Advertisement
ವರದಿ ಬಗ್ಗೆ ಅಧ್ಯಯ ನಡೆಸಲು ರಚಿಸಲಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದ ರಾಜ್ಯ ಸಂಪುಟ ಉಪ ಸಮಿತಿ ಸಭೆಯಲ್ಲಿ 3 ಸಾಧ್ಯತೆಗಳ ಬಗ್ಗೆ ಸಂಪುಟ ಸಮಿತಿಗೆ ಸಲ್ಲಿಸಲು ತೀರ್ಮಾನಿಸಿದೆ.
Related Articles
Advertisement
ಇವೆಲ್ಲದರ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚೆ ನಡೆಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಧರಿಸಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಪಶ್ಚಿಮಘಟ್ಟಗಳ ರಕ್ಷಣೆ ಅನಿವಾರ್ಯವಾಗಿದ್ದು, ಕಠಿನ ಕ್ರಮ ಅನುಸರಿಸುವುದು ಅಗತ್ಯ ಎಂದು ಅರಣ್ಯ ಇಲಾಖೆ ಹೇಳಿದೆ. ಹೀಗಾಗಿ ಮಧ್ಯಮ ಮಾರ್ಗದ ಅನ್ವೇಷಣೆಗೆ ಸರಕಾರ ಮುಂದಾಗಿದ್ದು, ಜನ ಪ್ರತಿನಿಧಿಗಳ ಸಲಹೆಯನ್ನು ಗಮನ ದಲ್ಲಿಟ್ಟುಕೊಂಡು ಹೆಜ್ಜೆ ಇಡುವುದು ಅನಿವಾರ್ಯವಾಗಿದೆ.
ಸಾಧ್ಯತೆಗಳೇನು?1.ಶಾಸಕರ ಆಗ್ರಹದಂತೆ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಏಕಪಕ್ಷೀಯ ತಿರಸ್ಕಾರ
2.ವಿವಿಧ ಅರಣ್ಯ ಸ್ವರೂಪದಲ್ಲಿ ಇರುವ 16,000 ಚ.ಕೀ. ವ್ಯಾಪ್ತಿಯಲ್ಲಿರುವ ಹಳ್ಳಿಗಳನ್ನು ಹೊರಗಿಟ್ಟು ವರದಿ ಜಾರಿ
3.ಜನವಸತಿ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ಕೆಲ ರಿಯಾಯಿತಿ ಕೋರಿಕೆ