Advertisement

ಅನುದಾನವಿಲ್ಲದೆ ನವಲಿ ಡ್ಯಾಂ ಘೋಷಣೆ

03:52 PM Mar 09, 2021 | Team Udayavani |

ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಜಿಲ್ಲೆಗೆ ಸ್ವಲ್ಪ ಖುಷಿ ನೀಡಿದ್ದರೆ, ನೀರಾವರಿ ವಿಚಾರದಲ್ಲಿ ಅನುದಾನ ನೀಡದೇ ನಿರಾಸೆ ಮೂಡಿಸಿದ್ದಾರೆ. ನವಲಿ ಡ್ಯಾಂ ನಿರ್ಮಾಣಕ್ಕೆ ಕ್ರಮ ಎಂದಿದ್ದರೂ ಆರಂಭಿಕ ಅನುದಾನವನ್ನೇ ಘೋಷಿಸಿಲ್ಲ.

Advertisement

ಜನರ ಮಹತ್ವದ ಬೇಡಿಕೆಯಾದ ವಿಮಾನ ನಿಲ್ದಾಣ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತೆ ಕನಸಾಗಿಯೇ ಉಳಿದಿವೆ.ಸಿಎಂ ಬಿಎಸ್‌ವೈ ಬಜೆಟ್‌ನಲ್ಲಿ ಕೆಲವುಯೋಜನೆಗಳು ಜಿಲ್ಲೆಗೆ ಲಭಿಸಲಿವೆಎನ್ನುವ ನಿರೀಕ್ಷೆಯಿತ್ತು. ಈ ಮಧ್ಯೆಯೂ ಕನಕಗಿರಿ ತಾಲೂಕಿನ ಸಿರವಾರ ಬಳಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್‌ ಅಭಿವೃದ್ಧಿ ಪಡಿಸುವ ಕುರಿತು ಸಿಎಂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.ಇನ್ನೂ ನವಲಿ ಡ್ಯಾಂ ನಿರ್ಮಾಣಕ್ಕೆ ಕ್ರಮ ಎನ್ನುವ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಆದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಕುರಿತು ಮಧ್ಯಂತರದ ಮಾತನಾಡಿದ್ದಾರೆ.

ಜೊತೆಗೆ ನಾರಿ ಸುವರ್ಣ ಕುರಿ ತಳಿ ಸಂವರ್ಧನ ಕೇಂದ್ರವನ್ನು ಜಿಲ್ಲೆಗೆಘೋಷಣೆಗೆ ಮಾಡಿದ್ದು, ಈ ಯೋಜನೆಗಳಿಗೆ ಆರಂಭಿಕ ಅನುದಾನ ನೀಡಿಲ್ಲ. ಕೊಪ್ಪಳ ಏತ ನೀರಾವರಿಯೋಜನೆಗೆ ಅನುದಾನ ನೀಡಿಲ್ಲ. ಇದು ಜಿಲ್ಲೆಯ ಜನರಿಗೆ ಬೇಸರದ ಸಂಗತಿ.

ಕೃಷ್ಣಾ ಯೋಜನೆಗೆ ಅನುದಾನ ಸಿಗಲಿಲ್ಲ: ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ ನೀರಾವರಿ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಇನ್ನೂ ಆಲಮಟ್ಟಿ ಜಲಾಶಯ ಎತ್ತರಿಸುವಮೂಲಕ ಯಲಬುರ್ಗಾ, ಕುಷ್ಟಗಿ ಹಾಗೂ ಕೊಪ್ಪಳ, ಕನಕಗಿರಿ ತಾಲೂಕಿಗೆ ಕೃಷ್ಣಾ ಬಿ ಸ್ಕೀಂ ಯೋಜನೆಯ ಕನಸುಇಂದಿಗೂ ಈಡೇರಿಲ್ಲ. ಈ ಯೋಜನೆಗೆಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲೇ7-10 ಸಾವಿರ ಕೋಟಿ ಅನುದಾನಬೇಕಾಗುತ್ತದೆ. ಆದರೆ ಈ ಹಿಂದಿನಎಲ್ಲ ಸರ್ಕಾರಗಳು ಸೇರಿ ಜಿಲ್ಲಾವ್ಯಾಪ್ತಿಯಲ್ಲಿ 2 ಸಾವಿರ ಕೋಟಿ ಮಾತ್ರಮಂಜೂರು ಮಾಡಿವೆ. ಇನ್ನು ಕಾಲುವೆ ಕಾಮಗಾರಿಗಳೇ ಪ್ರಗತಿಯಲ್ಲಿವೆ. ಜಿಲ್ಲೆಯ ಎಲ್ಲ ಶಾಸಕರ, ಸಂಸದರೂ ಜನರಿಗೆ ನೀರಾವರಿ ಯೋಜನೆಯ ಕನಸು ಬಿತ್ತಿಯೇ ಅ ಧಿಕಾರದ ಗದ್ದುಗೆ ಹಿಡಿದಿದ್ದಾರೆ.

ವಾಗ್ಧಾನ ಮರೆತ ಸಿಎಂ: ಸ್ವತಃ ಈ ಹಿಂದೆಯೇ ಬಿ.ಎಸ್‌. ಯಡಿಯೂರಪ್ಪ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಜಿಲ್ಲೆಯಲ್ಲಿ ಸಮಾವೇಶ ಮಾಡಿಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೋದಿ ಅವರ ಕೈಕಾಲು ಹಿಡಿದಾದ್ರೂ 1 ಲಕ್ಷ ಕೋಟಿ ರೂ. ಅನುದಾನತಂದು ಕೃಷ್ಣಾ ಕೊಳ್ಳದ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುವ ವಾಗ್ಧಾನಮಾಡಿದ್ದರು. ಆದರೆ ಸರ್ಕಾರ 2ನೇಬಜೆಟ್‌ ಮಂಡಿಸುತ್ತಿದ್ದರೂ ಕೃಷ್ಣಾಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಮಾತನ್ನಾಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ.

Advertisement

ಉಡಾನ್‌ ಪ್ರಸ್ತಾಪವೇ ಇಲ್ಲ: ಇನ್ನು ಜಿಲ್ಲೆಗೆ ಮೂರು ವರ್ಷಗಳ ಹಿಂದೆಯೇ ಉಡಾನ್‌ಯೋಜನೆ ಘೋಷಣೆಯಾಗಿದೆ.ಆದರೆ ಇಲ್ಲಿವರೆಗೂ ವಿಮಾನ ನಿಲ್ದಾಣನಿರ್ಮಿಸಲು ಸರ್ಕಾರವೇ ಮನಸ್ಸುಮಾಡುತ್ತಿಲ್ಲ. ಜಿಲ್ಲೆಯ ಮುಖಂಡರುಸೇರಿ ಸ್ವತಃ ಸಂಸದ, ಶಾಸಕರೇ ಸಿಎಂ ಅವರನ್ನು ಭೇಟಿ ಮಾಡಿ ವಿಮಾನನಿಲ್ದಾಣದ ಪಸ್ತಾಪ ಮಾಡಿ ಒತ್ತಡ ಹೇರಿದ್ದರು. ಪ್ರಸಕ್ತ ಬಜೆಟ್‌ನಲ್ಲಿವಿಮಾನ ನಿಲ್ದಾಣದ ಪ್ರಸ್ತಾಪದ ಬಹುನಿರೀಕ್ಷೆಯಿತ್ತು. ಆದರೆ ಅದರ ಬಗ್ಗೆ ಚಕಾರ ಎತ್ತಿಲ್ಲ. ಅನುದಾನವನ್ನೂ ಘೋಷಣೆಮಾಡಲಿಲ್ಲ. ಇದು ಜನರ ನಿರೀಕ್ಷೆಯನ್ನೇ ಹುಸಿಯಾಗಿದೆ.

ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಕನಸು:

ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಇದೆ. ಸುಸಜ್ಜಿತ ಜಿಲ್ಲಾಸ್ಪತ್ರೆಯೂ ಇದೆ. ಈಎರಡರ ಸಮನ್ವಯವೂ ನಡೆದಿದೆ.ಇದರೊಟ್ಟಿಗೆ ಜಿಲ್ಲೆಗೆ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯು ದೊರೆತರೆ ಜಿಲ್ಲೆ ಸೇರಿದಂತೆ ಸುತ್ತಲಿನ ಕೆಲ ಜಿಲ್ಲೆಗಳ ಜನರಿಗೂಅನುಕೂಲವಾಗಲಿದೆ. ಆದರೆ ಜಿಲ್ಲೆಗೆಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯೂ ಘೋಷಣೆ ಮಾಡಲಿಲ್ಲ.

ಒಟ್ಟಿನಲ್ಲಿ ಜಿಲ್ಲೆಗೆ ಸಿಎಂ ಬಿಎಸ್‌ವೈ ಬಜೆಟ್‌ ಕೊಪ್ಪಳ ಜಿಲ್ಲೆಯ ಮಟ್ಟಿಗೆ ಒಂದೆರಡುಭರವಸೆ ಮೂಡಿಸಿ ಉಳಿದೆಲ್ಲವುಗಳು ಕನಸಾಗಿಯೇ ಉಳಿಯುವಂತೆ ಮಾಡಿದ್ದಾರೆ. ಘೋಷಣೆ ಮಾಡಿರುವಯೋಜನೆಗಳಿಗೂ ಆರಂಭಿಕ ಅನುದಾನಮೀಸಲಿಡದೇ ಇರುವುದು ನಿಜಕ್ಕೂಜಿಲ್ಲೆಯ ಜನರಲ್ಲಿ ಬೇಸರ ತರಿಸಿದೆ. ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಅವರು ಎರಡು ಪ್ರಮುಖ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಗ್ರೀನ್‌ ಸಿಗ್ನಲ್‌ ಸಿಕ್ಕಂತಾಗಿದೆ.

ನಿರಾಶಾದಾಯಕ ಬಜೆಟ್‌ :

ಬಿಎಸ್‌ವೈ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ಮಹತ್ವದ ಯೋಜನೆಗಳೇ ಇಲ್ಲ.ಜನತೆ ತೈಲದ ಬೆಲೆ ಏರಿಕೆಯಿಂದ ತೀವ್ರ ತೊಂದರೆಅನುಭವಿಸುತ್ತಿದ್ದಾರೆ. ಇಂಧನದ ಮೇಲಿನ ಸುಂಕಇಳಿಕೆ ಮಾಡುವ ನಿರೀಕ್ಷೆಯಿತ್ತು. ಆದರೆ ಸುಂಕಇಳಿಸದೇ ಜನರಿಗೆ ಹೊರೆಯನ್ನೇ ಮಾಡಿದ್ದಾರೆ.ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ಮೀಸಲಿಟ್ಟಿಲ್ಲ. ಇದೊಂದು ನಿರಾಶಾದಾಯಕ ಬಜೆಟ್‌. – ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ

ವಲಯವಾರು ಅನುದಾನ ಮೀಸಲು :

ವಲಯವಾರು ಅನುದಾನ ಮೀಸಲಿಟ್ಟಿದ್ದಾರೆ. ಕಡಿಮೆಬಡ್ಡಿಯಡಿ ಸಾಲ ಸೌಲಭ್ಯ ಕಲ್ಪಿಸಿ ಮಹಿಳೆಯರ ಉದ್ಯಮಸ್ಥಾಪನೆಗೆ ಒತ್ತು ನೀಡಿದ್ದಾರೆ. ಜಿಲ್ಲೆಗೆ ತೋಟಗಾರಿಕೆಪಾರ್ಕ್‌ ಘೋಷಣೆ ಮಾಡಿದ್ದಾರೆ. ಇದರಿಂದ ಹೊಸತಳಿಗಳ ಬಗ್ಗೆಯೂ ಅಭಿವೃದ್ಧಿ ಸಾಧ್ಯವಾಗಲಿದೆ.ನವಲಿ ಡ್ಯಾಂ ನಿರ್ಮಾಣಕ್ಕೆ ಆಂಧ್ರ, ತೆಲಂಗಾಣರಾಜ್ಯಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜೊತೆಗೆ ಉಡಾನ್‌ ಯೋಜನೆ, ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯ ಬಗ್ಗೆ ಕೇಳಿಕೊಂಡಿದ್ದೆವು. ಮುಂದಿನ ದಿನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು. – ಸಂಗಣ್ಣ ಕರಡಿ, ಕೊಪ್ಪಳ ಸಂಸದ

ಕಲ್ಯಾಣ ಕರ್ನಾಟಕದ ಪ್ರಗತಿಗೆ ನಾಂದಿ :

ಕೋವಿಡ್ ದಿಂದ ಜನತೆ ಮತ್ತು ಸರಕಾರದ ಆದಾಯ ಕುಸಿತವಾಗಿದ್ದರೂ ಸಿಎಂ ಮಂಡಿಸಿರುವ ಬಜೆಟ್‌ ಅತ್ಯುತ್ತಮವಾಗಿದೆ. ಕಲ್ಯಾಣ ಕರ್ನಾಟಕಕ್ಕೆ 1500 ಕೋಟಿ ಹಣ ಮೀಸಲಿಡುವ ಮೂಲಕ ಕಲ್ಯಾಣಕರ್ನಾಟಕದ ಪ್ರಗತಿಗೆ ನಾಂದಿ ಹಾಡಿದ್ದಾರೆ. ಕಳೆದ ವರ್ಷ ಅಂಜನಾದ್ರಿಗೆ 20 ಕೋಟಿ ನೀಡಿದ್ದು, ಈ ಹಣ ಖರ್ಚು ಮಾಡಿದ ನಂತರ ಪುನಃ ಹಣ ಮಂಜೂರಿ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಆಂಧ್ರ, ತೆಲಂಗಾಣ ರಾಜ್ಯಗಳ ಜತೆ ಮಾತನಾಡಿದ ನಂತರ ನವಲಿ ಡ್ಯಾಂ ಹೆಚ್ಚುವರಿ ಹಣ ನೀಡಲು ಸಿದ್ಧ ಎಂದು ತಿಳಿಸಲಾಗಿದೆ. – ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕರು

ಮೂಗಿಗೆ ತುಪ್ಪ ಸವರುವ ಕೆಲಸ :

ರೈತರೆಷ್ಟು ಸಂಕಷ್ಟದಲ್ಲಿದ್ದಾರೆನ್ನುವ ಗಂಭೀರತೆ ಅರಿವು ಸರ್ಕಾರಕ್ಕಿಲ್ಲ. ಈ ಬಜೆಟ್‌ನಿಂದಮೂಗಿಗೆ ತುಪ್ಪ ಒರೆಸುವ ಕೆಲಸವಾಗಿದೆ. ಉ.ಕ. ನೀರಾವರಿ ಯೋಜನೆಗಳಿಗೆ 6 ಸಾವಿರ ಕೋಟಿ ರೂ. ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಕೃಷ್ಣಾ ಬಿ ಸ್ಕೀಂ ಕೊಪ್ಪಳ ಏತ ನೀರಾವರಿಗೆ ಏಷ್ಟಿದೆಯೋ ಸ್ಪಷ್ಟಪಡಿಸಿಲ್ಲ. ಒಟ್ಟಾರೆಯಾಗಿ ಇದು ನಿರಾಸೆಯ ಬಜೆಟ್‌ ಆಗಿದ್ದು, ಕೋವಿಡ್ ದಿಂದಾಗಿ ರೈತರ ಸಾಲ ಮನ್ನಾ ಮಾಡಬೇಕಿತ್ತು ಅದು ಸಾಧ್ಯವಾಗದೇ, ಇದು ರೈತ ವಿರೋಧಿ  ಬಜೆಟ್‌ ಆಗಿದೆ. – ಅಮರೇಗೌಡ ಪಾಟೀಲ ಬಯ್ಯಾಪೂರ, ಕುಷ್ಟಗಿ ಶಾಸಕ

 

-­ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next