Advertisement

ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯಸರ್ಕಾರ ಸಂಪೂರ್ಣ ವಿಫಲ: ಈಶ್ವರ್ ಖಂಡ್ರೆ ಆಕ್ರೋಶ

01:08 PM Aug 28, 2020 | Mithun PG |

ಬೆಂಗಳೂರು: ಶಿವಾಜಿ, ರಾಯಣ್ಣ ಇಬ್ಬರೂ ಮಹಾಪುರುಷರೇ.  ಕಾನೂನು  ಸುವ್ಯವಸ್ಥೆ ಕಾಪಾಡಲು ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೇಹುಗಾರಿಕೆ ಪಡೆ ಕೂಡ ಸಂಪೂರ್ಣ ವೈಫಲ್ಯ ಅನುಭವಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಡಿಜೆ ಹಳ್ಳಿ, ಕೆ.ಜಿ ಹಳ್ಳಿ, ಬೆಳಗಾವಿ ಘಟನೆ ಸೇರಿದಂತೆ, ಎಲ್ಲದರಲ್ಲೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಪೊಲೀಸರ ಲಾಠಿ ಚಾರ್ಜ್ ವಿಚಾರವಾಗಿ ಮಾತನಾಡಿ, ಸರ್ಕಾರ ಈ ಕೂಡಲೇ  ಶಾಂತಿಮೂಡಿಸುವ ಕೆಲಸ ಮಾಡಬೇಕು. ಮೊದಲೇ ಎರಡು ಸಮುದಾಯವನ್ನು  ಕರೆಸಿ ಮಾತನಾಡಬಹುದಿತ್ತು ಇದೀಗ ಎರಡೂ ಸಂಘಟನೆಗಳು ಕೂಡ  ಶಾಂತಿಯಿಂದಿರಬೇಕು. ಗೋಲಿಬಾರ್ ಆಗ್ತಿದೆ ಅಂದರೆ ಇಂಟೆಲಿಜೆನ್ಸ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ವಿಜಯಪುರ ದಲಿತ ಯುವಕನ ಹತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 21ನೇ ಶತಮಾನ ಬಂದ್ರೂ ಇಂತ ಅಮಾನವೀಯ ಘಟನೆಗಳು ನಡೆಯುತ್ತಿದೆ. ಅದನ್ನ ನಿಯಂತ್ರಿಸುವ ಕೆಲಸ ಆಗಬೇಕು. ಮೊದಲು ತಪ್ಪಿತಸ್ಥರನ್ನ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಖಂಡ್ರೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next