Advertisement

ಹಾಲು ಉತ್ಪಾದಕರ ಬದುಕು ಸುಧಾರಿತಗೊಳಿಸಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಸರಕಾರ

05:39 PM Oct 03, 2020 | mahesh |

ಕಾಸರಗೋಡು: ಹಾಲು ಉತ್ಪಾದಕರ ಬದುಕು ಸುಧಾರಿತಗೊಳಿಸಲು ವಿವಿಧ ಯೋಜನೆಗಳನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್‌ ತಿಳಿಸಿದರು.

Advertisement

ಅಜಾನೂರು ಗ್ರಾಮ ಪಂಚಾಯತ್‌ನಲ್ಲಿ ಕ್ಷೀರ ಗ್ರಾಮಂ ಯೋಜನೆ ಉದ್ಘಾಟಿಸಿ ಅವರು ಮಾತನಾಡಿ, 4 ವರ್ಷಗಳಲ್ಲಿ ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ದೊಡ್ಡ ಪ್ರಗತಿಯುಂಟಾಗಿದೆ ಎಂದರು.

ಅಜಾನೂರು ಗ್ರಾ.ಪಂ. ಅಧ್ಯಕ್ಷ ಪಿ. ದಾಮೋದರನ್‌ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದನೆ ಇಲಾಖೆ ಜಿಲ್ಲಾ ಡೆಪ್ಯೂಟಿ ಡೈರೆಕ್ಟರ್‌ ಮಹೇಶ್‌ ನಾರಾಯಣನ್‌ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಎಂ. ಗೌರಿ ಪ್ರಧಾನ ಭಾಷಣ ಮಾಡಿದರು. ಉಪಾಧ್ಯಕ್ಷ ಕರುಣಾಕರನ್‌ ಕುನ್ನತ್‌, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಪಿ.ಪಿ. ನಾರಾಯಣನ್‌, ಕೆ. ಸುಧಾಕರನ್‌ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್‌ ಪಂಚಾಯತ್‌ ಉಪಾಧ್ಯಕ್ಷೆ ಅನಿತಾ ಗಂಗಾಧರನ್‌ ಸ್ವಾಗತಿಸಿದರು. ಕಾಂಞಂಗಾಡು ಹಾಲು ಉತ್ಪಾದನೆ ಅಭಿವೃದ್ಧಿ ಅಧಿಕಾರಿ ವಿ. ಮನೋಹರನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next