Advertisement

ನೇಕಾರ ಸಮುದಾಯದಲ್ಲಿ ಹರ್ಷದ ಝೇಂಕಾರ

03:40 PM Mar 09, 2021 | Team Udayavani |

ಗುಳೇದಗುಡ್ಡ: ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್‌ನಲ್ಲಿ ಗುಳೇದಗುಡ್ಡಕ್ಕೆ ಜವಳಿ ಪಾರ್ಕ್‌ ಸ್ಥಾಪನೆಗೆ ಘೋಷಣೆ ಮಾಡಿದ್ದು, ಪಟ್ಟಣದ ಜನರಲ್ಲಿಸಂತಸ ಮೂಡಿಸಿದೆ. ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ.

Advertisement

ಮಾಜಿ ಸಿಎಂ, ವಿಪಕ್ಷ ನಾಯಕ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರ ಪ್ರಯತ್ನ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಳಜಿಯ ಫಲವಾಗಿ ಜವಳಿ ಪಾರ್ಕ್‌ ಘೋಷಣೆಯಾಗಿದೆ. ಗುಳೇದಗುಡ್ಡ ಪಟ್ಟಣ ಮೂಲತಃ ನೇಕಾರಿಕೆಪಟ್ಟಣವಾಗಿದ್ದು, ನೇಕಾರಿಕೆಗೆ ಸರಿಯಾದ ಪ್ರೋತ್ಸಾಹ ಸಿಗದಿರುವುದಕ್ಕೆ ಪಟ್ಟಣದಿಂದ 10-15 ಸಾವಿರದಷ್ಟು ಜನರು ಬೆಂಗಳೂರು, ಪುಣೆ, ನಾಸಿಕ್‌ ಸೇರಿದಂತೆ ಅನೇಕ ಕಡೆ ಉದ್ಯೋಗ ಅರಸಿ ಗುಳೆಹೋಗಿದ್ದಾರೆ. ಇದರಿಂದ ಮತಕ್ಷೇತ್ರ ಸಹ ಕೈ ತಪ್ಪಿ ಹೋಗಿತ್ತು. ಮತ್ತಷ್ಟು ಅಭಿವೃದ್ಧಿಯಿಂದ ಹಿಂದೆ ಸರಿದಿತ್ತು. ಹೀಗಾಗಿ ಪಟ್ಟಣದ ಜನರಿಗೆ ಉದ್ಯೋಗ ಕಲ್ಪಿಸಲು ಜವಳಿ ಪಾರ್ಕ್‌ ಸ್ಥಾಪನೆಗೆ ಆಗ್ರಹಿಸುತ್ತ ಬರಲಾಗಿತ್ತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸರಕಾರಕ್ಕೆ ಮೇಲಿಂದ ಮೇಲೆ ಪತ್ರಗಳನ್ನು ಬರೆಯುವ ಮೂಲಕ ಕ್ಷೇತ್ರದಲ್ಲಾಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವಲ್ಲಿ ಹಚ್ಚಿನ ಕಾಳಜಿ ವಹಿಸಿದ್ದಾರೆ. ಅವರ ಕಾಳಜಿಯ ಪರಿಣಾಮವೇ ಇಂದು ಜವಳಿ ಪಾರ್ಕ್‌ ಬಜೆಟ್‌ನಲ್ಲಿ ಘೋಷಣೆಯಾಗಿದೆ.

ಗುಳೇದಗುಡ್ಡಕ್ಕೆ ಜವಳಿ ಪಾರ್ಕ್‌ ಸ್ಥಾಪನೆ ಕೇವಲ ಘೋಷಣೆಯಷ್ಟೇ ಆಗದೇ ಕೂಡಲೇಕಾರ್ಯರೂಪಕ್ಕೆ ಬರಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಬಜೆಟ್‌ನಲ್ಲಿ ಜವಳಿ ಪಾರ್ಕ್‌ ಮಂಜೂರು ಮಾಡಿದ್ದು, ಜನರಲ್ಲಿ ಸಂತಸದ ವಿಚಾರವಾಗಿದ್ದು, ಅದರ ಜತೆಗೆ ಅವಿಪಕ್ಷ ನಾಯಕ ಶಾಸಕ ಸಿದ್ದಾಮಯ್ಯನವರು ನೂತನ ತಾಲೂಕಿಗೆ ಸಂಪೂರ್ಣ ಆಡಳಿತ ನೀಡಲು ಮಿನಿ ವಿಧಾನಸೌಧ, ತಾಲೂಕುಕೋರ್ಟ್‌ ಕಟ್ಟಡ ನಿರ್ಮಾಣ, ಗುಳೇದಗುಡ್ಡನಗರದಲ್ಲಿ ಐತಿಹಾಸಿಕ ಪ್ರವಾಸಿ ತಾಣಗಳ ಟ್ರೀ ಪಾರ್ಕ್‌ ಸ್ಥಾಪನೆ, ಶ್ರಿ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಘಟಕ ಸೇರಿದಂತೆ ಇನ್ನಿತರೆಬೇಡಿಕೆಗಳನ್ನು ಬಜೆಟ್‌ನಲ್ಲಿ ಘೋಷಿಸಬೇಕೆಂದುಪತ್ರ ಬರೆದಿದ್ದರು. ಸದ್ಯ ಜವಳಿ ಪಾರ್ಕ್‌ ಒಂದೇ ಘೋಷಣೆ ಮಾಡಿದ್ದು, ಸರಕಾರ ಆ ಎಲ್ಲ ಬೇಡಿಕೆ ಈಡೇರಿಸಬೇಕಿದೆ.

ಗುಳೇ ಹೋಗುವುದನ್ನು ತಡೆಗಟ್ಟಲು ಜವಳಿಪಾರ್ಕ್‌ ಸ್ಥಾಪನೆಮಾಡುವ ನಿರ್ಧಾರ ಮಂಡನೆ ಹಾಗೂ ಸಂಕಷ್ಟದಲ್ಲಿರುವ ಕೈಮಗ್ಗದ ನೇಕಾರರಿಗೆ ನೆರವು ನೀಡುವಉದ್ದೇಶದಿಂದ ಜಾರಿಗೆ ತಂದ ನೇಕಾರರಸಮ್ಮಾನ್‌ ಯೋಜನೆ ಪ್ರಸಕ್ತ ಸಾಲಿಗೂ ಮುಂದುವರಿಸಿರುವುದು ಉತ್ತಮನಿರ್ಧಾರವಾಗಿದೆ. – ಸಿದ್ದು ಅರಕಾಲಚಿಟ್ಟಿ, ಬಿಜೆಪಿ ಉಪಾಧ್ಯಕ್ಷ ಬಾದಾಮಿ ಮಂಡಳ

Advertisement

ಮುಖ್ಯಮಂತ್ರಿಯಡಿಯೂರಪ್ಪನವರು ಬಜೆಟ್‌ನಲ್ಲಿಗುಳೇದಗುಡ್ಡ ಪಟ್ಟಣದಲ್ಲಿಜವಳಿ ಪಾರ್ಕ್‌ಘೋಷಿಸಿರುವುದು ಸಂತಸದ ವಿಷಯ. ಪಾರ್ಕ್‌ ನಿರ್ಮಾಣದಿಂದಪಟ್ಟಣದ ನೇಕಾರರಿಗೆ ಅನುಕೂಲವಾಗಲಿದ್ದು, ಉದ್ಯೋಗ ಸೃಷ್ಟಿಗೆ ಅವಕಾಶ ಸಿಗಲಿದೆ. ಜವಳಿ ಪಾರ್ಕ್‌ ಘೋಷಣೆ ಮಾಡಿದ ಯಡಿಯೂರಪ್ಪನವರಿಗೆ ಧನ್ಯವಾದಗಳು. –ಸಂಪತ್‌ ರಾಠಿ, ಬಿಜೆಪಿ ಮುಖಂಡರು , ಗುಳೇದಗುಡ್ಡ

ಗುಳೇದಗುಡ್ಡ ನಗರಕ್ಕೆ ಜವಳಿ ಪಾರ್ಕ್‌ ಸ್ಥಾಪನೆಗೆ ಅನುಮೋದನೆನೀಡಿರುವ ರಾಜ್ಯದಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಯುವಮುಖಂಡರಾದ ಹೊಳೆಬಸು ಶೆಟ್ಟರ್‌ ಅವರಿಗೆ ಧನ್ಯವಾದಗಳು. – ಜುಗಲಕಿಶೋರ್‌ ಭಟ್ಟಡ್‌, ಅಧ್ಯಕ್ಷರು, ಗುಳೇದಗುಡ್ಡ ಹ್ಯಾಂಡ್‌ಲ್ಯೂಮ್‌ ಅಸೋಸಿಯೇಶನ್

ಗುಳೇದಗುಡ್ಡ ಪಟ್ಟಣಕ್ಕೆ ಜವಳಿ ಪಾರ್ಕ್‌ ಸ್ಥಾಪನೆ ಮಾಡಬೇಕೆಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಸಿದ್ದರಾಮಯ್ಯನವರು ಸರಕಾರಕ್ಕೆ ಮೇಲಿಂದ ಮೇಲೆ ಪತ್ರ ಬರೆಯುವ ಮೂಲಕ ಜವಳಿ ಪಾರ್ಕ್‌ ಸ್ಥಾಪನೆಗೆ ಒತ್ತು ನೀಡಿದ್ದರು. ಇಂದು ಯಡಿಯೂರಪ್ಪನವರುಬಜೆಟ್‌ನಲ್ಲಿ ಘೋಷಿಸಿದ್ದು ಸಂತಸ ತಂದಿದೆ.  –ಸಂಜಯ ಬರಗುಂಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಾಮನಿರ್ದೇಶಿತ ಸದಸ್ಯ,ಗುಳೇದಗುಡ್ಡ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಮಂಡಿಸಿದ ಬಜೆಟ್‌ ಭಾಷಣದ ಬಜೆಟ್‌ ಆಗಿದೆ. ಯಾವುದೇ ಅಭಿವೃದ್ಧಿ ಪರ ಯೋಜನೆಗಳು ಅದರಲ್ಲಿ ಇಲ್ಲ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರನ್ನು ಪುನಃಶ್ಚೇತನಗೊಳಿಸುವ ಯೋಜನೆಗಳು ಕಾಣದೇ ಅನ್ನದಾತನ ಆಸೆ ಆಕಾಂಕ್ಷೆಗಳಿಗೆ ನಿರಾಸೆ ಒದಗಿಸಿದೆ. ಈ ಬಜೆಟ್‌ ಬಕಾಸುರ ಹೊಟ್ಟೆಗೆ ಹಾಕಿದಂತಾಗಿದೆ.  -ಶರಣು ಬೆಲ್ಲದ, ಹುನಗುಂದ ಪುರಸಭೆ ಅಧ್ಯಕ್ಷರು

 

-ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next