Advertisement

7 ಹಂತಗಳ ಪಂಚರಾಜ್ಯ ಮತ ಸಮರ: ಆಯೋಗದಿಂದ ಚುನಾವಣೆಗಳ ವೇಳಾಪಟ್ಟಿ ಬಿಡುಗಡೆ

08:07 PM Jan 08, 2022 | Team Udayavani |

ನವದೆಹಲಿ: ಭಾರತದ ಚುನಾವಣಾ ಆಯೋಗವು ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಶನಿವಾರ, ಜನವರಿ 8 ರಂದು ಪ್ರಕಟಿಸಿದೆ.

Advertisement

ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ದಿನಾಂಕಗಳನ್ನು ಪ್ರಕಟಿಸಿದ್ದಾರೆ.

7 ಹಂತಗಳಲ್ಲಿ ಚುನಾವಣೆ

ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಪಂಚರಾಜ್ಯಗಳಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಉತ್ತರ ಪ್ರದೇಶದಲ್ಲಿ ಫೆ10 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಪಂಚ ರಾಜ್ಯದ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ. ತತ್ ಕ್ಷಣದಿಂದ ಚುನಾವಣಾ ನೀತಿ ಸಂಹಿತೆ ಪಂಚ ರಾಜ್ಯಗಳಲ್ಲಿ ಅನ್ವಯವಾಗಲಿದೆ.

ಫೆ. 14  ರಂದು 2 ನೇ ಹಂತ,  ಮೂರನೇ ಹಂತದ ಚುನಾವಣೆ ಯುಪಿ ಯಲ್ಲಿ ಫೆ. 20 ರಂದು ನಡೆಯಲಿದೆ. 23 ರಂದು ನಾಲ್ಕನೇ ಹಂತದಲ್ಲಿ ಮಣಿಪುರದಲ್ಲಿ,ಯುಪಿ ಯಲ್ಲಿ  ಮತದಾನ ನಡೆಯಲಿದೆ. ಫೆ 27 ರಂದು 5ನೇ ಹಂತ ,ಮಾ 3 ರಂದು 6 ನೇ ಹಂತ ,ಮಾ 7  ರಂದು 7 ನೇ ಹಂತದ ಮತದಾನ ನಡೆಯಲಿದೆ.

Advertisement

ಯಾವುದೇ ರೋಡ್ ಶೋ,ಪಾದಯಾತ್ರೆ, ಸೈಕಲ್, ಬೈಕ್ ಮೆರವಣಿಗೆಗೆ ಅವಕಾಶವಿಲ್ಲ.

ಡಿಜಿಟಲ್ ಪ್ರಚಾರಕ್ಕೆ ಒತ್ತು ನೀಡಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ. 5 ಜನರಿಗೆ ಮಾತ್ರ ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.

ಆನ್ಲೈನ್ ನಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ , ಕೋವಿಡ್ ಹಿನ್ನಲೆಯಲ್ಲಿ ಆನ್ಲೈನ್ ನಲ್ಲಿ ನಾಮ ಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕ್ರಿಮಿನಲ್ ಕೇಸ್ ಗಳಿದ್ದರೆ ಸಾರ್ವಜನಿಕ ಪ್ರಕಟಣೆ ಮಾಡಲೇ ಬೇಕು, ಕಾರಣಗಳನ್ನು ಕೊಟ್ಟು ಪ್ರಕಟಿಸಬೇಕು. ಪಕ್ಷಗಳೂ ಕ್ರಿಮಿನಲ್ ಕೇಸ್ ಹೊಂದಿರುವ ಅಭ್ಯರ್ಥಿಯ ಬಗ್ಗೆ ವೆಬ್ ಸೈಟ್ ಮುಖಪುಟಗಳಲ್ಲಿ ಘೋಷಿಸಬೇಕು.

ಬೂತ್ ನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.

ಮಾಧ್ಯಮಗಳು ಯಾವಾಗಲೂ ಆಯೋಗಕ್ಕೆ ಸಹಕಾರಿಯಾಗಿದ್ದು, ಮಾಧ್ಯಮಗಳು ನಮ್ಮ ಸ್ನೇಹಿತರು.  ಸಾಮಾಜಿಕ ತಾಣಗಳು ಈಗ ಸಹಕಾರಿಯಾಗಿದೆ ಎಂದರು.

ಸಂಪೂರ್ಣ ಲಸಿಕಾಕರಣಕ್ಕೆ ಒತ್ತು

ಜನವರಿ 07 2022 ರ ಅಂಕಿ ಅಂಶಗಳ ಪ್ರಕಾರ ಈಗಾಗಲೇ ಗೋವಾದಲ್ಲಿ 95 % ಮತದಾರರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ,ಉತ್ತರಾಖಂಡದಲ್ಲಿ 99.6% ಮೊದಲ ಡೋಸ್ , 83% ಎರಡನೇ ಡೋಸ್ , ಉತ್ತರಪ್ರದೇಶದಲ್ಲಿ ಮೊದಲ ಡೋಸ್ 90%,ಎರಡನೇ ಡೋಸ್ 52%, ಪಂಜಾಬ್ ನಲ್ಲಿ ಮೊದಲ ಡೋಸ್ 82% 46 % ಮಣಿಪುರದಲ್ಲಿ ಮೊದಲ ಡೋಸ್ 57 % ಎರಡನೇ ಡೋಸ್ 43 % ಜನರು ಎರಡನೇ ಡೋಸ್ ಪಡೆದಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ವೇಳಾ ಪಟ್ಟಿ

ಮೊದಲ ಹಂತ : ಯುಪಿ – 10 ಫೆಬ್ರವರಿ

ಎರಡನೇ ಹಂತ : ಯುಪಿ,ಪಂಜಾಬ್, ಉತ್ತರಾಖಂಡ, ಗೋವಾ – 14 ಫೆಬ್ರವರಿ

ಮೂರನೇ ಹಂತ : ಯುಪಿ – 20 ಫೆಬ್ರವರಿ

ನಾಲ್ಕನೇ ಹಂತ:  ಯುಪಿ – 23 ಫೆಬ್ರವರಿ

ಐದನೇ ಹಂತ:  ಯುಪಿ, ಮಣಿಪುರ – 27 ಫೆಬ್ರವರಿ

ಆರನೇ ಹಂತ : ಯುಪಿ, ಮಣಿಪುರ – 3 ಮಾರ್ಚ್

ಏಳನೇ ಹಂತ : ಯುಪಿ – 7 ಮಾರ್ಚ್

Advertisement

Udayavani is now on Telegram. Click here to join our channel and stay updated with the latest news.

Next