Advertisement
ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೇ. 70 ರಷ್ಟು ಅಹಿಂದ ವರ್ಗಕ್ಕೆ ಸೇರಿದ ಮಕ್ಕಳೇ ಇರುವ ಈ 2 ಶಾಲೆಗಳಿಗೆ 2007 ರಿಂದ ಅನುದಾನ ನೀಡಲಾಗುತ್ತಿದೆ. ಆದರೆ ಮಂಗಳೂರಿನಲ್ಲಿ ನಡೆದ ಗಲಭೆ ವಿಚಾರವಾಗಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಗುರಿಯಾಗಿಸಿ ಈಗ ಸರಕಾರ ಅನುದಾನ ಕಡಿತಗೊಳಿಸಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಹಣವನ್ನು ಕ್ರಿಶ್ಚಿಯನ್ ಮಿಷನರಿಗಳಿಗೆ, ದರ್ಗಾ, ಮಸೀದಿಗಳ ಅಭಿವೃದ್ಧಿಗೆ ನೀಡುತ್ತಿದೆ. ಉಡುಪಿಯಲ್ಲಿಯೂ ಬಿಜೆಪಿ ಭಿಕ್ಷೆ ಬೇಡಿ ಆ ಮಕ್ಕಳ ಅನ್ನಕ್ಕೆ ನೆರವು ನೀಡುವುದಾಗಿ ತಿಳಿಸಿದರು.
ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಕೊಲೆ ಹಾಗೂ ಹಲ್ಲೆ ಪ್ರಕರಣಗಳಲ್ಲಿ ವ್ಯವಸ್ಥಿತ ಸಂಚು ರೂಪಿಸುತ್ತಿರುವ ಪಿಎಫ್ಐ ಹಾಗೂ ಕೆಎಫ್ಡಿಯನ್ನು ರಾಜ್ಯ ಸರಕಾರ ತತ್‌ಕ್ಷಣ ನಿಷೇಧಿಸಿ ಜನ ಸಾಮರಸ್ಯದಿಂದ ಬದುಕಲು ವ್ಯವಸ್ಥೆ ಮಾಡಬೇಕಿದೆ. ಮೂಲ್ಕಿ ಸುಂದರಾಂ ಶೆಟ್ಟಿ ಹೆಸರನ್ನು ರಸ್ತೆಗೆ ನಾಮಕರಣಗೊಳಿಸುವ ವಿಚಾರದಲ್ಲಿ ರಾಜಕೀಯ ಬೇಡ. ಮೂಡಬಿದಿರೆಯ ಕಾವ್ಯ ಸಾವಿನ ಸಂಬಂಧ ನಿಷ್ಪಕ್ಷಪಾತ ತನಿಖೆಯಾಗಲಿ. ನಗರಸಭಾ ವ್ಯಾಪ್ತಿಯ ಹೈಟೆಕ್ ಮೀನು ಮಾರುಕಟ್ಟೆಯ ನಿರ್ವಹಣೆ ಸರಿಯಿಲ್ಲ. ಉಡುಪಿಯಲ್ಲಿ ಸುಮಾರು ಆರು ಸಾವಿರ ಪಡಿತರ ಚೀಟಿಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ. ಬಡವರಿಗೆ ಸಮಸ್ಯೆಗಳಾಗುತ್ತಿದ್ದು, ಸರಕಾರ ಶೀಘ್ರ ಕಾರ್ಡ್ ವ್ಯವಸ್ಥೆ ಮಾಡಬೇಕಿದೆ ಎಂದು ಮಟ್ಟಾರು ಒತ್ತಾಯಿಸಿದರು. ಭ್ರಷ್ಟ ಸರಕಾರ
ಆಡಳಿತ ವೈಫಲ್ಯವನ್ನು ಮರೆಮಾಚುವ ಸಲುವಾಗಿ ಲಿಂಗಾಯಿತ ಧರ್ಮವನ್ನು ಬೇರೆ ಬೇರೆ ಮಾಡಲು ಹೊರಟಿರುವ ಸರಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಡಿಕೆಶಿ ಬಳಿ 3,000 ಕೋ. ರೂ. ಗೂ ಅಧಿಕ ಅಘೋಷಿತ ಆಸ್ತಿ ಪತ್ತೆಯಾಗಿದ್ದು, ರಮೇಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಟಾಳ್ಕರ್ ಬಳಿಯೂ ಅಕ್ರಮ ಆಸ್ತಿ ಸಿಕ್ಕಿತ್ತು. ರಾಜ್ಯ ಸರಕಾದರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
Related Articles
Advertisement
“ಹೆಜಮಾಡಿ ಬಂದರು: ರಾಜ್ಯದ ಪಾಲು ನೀಡಲಿ’ಹೆಜಮಾಡಿ ಬಂದರು ನಿರ್ಮಾಣ ಸಂಬಂಧ ಜಿಲ್ಲೆಯ ಮೀನುಗಾರಿಕಾ ಮುಖಂಡರ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿದಾಗ 140 ಕೋ. ರೂ. ವೆಚ್ಚದ ಯೋಜನೆಯ ಶೇ. 50 ರಷ್ಟು ಅಂದರೆ 70 ಕೋ. ರೂ. ಯನ್ನು ತತ್‌ಕ್ಷಣ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ. ಉಳಿದ 70 ಕೋ.ರೂ. ಅನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಲಿ. ಇದೇ ವೇಳೆ ಮೀನುಗಾರರನ್ನು ಕೃಷಿಕರಂತೆ ಪರಿಗಣಿಸಿ ಸವಲತ್ತು ನೀಡಲು ಹಾಗೂ ಮೀನುಗಾರಿಕಾ ಸಲಕರಣೆಗಳಿಗೆ ಹೆಚ್ಚಿರುವ ಜಿಎಸ್‌ಟಿಯನ್ನು ಶೇ. 5 ರಷ್ಟು ಇಳಿಕೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಮಟ್ಟಾರು ಹೇಳಿದರು. ಕಾಂಗ್ರೆಸ್‌ನಿಂದ ಮರಳು ದಂಧೆ
ಜಿಲ್ಲೆಯಲ್ಲಿ ಕಡೆಗೂ ಮರಳುಗಾರಿಕೆಗೆ ಅವಕಾಶ ನೀಡಲಾಗಿದ್ದು, ಆದರೆ ಸಾಂಪ್ರದಾಯಿಕ ಮರಳುಗಾರಿಕೆಗೆ ಜಿಲ್ಲಾಡಳಿತ ವಿಧಿಸಿರುವ ಕೆಲವೊಂದು ನಿರ್ಬಂಧ ಸರಿಯಲ್ಲ. ಅರ್ಜಿ ಸಲ್ಲಿಸಲು ಕಾಂಗ್ರೆಸ್‌ನವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕರಾವಳಿಗೆ ಪ್ರತ್ಯೇಕ ಮರಳು ನೀತಿ ಇನ್ನೂ ರೂಪಿಸಿಲ್ಲ. ಮರಳು ದಂಧೆ ಮೂಲಕ ಕಾಂಗ್ರೆಸ್ ಹಣ ಮಾಡಲು ಹೊರಟಿದೆ ಎಂದು ಮಟ್ಟಾರು ಆರೋಪಿಸಿದರು.