Advertisement

ತುಳುವಿಗೆ ರಾಜ್ಯ ಭಾಷೆ ಮಾನ್ಯತೆ : ಕರಾವಳಿಯ ಅಕಾಡೆಮಿ ಅಧ್ಯಕ್ಷರಿಂದ ಸರಕಾರಕ್ಕೆ ಒತ್ತಡ

02:32 AM Jan 24, 2021 | Team Udayavani |

ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎನ್ನುವ ನೆಲೆಯಲ್ಲಿ ಇದೀಗ ಕರಾವಳಿ ಭಾಗದ ಎಲ್ಲ ಅಕಾಡೆಮಿ ಅಧ್ಯಕ್ಷರು ಒಗ್ಗೂಡಿ ರಾಜ್ಯ ಸರಕಾರಕ್ಕೆ ಒತ್ತಡ ತರಲು ಮುಂದಾಗಿದ್ದಾರೆ.

Advertisement

ಫೆಬ್ರವರಿಯಲ್ಲಿ ಕಾರವಾರದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯಲಿರುವ ಬಹುಭಾಷಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರಾವಳಿ ಭಾಗದ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ ಮತ್ತು ಕೊಡವ ಅಕಾಡೆಮಿ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಐದು ಅಕಾಡೆಮಿಗಳ ಅಧ್ಯಕ್ಷರು ರಾಜ್ಯ ಸರಕಾರಕ್ಕೆ ಒಕ್ಕೊರಲ ಮನವಿ ಮಾಡಲು ನಿರ್ಧರಿಸಿದ್ದಾರೆ.

ಹಲವು ಬಾರಿ ಮನವಿ ಸಲ್ಲಿಕೆ :

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ತುಳು ಸಾಹಿತ್ಯ ಅಕಾಡೆಮಿ, ಹಲವಾರು ಸಂಘ-ಸಂಸ್ಥೆಗಳ ಜತೆಗೂಡಿ ನಿಯೋಗಗಳ ಜತೆ ಅನೇಕ ಬಾರಿ ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರಮುಖರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಆದರೂ, ತುಳುನಾಡಿಗರ ಬೇಡಿಕೆ ಇನ್ನೂ ಈಡೇರಲಿಲ್ಲ. ಇದೀಗ ತುಳು ಅಕಾಡೆಮಿ ಜತೆ ಕರಾವಳಿಯ ಎಲ್ಲ ಅಕಾಡೆಮಿ ಅಧ್ಯಕ್ಷರನ್ನು ಜತೆಗೂಡಿಸಿ ಸರಕಾರಕ್ಕೆ ಒತ್ತಡ ತರಲು ಅಕಾಡೆಮಿಗಳು  ಮುಂದಾಗಿವೆ.

ಕಷ್ಟದ ಕೆಲಸವಲ್ಲ :

Advertisement

ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಘೊಷಿಸಿ, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಕುರಿತಂತೆ ದ.ಕ. ಮತ್ತು ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಾಗಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಉಭಯ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಇದೇ ಭಾಗವದರು. ಕೇಂದ್ರ ಮತ್ತು ರಾಜ್ಯದಲ್ಲಿ ಕರಾವಳಿ ಭಾಗದ ಸಚಿವರಿದ್ದು, ಕೇಂದ್ರದಲ್ಲಿಯೂ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಹೀಗಿರುವಾಗ ರಾಜಕೀಯವಾಗಿ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಮಟ್ಟದಲ್ಲಿ ಒತ್ತಡ ಹೇರಿದರೆ, ತುಳು ಭಾಷೆಗೆ ಸಂವಿಧಾನದ ಮಾನ್ಯತೆ ದೊರಕಿಸುವುದು ಕಷ್ಟದ ಕೆಲಸವಲ್ಲ.

ಅಧಿವೇಶನದಲ್ಲಿ ಪ್ರಸ್ತಾವ ಸಾಧ್ಯತೆ :

ಬಜೆಟ್‌ ಮತ್ತು ಪ್ರಸ್ತಾಪಿತ ಯೋಜನೆಗಳ ಚರ್ಚೆ ಗಾಗಿ ಜ. 28ರಿಂದ ಫೆ.5ರ ವರೆಗೆ ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಯ ಲಿದೆ. ಈ ವೇಳೆ ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆ ಯನ್ನಾಗಿ ಮಾಡುವ ಕುರಿತು ಕರಾವಳಿ ಭಾಗದ ಶಾಸಕರು ಮತ್ತೂಮ್ಮೆ ಧ್ವನಿ ಎತ್ತುವ ಸಾಧ್ಯತೆ ಇದೆ.

ದೇಶದ 38 ಭಾಷೆಗಳಲ್ಲಿ  ತುಳುವೂ ಒಂದು ! :

ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆ ಅನೇಕ ಭಾಷೆಗಳಿಂದ ಕೇಳಿಬರುತ್ತಿದೆ. ತುಳು, ಕೊಡವ, ಬಂಜಾರ, ಬೋಜ್‌ಪುರಿ, ಗೊಂಡಿ, ನಾಗಪುರಿ, ಮಿಜೋ, ಲೆಪc ಸೇರಿದಂತೆ ಸುಮಾರು 38ಕ್ಕೂ ಹೆಚ್ಚಿನ ಭಾಷೆಗಳು ಸಾಂವಿದಾನಿಕ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಿವೆ. ಮೊದಲ ಹಂತ ದಲ್ಲಿ 14 ಭಾಷೆಗಳಿಗೆ ಮಾನ್ಯತೆಯನ್ನು ನೀಡ ಲಾಗಿತ್ತು. 1967ರಲ್ಲಿ ಸಿಂಧಿ ಭಾಷೆ, 1992ರಲ್ಲಿ ನೇಪಾಳಿ, ಕೊಂಕಣಿ, ಮಣಿಪುರಿ ಭಾಷೆಯನ್ನು ಸೇರ್ಪಡೆ ಮಾಡಲಾಯಿತು. 2004ರಲ್ಲಿ ಕಾಶ್ಮೀರದ ಡೋಗ್ರಿ ಭಾಷೆ, ಅಸ್ಸಾಂನ ಬೋಡೊ, ಸಾಂಥಾಲಿ, ಬಿಹಾರದ ಮೈಥಿಲಿ ಭಾಷೆಯನ್ನು ಕೇಂದ್ರ ಸರಕಾರ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಿತ್ತು.

ತುಳು ಭಾಷೆಗೆ ಪ್ರಾಚೀನ ಇತಿಹಾಸ ಇದ್ದು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ ಅಕಾಡೆಮಿ ಪ್ರಯತ್ನಿಸುತ್ತಿದೆ. ಮೊದಲ ಹಂತವಾಗಿ ತುಳು ವನ್ನು ರಾಜ್ಯ ಭಾಷೆಯಾಗಿ ಮಾರ್ಪಾಡು ಮಾಡ ಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಫೆಬ್ರವರಿ ತಿಂಗಳಿನಲ್ಲಿ ಬ್ಯಾರಿ ಅಕಾಡೆಮಿ ವತಿಯಿಂದ ಕಾರವಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರಾವಳಿಯ ಎಲ್ಲ ಅಕಾಡೆಮಿ ಅಧ್ಯಕ್ಷರು ಮನವಿ ಮಾಡಲಿದ್ದೇವೆ.ದಯಾನಂದ ಕತ್ತಲಸಾರ್‌,ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next