ್ಲೆಟಿಕ್‌ ಕೂಟದಲ್ಲಿ ಮೂಡಬಿದಿರೆಯ ಆಳ್ವಾಸ್‌ ನ್ಪೋರ್ಟ್ಸ್ ಕ್ಲಬ್‌ ತಂಡವು ಒಟ್ಟು 21 ಚಿನ್ನ, 16 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಒಟ್ಟು 50 ಪದಕಗಳನ್ನು ಗೆದ್ದಿದೆ.

Advertisement

16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರೀತುಶ್ರೀ ವೈಯಕ್ತಿಕ ಪ್ರಶಸ್ತಿ ಜಯಿಸಿದ್ದಾರೆ.

ತಂಡ ಪ್ರಶಸ್ತಿಗಳು
18 ವರ್ಷ ವಯೋಮಿತಿ ಬಾಲಕ- ಬಾಲಕಿಯರ ಹಾಗೂ 23 ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ತಂಡ ಪ್ರಶಸ್ತಿ.

ಹೊಸ ಕೂಟ ದಾಖಲೆಗಳು
16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ವೀರೇಶ 80 ಮೀ. ಹರ್ಡಲ್ಸ್‌ನಲ್ಲಿ ನೂತನ ದಾಖಲೆ. 16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರೀತುಶ್ರೀ 300 ಮೀ. ನಲ್ಲಿ ನೂತನ ದಾಖಲೆ. 23 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅನಿಲ್‌ ಕುಮಾರ್‌ ಎತ್ತರ ಜಿಗಿತದಲ್ಲಿ ನೂತನ ದಾಖಲೆ.

ಫಲಿತಾಂಶ
14 ವರ್ಷ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಚಿನ್ಮಯಿ- ಎತ್ತರ ಜಿಗಿತ – (ಪ್ರ.), 16 ವರ್ಷದ ಬಾಲಕರ ವಿಭಾಗದಲ್ಲಿ ನಿಖೀಲ್‌- ಗುಂಡುಎಸೆತ- (ತೃ.), ವೀರೇಶ- 80 ಮೀ. ಹರ್ಡಲ್ಸ್‌- (ಪ್ರ.), 16 ವರ್ಷದ ಬಾಲಕಿಯರ ವಿಭಾಗದಲ್ಲಿ ಗೋಪಿಕಾ- 100 ಮೀಟರ್‌- (ದ್ವಿ.), ನಾಗಿಣಿ- 2000 ಮೀಟರ್‌- (ತೃ.), ರೀತುಶ್ರೀ – 300ಮೀಟರ್‌-(ಪ್ರ.).

Advertisement

18 ವರ್ಷದ ಬಾಲಕರ ವಿಭಾಗದಲ್ಲಿ ದರ್ಶನ್‌ -ನಡಿಗೆ ಸ್ಪರ್ಧೆ – (ಪ್ರ.), ವಿನಾಯಕ್‌- ನಡಿಗೆ- (ದ್ವಿ.), ಚೆನ್ನಬಸವ – 2000 ಮೀಟರ್‌- (ತೃ.), ನಿತಿನ್‌ – ಚಕ್ರಎಸೆತ- (ದ್ವಿ.), ಶೋಭಿತ್‌- ಚಕ್ರಎಸೆತ – (ಪ್ರ.), ತೇಜಲ್‌- 110 ಮೀ. ಹರ್ಡಲ್ಸ್‌- (ದ್ವಿ.), ಯಶವಂತ್‌-800 ಮೀ. – (ಪ್ರ.), ಗೌತಮ್‌-ಜಾವೆಲಿನ್‌ ಎಸೆತ- (ತೃ.), ಮಂಜುನಾಥ – ತ್ರಿಪಲ್‌ ಜಂಪ್‌-(ದ್ವಿ.), ರಾಮು- 800 ಮೀ. – (ದ್ವಿ.), ವಿನೋದ್‌- ಡೆಕತ್ಲಾನ್‌- (ಪ್ರ.), ಅಬ್ದುಲ್‌ ರಝಾಕ್‌ – ಹ್ಯಾಮರ್‌ ತ್ರೋ – (ದ್ವಿ.), ಚೇತಸ್‌- ಹ್ಯಾಮರ್‌ತ್ರೋ- (ತೃ.).

18 ವರ್ಷದ ಬಾಲಕಿಯರ ವಿಭಾಗದಲ್ಲಿ ವಿಸ್ಮಿತಾ- ಗುಂಡೆಸೆತ – (ದ್ವಿ.), ಐಶ್ವರ್ಯ-ಗುಂಡೆಎಸೆತ – (ಪ್ರ.), ಚೈತ್ರಾ-3000 ಮೀಟರ್‌- (ತೃ.), ಐಶ್ವರ್ಯಾ- ಚಕ್ರಎಸೆತ – (ಪ್ರ.), ಗೀತಾ-400ಮೀಟರ್‌- (ಪ್ರ.), ಅಂಬಿಕಾ- 5000 ನಡಿಗೆ ಸ್ಪರ್ಧೆ – (ಪ್ರ.), ಶುಭಶ್ರೀ – 400 ಮೀಹರ್ಡಲ್ಸ್‌ – (ತೃ.).

20 ವರ್ಷದ ಬಾಲಕರ ವಿಭಾಗದಲ್ಲಿ ಗಣೇಶ್‌-ಗುಂಡೆಸೆತ – (ದ್ವಿ.), ವರುಣ್‌ ಡಿ.ಸಿ. – ಜಾವೆಲಿನ್‌ಎಸೆತ- (ತೃ.), ಸುಶಾಂತ್‌- ಉದ್ದಜಿಗಿತ – (ಪ್ರ.), ವರುಣ್‌- ಚಕ್ರಎಸೆತ – (ಪ್ರ.), ಶ್ರೀಕಾಂತ್‌- ಚಕ್ರಎಸೆತ – (ದ್ವಿ.), ಸುಪ್ರೀತ್‌- 400 ಮೀಟರ್‌ – (ತೃ.), ಸನತ್‌ – ಡೆಕತ್ಲಾನ್‌ – (ದ್ವಿ.), ಪರಶುರಾಮ-ಹ್ಯಾಮರ್‌ತ್ರೋ-(ದ್ವಿ.).

20 ವರ್ಷದ ಬಾಲಕಿಯರ ವಿಭಾಗ ದಲ್ಲಿ ರೂಪಶ್ರೀ – 3000 ಮೀಟರ್‌ – (ತೃ.), 1500 ಮೀಟರ್‌ – (ದ್ವಿ.), ರೇಖಾ – 800 ಮೀಟರ್‌ – (ಪ್ರ.), ಪ್ರಿಯಾಂಕಾ – ಉದ್ದಜಿಗಿತ – (ದ್ವಿ.), ಪ್ರಣಮ್ಯ- 800 ಮೀಟರ್‌ (ತೃ.).

23 ವರ್ಷದ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್‌- ಗುಂಡೆಸೆತ- (ತೃ.), ಚಕ್ರಎಸೆತ-(ಪ್ರ.), ಮಹಂತೇಶ್‌-400 ಮೀಟರ್‌-(ಪ್ರ.), ಅನಿಲ್‌ ಕುಮಾರ್‌-ಎತ್ತರ ಜಿಗಿತ- (ಪ್ರ.) ಅದಿತ್‌ಪಿ. ಕೋಟ್ಯಾನ್‌- ಎತ್ತರ ಜಿಗಿತ – (ದ್ವಿ.)

23 ವರ್ಷದ ಬಾಲಕಿಯರ ವಿಭಾಗದಲ್ಲಿ ದೀಕ್ಷಿತಾ – 100 ಮೀಟರ್‌ – (ಪ್ರ.), 400 ಮೀಟರ್‌ ಹರ್ಡಲ್ಸ್‌- (ತೃ.) ದೀಪಶ್ರೀ – 400 ಮೀಟರ್‌ – (ದ್ವಿ.), 800 ಮೀಟರ್‌- (ಪ್ರ.), ಸುಷ್ಮಾ- ಚಕ್ರಎಸೆತ – (ಪ್ರ.), ಗುಂಡೆಸೆತ – (ಪ್ರ.), ಕೃತಿ- ತ್ರಿಪಲ್‌ಜಂಪ್‌- (ಪ್ರ.).

ಸತತ 16 ವರ್ಷಗಳಿಂದ ಆಳ್ವಾಸ್‌ ಸ್ಪೋರ್ಟ್ಸ್ ಕ್ಲಬಿನ ಕ್ರೀಡಾಪಟುಗಳು ಪ್ರಶಸ್ತಿ ಪಡೆಯುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರ ಎಂದು ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next