Advertisement
ಚಾಮರಾಜಪೇಟೆ ಟಿ.ಆರ್.ಮಿಲ್ ಸಮೀಪದ ಲಿಂಗಾಯತ ರುದ್ರಭೂಮಿಯಲ್ಲಿ ಬುಧವಾರ ಸಂಜೆ ಗೌರಿ ಲಂಕೇಶ್ ಮಣ್ಣಲ್ಲಿ ಮಣ್ಣಾದರು.ಮೂರು ಸುತ್ತು ಕುಶಾಲು ತೋಪು ಹಾರಿಸಿ ಗೌರವ ಸೂಚಿಸಲಾಯಿತು.
ಚಿತ್ರ ರಂಗದ ಗಣ್ಯರು, ಪ್ರಗತಿ ಪರ ಸಂಘಟನೆಗಳ ಮುಖಂಡರು, ಪತ್ರಕರ್ತರು ಅಪಾರ ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆದರು.
Related Articles
Advertisement
ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಗುಪ್ತಚರ ವಿಭಾಗದ ವೈಫಲ್ಯವಿದೆ.ತಮಗೆ ಪ್ರಾಣ ಬೆದರಿಕೆ ಇದೆ ಎಂದು ಗೃಹ ಸಚಿ ವರನ್ನು ಭೇಟಿಯಾಗಲು ಮುಂದಾಗಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ, ಗುಪ್ತಚರ ವಿಭಾಗ ಎಚ್ಚರಿಕೆ ವಹಿಸಬೇ ಕಿತ್ತು.– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಗೌರಿ ಹತ್ಯೆ ಪ್ರಕರಣದ ತನಿಖೆಗೆ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಹಿಂದೆ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರೂ ಇದುವರೆಗೆ ಆರೋಪಿಗಳ ಪತ್ತೆಯಾಗಿಲ್ಲ. ಹೀಗಿರುವಾಗ ಸಿಐಡಿಯ ಭಾಗವಾಗಿರುವ ಎಸ್‌ಐಟಿ ತನಿಖೆ ಮಾಡಿದರೆ ಆರೋಪಿಗಳು ಪತ್ತೆಯಾಗುತ್ತಾರೆ ಎಂಬ ಖಚಿತತೆ ಇಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲೇ ಬೇಕು.
– ಎಸ್.ಸುರೇಶ್ ಕುಮಾರ್, ಬಿಜೆಪಿ ವಕ್ತಾರ ಗೌರಿ ಲಂಕೇಶ್ ಹತ್ಯೆ ಪೂರ್ವ ನಿಯೋಜಿತ ಕೃತ್ಯವಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ
ತನಿಖೆಯಾಗಬೇಕು.
– ಬಿ.ಜನಾರ್ದನ ಪೂಜಾರಿ, ಕಾಂಗ್ರೆಸ್ ಹಿರಿಯ ಮುಖಂಡ ರಾಜ್ಯದಲ್ಲಿ ಗುಪ್ತಚರ ಇಲಾಖೆಯ ತಂಡ ಸರಿಯಿದೆ. ಆದರೆ, ಕೆಂಪಯ್ಯ, ರಾಮಲಿಂಗಾರೆಡ್ಡಿ ಮತ್ತು ಸಿದ್ದರಾಮಯ್ಯ ಅವರ
ಪೈಕಿ ಗೃಹ ಸಚಿವರಾರು ಎಂಬ ಗೊಂದಲವಿದೆ. ಈ ಗೊಂದಲ ಬಗೆಹರಿದು ಅಧಿಕಾರಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬಿ
ಅವರಷ್ಟಕ್ಕೇ ಕೆಲಸ ಮಾಡಲು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ.
– ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಕುರಿತಂತೆ ಸಿಐಡಿ ತನಿಖೆ ನಡೆಯುತ್ತಿದ್ದರೂ ಇದುವರೆಗೆ ಆರೋಪಿಗಳ ಸುಳಿವು ಸಿಗುತ್ತಿಲ್ಲ.
ಅದೇ ರೀತಿ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇದೀಗ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹೀಗಾಗಿ ಈ ಎಲ್ಲಾ ಹತ್ಯೆಗಳ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಬೇಕು.
– ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕರ್ನಾಟಕದಲ್ಲಿ ಹಿರಿಯ ಪತ್ರಕರ್ತೆಯ ಹತ್ಯೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಘಟನೆಯನ್ನು ಖಂಡಿಸುತ್ತೇನೆ. ಈ ಕುರಿತಂತೆ ತ್ವರಿತ ತನಿಖೆ ನಡೆದು ಹಂತಕರು ಯಾರೇ ಆಗಿದ್ದರೂ ಕಠಿಣ ಶಿಕ್ಷೆಯಾಗಬೇಕು.
– ಸ್ಮತಿ ಇರಾನಿ, ಕೇಂದ್ರ ಸಚಿವೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೃಷ್ಟಿಸಿರುವ ಅಸಹಿಷ್ಣತೆ ವಾತಾವರಣದ ವಿರುದಟಛಿ ಏಳುವ ಧ್ವನಿಗಳನ್ನು ಹತ್ತಿಕ್ಕುವ ಜನಪ್ರಿಯ ವಿಧಾನವಾಗಿ “ಹತ್ಯೆ’ ಎಂಬ ಕ್ರೂರ ಮಾರ್ಗ ಬಳಕೆಯಾಗುತ್ತಿರುವುದಕ್ಕೆ ಗೌರಿ ಲಂಕೇಶ್ ಕೊಲೆ ನಿದರ್ಶನ.
– ಡಿ.ರಾಜಾ, ಸಿಪಿಐ(ಎಂ) ಮುಖಂಡ ನೀವು ನಿಧನರಾಗಿಲ್ಲ. ನಾವು ಆತಂಕಗೊಂಡಿಲ್ಲ. ಇದರಿಂದ ನಮ್ಮಲ್ಲಿನ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಿದೆ. ನನ್ನ ತಾಯಿಯಂತಿದ್ದ ಗೌರಿ ಲಂಕೇಶ್ ವಿದ್ಯಾರ್ಥಿ ಚಳವಳಿಯ ಅತ್ಯಂತ ಸಮರ್ಥ ಬೆಂಬಲಿಗರಾಗಿದ್ದರು.
– ಕನ್ಹಯ್ಯ ಕುಮಾರ್, ದಲಿತ ವಿದ್ಯಾರ್ಥಿ ಮುಖಂಡ ನಾಡಿನ ಮಾನವೀಯ ಚಿಂತನೆಗಳನ್ನು ಇಟ್ಟುಕೊಂಡು ಹೋರಾಟ ಮಾಡಿದ್ದರು. ವೈಚಾರಿಕ ವಿಚಾರಗಳಿಂದ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದ ಕಾರ್ಯ ಶ್ಲಾಘನೀಯ. ಅವರು ಇಂದು ನಮ್ಮೊಂದಿಗಿಲ್ಲ. ಹತ್ಯೆಗೈದವರಿಗೆ ತಕ್ಕ ಶಿಕ್ಷೆಯಾಗಬೇಕು.
– ಉಮಾಶ್ರೀ, ಸಚಿವೆ ಜನಪರ, ಪ್ರಗತಿಪರ ಮತ್ತು ವೈಚಾರಿಕ ನೆಲೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದೇ ಬಹುದೊಡ್ಡ ಅಪರಾಧ ಎನ್ನುವಂತೆ ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿ ಒಬ್ಬರ ನಂತರ ಒಬ್ಬರು ಗುಂಡಿಗೆ ಬಲಿಯಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವಂತಹುದಾಗಿದೆ. ಗೌರಿ ಲಂಕೇಶ್ ಅವರು ಹಂತಕರ ಗುಂಡಿಗೆ ಬಲಿಯಾಗಿರುವುದು ಖಂಡನೀಯ. ಇಂಥ ಹೇಯ ಕೃತ್ಯ ಎಸಗಿದವರನ್ನು ಹಿಡಿದು ಶಿಕ್ಷಿಸದೇಹೋದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವವೇ ಪ್ರಶ್ನಾರ್ಹವಾಗುತ್ತದೆ.
– ಡಾ| ಶಿವಮೂರ್ತಿ ಮುರುಘಾ ಶರಣರು,
ಚಿತ್ರದುರ್ಗ