Advertisement

ರಾಜ್ಯದ ಪಾರಂಪರಿಕ ಉತ್ಪನ್ನ “ಮೈಸೂರು ಸಿಲ್ಕ್

09:38 AM Oct 07, 2017 | |

ಬೆಂಗಳೂರು: ರಾಜ್ಯದ ಪಾರಂಪರಿಕ ಉತ್ಪನ್ನವಾದ “ಮೈಸೂರು ಸಿಲ್ಕ್’ ಸೀರೆಗಳಿಗೆ ಶತಮಾನಕ್ಕಿಂತಲೂ ಹೆಚ್ಚಿನ
ಇತಿಹಾಸವಿದೆ. ಕರ್ನಾಟಕದ ಹೆಮ್ಮೆಯ ಈ ಉತ್ಪನ್ನ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು ಪ್ರಶಂಸನೀಯ
ಎಂದು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ತಿಳಿಸಿದರು.

Advertisement

ಶುಕ್ರವಾರ ಅವರು ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‌ನಲ್ಲಿ ಕೆಎಸ್‌ಐಸಿ ಅ.6 ರಿಂದ 13ರವರೆಗೆ ಆಯೋಜಿಸಿ 
ರುವ ಮೈಸೂರು ಸಿಲ್ಕ್ ಸೀರೆಗಳ ಮತ್ತು ಇತರೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿ ದರು. 1981ರಲ್ಲಿ ಕೆಎಸ್‌ಐಸಿ ಕಂಪನಿಯಾಗಿ ಪರಿವರ್ತನೆ ಗೊಂಡು ಇಂದು ಬೃಹತ್‌ ಉದ್ಯಮವಾಗಿ ಬೆಳೆದಿದೆ. ಸಂಸ್ಥೆಯ ಏಳಿಗೆಗೆ ಶ್ರಮಿಸಿರುವ ಎಲ್ಲರಿಗೂ ಧನ್ಯವಾದಗಳು. ನಿಗಮದ ಅಭಿವೃದ್ಧಿಯಲ್ಲಿ ಗ್ರಾಹಕರ ಪಾತ್ರವೂ
ಮಹತ್ವ ದ್ದಾಗಿದೆ. ತನ್ನ ಹೊಳಪನ್ನು ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡಿರುವುದೇ ಮೈಸೂರು ರೇಷ್ಮೆಯ
ವಿಶೇಷ. 50ರಿಂದ 60 ವರ್ಷಗಳ ಕಾಲ ಮೈಸೂರು ಸಿಲ್ಕ್ (ವಿಂಟೇಜ್‌) ಸೀರೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು
ಬಂದಿರುವ ಮಹಿಳೆಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ನನಗೆ ಸಂತೋಷವೆನಿಸುತ್ತದೆ ಎಂದರು.

ಕೆಎಸ್‌ಐಸಿ ಅಧ್ಯಕ್ಷ ಎಂ.ಕೆ. ಸೋಮಶೇಖರ್‌ ಮಾತನಾಡಿ, ಗ್ರಾಹಕರು ನಮ್ಮ ಸಂಸ್ಥೆಯ ಮೇಲಿಟ್ಟಿರುವ ಪ್ರೀತಿ, ವಿಶ್ವಾಸದಿಂದಲೇ ಇಂದು ಮೈಸೂರು ಸಿಲ್ಕ್ ಈ ಮಟ್ಟಕ್ಕೆ ಬೆಳೆಯಲು ಕಾರಣ. ಅದೇ ರೀತಿ ಕೆಎಸ್‌ಐಸಿ 
ಸಂಸ್ಥೆಯು 107 ವರ್ಷಗಳನ್ನು ಪೂರೈಸುತ್ತಿದ್ದರೂ ಗುಣ ಮಟ್ಟದಲ್ಲಿ ರಾಜಿ ಮಾಡಿ ಕೊಂಡಿಲ್ಲ. ಅಪ್ಪಟ ರೇಷ್ಮೆ ಎಳೆ
ಗಳಿಂದ ನೇಯ್ಗೆ ಮಾಡುವ ಈ ಸೀರೆಗಳಿಗೆ ಚಿನ್ನ ಮತ್ತು ಬೆಳ್ಳಿಯ ಜರಿಯನ್ನೇ ಬಳಸುತ್ತಿರು ವುದು ವಿಶೇಷ. ಆದ
ರಿಂದಾಗಿ ಮೈಸೂರು ಸಿಲ್ಕ್ ಸೀರೆಗಳಿಗೆ ಹಾಗೂ ಇದರ ಉತ್ಪನ್ನಗಳಿಗೆ ಸದಾ ಕಾಲ ಬೇಡಿಯಿದೆ. ಕೆಳ ಹಾಗೂ ಮಧ್ಯಮ ವರ್ಗದವರಿಗೂ ಕೈಗೆಟುವ ಬೆಲೆಗಳಲ್ಲಿ ರೇಷ್ಮೆ ಸೀರೆಗಳು ದೊರಕುವಂತೆ ಮಾಡುವ ಸಲುವಾಗಿ ಇತೀ¤ಚೆಗೆ ಚನ್ನಪಟ್ಟಣದ ಘಟಕದಲ್ಲಿ ರೇಷ್ಮೆ ಸೀರೆಗಳ ನೇಯ್ಗೆ ಕೆಲಸವನ್ನು ಆರಂಭಿಸಿದ್ದೇವೆ ಎಂದರು. 

ವಿಜೇತರಿಗೆ ಬಹುಮಾನ: ಈ ಸಂದರ್ಭದಲ್ಲಿ ವಿಂಟೇಜ್‌ ಮೈಸೂರು ಸಿಲ್ಕ್ ಸೀರೆಗಳ ಸ್ಪರ್ಧೆಯಲ್ಲಿ ವಿಜೇತರಾದ
ಮೂವರಿಗೆ 18 ಸಾವಿರ ರೂ. ಮೌಲ್ಯದ ಚೆಕ್‌ ಮತ್ತು ಪ್ರಶಸ್ತಿ ಫಲಕವನ್ನು ಹಾಗೂ ಮೂವರಿಗೆ ಸಮಾಧಾನಕರ ಬಹುಮಾನವಾಗಿ 5,000 ರೂ. ಮೌಲ್ಯ ಚೆಕ್‌ ಅನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಕೆಎಸ್‌ಐಸಿ ವ್ಯವಸ್ಥಾಪಕ
ನಿರ್ದೇಶಕಿ ಶ್ರೀಮತಿ ನೀಲಾ ಮಂಜುನಾಥ್‌ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next