Advertisement

State Budget: ಜುಲೈ 7ರಂದು ರಾಜ್ಯ ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ

03:10 PM Jun 05, 2023 | Team Udayavani |

ದಾವಣಗೆರೆ: ಮುಂದಿನ ಜು. 3 ರಿಂದ ರಾಜ್ಯ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ.‌ 7 ರಂದು ಬಜೆಟ್ ಮಂಡನೆ ಮಾಡಲಾಗುವುದು ಎಂದು ಹಣಕಾಸು ಇಲಾಖೆ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವರು. ರಾಜ್ಯಪಾಲರ ಭಾಷಣ ಕುರಿತು ಚರ್ಚೆ ನಂತರ ಜು. 7 ರ ಶುಕ್ರವಾರ ಬಜೆಟ್ ಮಂಡನೆ ಮಾಡಲಾಗುವುದು. ಇನ್ನೂ ಪೂರ್ವಭಾವಿ ಸಭೆಗಳ ನಡೆದಿಲ್ಲ. ‌ಹಾಗಾಗಿ ಈಗಲೇ ಬಜೆಟ್ ಗಾತ್ರದ ಬಗ್ಗೆ ನಿಖರವಾಗಿ ಹೇಳಲಿಕ್ಕಾಗದು. ಬಿಜೆಪಿ ಸರ್ಕಾರ ಚುನಾವಣಾ ಪೂರ್ವದಲ್ಲಿ 2.43 ಲಕ್ಷ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:Gufi Paintal: ʼಮಹಾಭಾರತʼದ ʼಶಕುನಿ ಮಾಮಾʼ ಖ್ಯಾತಿಯ ನಟ ಗುಫಿ ಪೈಂಟಲ್ ನಿಧನ

ಮಳೆಗಾಲ ಆರಂಭವಾಗುತ್ತಿದೆ ರೈತರಿಗೆ ತೊಂದರೆಯಾಗದಂತೆ ಗೊಬ್ಬರ ಬೀಜ ವಿತರಣೆ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗು ಜಿ.ಪಂ ಸಿಇಒಗಳಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರವಾಹ ಪರಿಸ್ಥಿತಿ ಎದುರಾದರೂ ಅಗತ್ಯ ಕ್ರಮ ತೆಗೆದುಕೊಳ್ಳಲು ಸನ್ನದ್ಧರಾಗಿರಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

Advertisement

ಕಾಕತಾಳಿಯ ಎಂಬಂತೆ ಮುಖ್ಯಮಂತ್ರಿಯಾದ ಮೇಲೆ ಪ್ರಥಮ ಜಿಲ್ಲಾ ಪ್ರವಾಸವಾಗಿ ದಾವಣಗೆರೆಗೆ ಆಗಮಿಸಿದ್ದೇನೆ. ದಾವಣಗೆರೆಯಲ್ಲೇ ತಮ್ಮ ಜನ್ಮ ದಿನದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಗೆ ವಿಶೇಷ ಕೊಡುಗೆ ನೀಡುವ ಬಗ್ಗೆ ನಂತರ ತಿಳಿಸಲಾಗುವುದು ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್ ‌ನಲ್ಲಿ ಚರ್ಚೆ ಮಾಡಲಾಗುವುದು ಕೈಗೊಳ್ಳಲಾಗುವುದು ಎಂದರು.

ಹಿಂದಿನ ಬಿಜೆಪಿ ಸರ್ಕಾರದವರೇ ವಿದ್ಯುತ್ ದರ ಹೆಚ್ಚಳ ಮಾಡಿದ್ದರು. ಆರ್ ಇಸಿ ಪ್ರಸ್ತಾಪಕ್ಕೆ ನಮ್ಮ ಸರ್ಕಾರ ಜಾರಿಗೊಳಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಐಜಿಪಿ ಟಿ.ತ್ಯಾಗರಾಜ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಅರುಣ್, ಜಿ.ಪಂ ಸಿಇಒ ಸುರೇಶ್ ಇಟ್ನಾಳ್, ಜಿಲ್ಲೆಯ‌ ಶಾಸಕರುಗಳಾದ ಕೆ.ಎಸ್ ಬಸವಂತಪ್ಪ, ಶಿವಗಂಗಾ ಬಸವರಾಜ್, ಬಿ.ದೇವೇಂದ್ರಪ್ಪ, ಡಿ.ಜಿ ಶಾಂತನಗೌಡ, ಸೈಯದ್ ಸೈಫುಲ್ಲಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next