Advertisement
ಇಂದಿನ ಆಧುನಿಕ ಕಾಲದಲ್ಲಿಯೂ ಮಹಾಭಾರತದ ಶಕುನಿ ಮತ್ತು ಪಾಂಡವರ ನಡುವಿನ ಆಟವನ್ನು ನೆನಪಿಸುವ ಈ ಆಟ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೂಡಾ ಮಹತ್ವವನ್ನು ಪಡೆದಿದ್ದು, ಹಿರಿಯರ ಜೊತೆ ಯುವಕರು ಕೂಡಾ ಪಗಡೆಯಾಟ ಆಡುವುದರ ಮೂಲಕ ಆಟವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದ್ದಾರೆ.
Related Articles
Advertisement
ದೀಪಾವಳಿಯಂದು ವಿಶೇಷವಾಗಿ ಪೂಜಿಸಲ್ಪಡುವ ಬ್ರಹ್ಮದೇವರ ಹಬ್ಬವನ್ನು ಪ್ರತಿ ವರ್ಷ ದೇವಸ್ಥಾನದ ಮುಂದೆ ವಿಶೇಷವಾಗಿ ಬ್ರಹ್ಮದೇವರ ಜಾತ್ರಾ ಮಂಡಳಿಯ ಸದಸ್ಯರು ಆಚರಿಸುತ್ತಾ ಬಂದಿದ್ದಾರೆ. ಹಿರಿಯರಿಗೆ ಮಾತ್ರ ಸಿಮಿತವಾಗಿದ್ದ ಪಗಡೆಯಾಟ ಯುವಕರನ್ನು ಆಕರ್ಷಿಸುತ್ತಿರುವುದು ಪಗಡೆಯ ಉಳಿವಿಗೆ ಸಾಕ್ಷಿಯಾಗಿದೆ.
ಪ್ರಥಮ ಬಹುಮಾನ 50,001ರೂ., ದ್ವಿತೀಯ ಬಹುಮಾನ 30,001ರೂ., ತೃತೀಯ ಬಹುಮಾನ 20,001 ರೂ., ಚತುರ್ಥ ಬಹುಮಾನ 10,001 ರೂ. ಸೇರಿದಂತೆ 8 ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಗುರಲಿಂಗಪ್ಪ ಚಿಂಚಲಿ, ಶೇಖರ ನೀಲಕಂಠ, ಗುರು ಅಸ್ಕಿ, ಮಾರುತಿ ಸೋರಗಾವಿ, ಕಾಡಪ್ಪ ಕಬಾಡಗಿ, ಕಾಡಪ್ಪ ಉಳ್ಳಾಗಡ್ಡಿ, ಬಸಯ್ಯ ಕಾಡದೇವರ, ಹೊನ್ನಪ್ಪ ಕುಳ್ಳೋಳ್ಳಿ, ಹನಮಂತಗೌಡ ಪಾಟೀಲ, ಸದಾಶಿವ ದಡ್ಡಿಮನಿ, ಸುರೇಶ ಅಸ್ಕಿ, ಪಂಡಿತ ಬೋಸ್ಲೆ, ಅಶೋಕ ಆಸಂಗಿ, ಸದಾಶಿವ ಉಳ್ಳಾಗಡ್ಡಿ, ಮುತ್ತು ಉಳ್ಳಾಗಡ್ಡಿ, ಚಂದ್ರಶೇಖರ ಕುರಿ, ಹಣಮಂತ ಅತ್ಯವ್ವಗೋಳ, ಶ್ರೀಶೈಲಗೌಡ ಪಾಟೀಲ, ಅಶೋಕ ಗೊಬ್ಬಾಣಿ, ಬಸಪ್ಪ ನಾಯಕ, ಯಲ್ಲಪ್ಪ ದೊಡಮನಿ, ಬಸಪ್ಪ ಮುತ್ತೂರ, ಅಡಿವೆಪ್ಪ ಪಾಟೀಲ, ವಿಠ್ಠಲ ಕಲಮಡಿ, ಭೀಮಪ್ಪ ಹರಪನಹಳ್ಳಿ ಸೇರಿದಂತೆ ಅನೇಕರು ಇದ್ದರು.
– ಕಿರಣ ಶ್ರೀಶೈಲ ಆಳಗಿ