Advertisement

18 ಸಾಹಿತಿಗಳಿಗೆ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರದಾನ

10:15 AM May 09, 2022 | Team Udayavani |

ಕಲಬರುಗಿ: 12ನೇ ಶತಮಾನದಲ್ಲಿ ಅಶಾಂತಿ ಅಧರ್ಮ, ಮೌಡ್ಯತೆ, ಕಂದಾಚಾರಗಳು ವಿಜೃಂಭಿಸುತ್ತಿದ್ದವು. ಆಗ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಶರಣರನ್ನು ಒಂದುಗೂಡಿಸಿ ಸಮ ಸಮಾಜ ನಿರ್ಮಾಣ ಮಾಡಿದರು ಎಂದು ಗುವಿವಿ ಕುಲಪತಿ ಪ್ರೊ| ದಯಾನಂದ ಅಗಸರ್‌ ವ್ಯಾಖ್ಯಾನಿಸಿದರು.

Advertisement

ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ರವಿವಾರ ಪಾಳಾ ಗ್ರಾಮದ ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ನಾಲ್ಕನೇ ವರ್ಷದ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 18 ಸಾಹಿತಿಗಳಿಗೆ 2022ನೇ ಸಾಲಿನ ರಾಜ್ಯಮಟ್ಟದ ಬಸವ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.

ಬಸವ ಪುರಸ್ಕಾರ ಪಡೆದ 18 ಸಾಹಿತಿಗಳಿಗೆ ಜವಾಬ್ದಾರಿ ಹೆಚ್ಚಿಸಿದೆ. ಪ್ರಶಸ್ತಿ ಪ್ರತಿಭೆಗಳನ್ನು ಅರಿಸಿಕೊಂಡು ಹೋಗಬೇಕು ಆಗ ಮಾತ್ರ ಪ್ರಶಸ್ತಿಗಳ ಮೌಲ್ಯ ಹೆಚ್ಚುತ್ತದೆ. ಇದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಆದರೆ, ಇವತ್ತು ಕೆಲವರು ಪ್ರಶಸ್ತಿಗಳನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಅವುಗಳ ಮೌಲ್ಯವೂ ಕುಸಿಯುತ್ತಿದೆ. ಈ ವೇಳೆಯಲ್ಲಿ ಪಾಳಾದ ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್‌ ಸೂಕ್ತ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಮೌಲ್ಯಯುತ ಎಂದರು.

ಸಾನಿಧ್ಯವಹಿಸಿದ್ದ ಚಿಗರಹಳ್ಳಿ ಮರುಳಸಿದ್ದೇಶ್ವರ ದೇವರ ಗುರುಪೀಠದ ಸಿದ್ಧಬಸವ ಕಬೀರ ಮಹಾ ಸ್ವಾಮಿಗಳು ಮಾತನಾಡುತ್ತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿವೆ. ಮೌಲ್ಯಗಳನ್ನು ರೂಪಿಸಲು ಬಸವ ಪುರಸ್ಕಾರದ ಮೂಲಕ ಶರಣಗೌಡ ಪಾಟೀಲ ಪಾಳಾ ಅವರು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಾರ್ವಜನಿಕ ಇಲಾಖೆ ಗ್ರಂಥಾಲಯ ನಿರ್ದೇಶಕ ಡಾ ಸತೀಶ್‌ ಕುಮಾರ್‌ ಹೊಸಮನಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಡೀನ್‌ (ಕಲಾನಿಕಾಯ) ಪ್ರೊ| ರಮೇಶ ರಾಠೊಡ್‌ ಅಧ್ಯಕ್ಷತೆವಹಿಸಿದ್ದರು. ಗುಲಬರ್ಗಾ ವಿಶ್ವ ವಿದ್ಯಾ ಲಯದ ಸೆನೆಟ್‌ ಸದಸ್ಯ ರಾಜೇಂದ್ರ ಕಗ್ಗನಮಡಿ ಅತಿಥಿಗಳಾಗಿದ್ದರು. ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ಅಧ್ಯಕ್ಷ ಶರಣಗೌಡ ಪಾಟೀಲ, ಪಾಳಾ ಸ್ವಾಗತಿಸಿದರು. ಬಿ ಎಚ್‌ ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಶರಣಬಸವ ವಡ್ಡಕೇರಿ ನಿರೂಪಿಸಿದರು. ಡಾ| ಶಿವಶಂಕರ ಬಿರಾದಾರ, ಹಾಗೂ ಕಿರಣ್‌ ಪಾಟೀಲ ಅವರ ತಂಡದಿಂದ ಜರುಗಿದ ವಚನಗಳ ಗಾಯನ ಮನ ಸೆಳೆಯಿತು. ಡಾ| ವಿಜಯಕುಮಾರ ಪರುತೆ, ಡಾ| ಆನಂದ ಸಿದ್ಧಮಣಿ, ಸಂತೋಷ ತೊಟ್ನಳ್ಳಿ, ಮಂಗಲಾ ಕಪರೆ, ನಾಗರಾಜ ಕಲ್ಲಾ, ಜಗದೀಶ ಪಾಟೀಲ ಸಣ್ಣೂರ ಇತರರು ಇದ್ದರು.

Advertisement

ಪ್ರಶಸ್ತಿಗೆ ಭಾಜನರಾದ ಸಾಹಿತಿಗಳು

ಸತೀಶಕುಮಾರ ಹೊಸಮನಿ (ಕಾವ್ಯಧಾರೆ), ಬಸವರಾಜ ಪೊಲೀಸ್‌ ಪಾಟೀಲ್‌ (ಜಾನಪದ ಸಂಪದ), ಶಿವಕವಿ ಹಿರೇಮಠ ಜೋಗೂರು (ಮಹಾತಪಸ್ವಿ), ಡಾ| ಕೆ.ವಿ. ರಾಜೇಶ್ವರಿ (ಅಪರೂಪದ ರಾಜಕಾರಣಿರಿ-ಲಾಲ್‌ ಬಹಾದ್ದೂರ ಶಾಸ್ತ್ರೀ), ಬಸವರಾಜ ಕಡ್ಡಿ (ಅರಿವಿನ ಬೆಳಕು), ಕಾವ್ಯಶ್ರೀ ಮಹಾಗಾಂವಕರ್‌ (ಬಟ್ಟೆಯೊಳಗಿನ ಚಿತ್ತಾರ), ಶೈಲಜಾ ಎನ್‌. ಬಾಗೇವಾಡಿ (ಅಂತರಂಗದ ಅಕ್ಷರ ಲೋಕ), ತಯಬಲಿ ಹೊಂಬಳ (101ಮಕ್ಕಳ ಕಥೆಗಳು-3), ಶಿವಪುತ್ರ ಕಂಠಿ ಚಿಂಚನಸೂರ್‌ (ಶರಣರ ಜೀವನ ದರ್ಶನ ಮತ್ತು ವಚನಾಂತರಾಳ), ಸಹನಾ ಕಾಂತಬೆ„ಲು (ಇದು ಬರೀ ಮಣ್ಣಲ್ಲ), ಸಂಗಮೇಶ ಉಪಾಸೆ (ದೇವರುಗಳಿವೆ ಎಚ್ಚರಿಕೆ), ಸನಾವುಲ್ಲಾ ನವಿಲೆಹಾಳು (ಪಂಜು), ಬನ್ನಪ್ಪ ಬಿ.ಕೆ. (ನೈತಿಕ ಶಿಕ್ಷಣ), ಮಧುರಾ ಮೂರ್ತಿ (ಮಧುರ ಗಝಲ್‌), ಅನನ್ಯ ತುಷಿರಾ (ಅರ್ಧ ನೆನಪು ಅರ್ಧ ಕನಸು), ಮಕರಂದ ಮನೋಜ್‌ (ಮನೋಜ್ಞ ಹೈಕುಗಳು), ಸಂಕಲ್ಪ (ಅನಂದ ಪುಷ್ಟ).

Advertisement

Udayavani is now on Telegram. Click here to join our channel and stay updated with the latest news.

Next