Advertisement

ಪ್ರಧಾನಿ ಹುಟ್ಟುಹಬ್ಬ “ಸೇವಾ ಸಮರ್ಪಣೆ ದಿನ’ವಾಗಿ ಆಚರಣೆ

10:58 PM Sep 09, 2021 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟಿದ ದಿನವಾದ ಸೆಪ್ಟಂಬರ್‌ 17ನ್ನು  ರಾಜ್ಯ ಬಿಜೆಪಿ ವತಿಯಿಂದ ಸೇವೆ ಮತ್ತು ಸಮರ್ಪಣೆ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ.

Advertisement

ನರೇಂದ್ರ ಮೋದಿ 71ನೇ ವರ್ಷಕ್ಕೆ ಕಾಲಿಡುತ್ತಿದ್ದು, ವಿವಿಧ ಮೋರ್ಚಾಗಳ ಮೂಲಕ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಯುವ ಮೋರ್ಚಾದಿಂದ ಅಂದು ರಕ್ತದಾನ ಶಿಬಿರ ಏರ್ಪಡಿಸ ಲಾಗುವುದು.

ಮೋದಿಯವರ ಇದುವರೆಗಿನ  ಜೀವನ ಕ್ರಮ, ಪ್ರಮುಖ ನಿರ್ಧಾರ ಗಳು, ಐತಿಹಾಸಿಕ ನಿರ್ಧಾರಗಳ ಬಗ್ಗೆ ಬೂತ್‌ ಮಟ್ಟದಲ್ಲಿ  ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಮಹಿಳಾ ಮೋರ್ಚಾದವರು ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ವಹಿಸಲಾಗಿದೆ. ಒಬಿಸಿ ಮೋರ್ಚಾ ದವರು ಸಾರ್ವಜನಿಕರಿಗೆ ಲಸಿಕೆ ಹಾಕಿಸುವುದು. ಕೆರೆ ಸ್ವತ್ಛಗೊಳಿಸು ವುದು, ಸಾಧ್ಯವಾದರೆ ಹೂಳೆತ್ತುವುದು, ಕಲ್ಯಾಣಿಗಳ ಸ್ವತ್ಛತೆ ಹಾಗೂ ಅಲ್ಪಸಂಖ್ಯಾಕ ಘಟಕದ ವತಿಯಿಂದ ಅಲ್ಪಸಂಖ್ಯಾಕ ಮಹಿಳೆಯರಿಗೆ ಬಿಜೆಪಿ ಸರಕಾರ ನೀಡಿರುವ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಜವಾಬ್ದಾರಿ ವಹಿಸಲಾಗಿದೆ.

ಮಾಧ್ಯಮ ಮೋರ್ಚಾ ಕೂಡ ಪ್ರಧಾನಿಯವರ ಬಾಲ್ಯ ಜೀವನ, ಆಡಳಿತದಲ್ಲಿ ಅವರ ಕೊಡುಗೆ, ದೇಶದ ಘನತೆ ಹೆಚ್ಚಿಸಲು ಮಾಡಿರುವ ಕಾರ್ಯಕ್ರಮ, ಭಾರತ ವಿಶ್ವಗುರುವನ್ನಾಗಿಸಲು  ಮಾಡಿರುವ ಶ್ರಮ, ಐತಿಹಾಸಿಕ ನಿರ್ಧಾರಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ಮುಂದಾಗಿದೆ.

Advertisement

ಒಂದು ತಿಂಗಳ ಕಾಲ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಜ್ಯ ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸೆ. 13ರಂದು ಬಿಜೆಪಿ ಶಾಸಕಾಂಗ ಸಭೆ :

ಬೆಂಗಳೂರು, ಸೆ. 9: ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಕಲಾಪದಲ್ಲಿ  ವಿಪಕ್ಷಗಳನ್ನು ಎದುರಿಸುವ ನಿಟ್ಟಿನಲ್ಲಿ ಹಾಗೂ ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಕುರಿತು ಸೆ. 13ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ನಮತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಎದುರಾಗುತ್ತಿರುವ ಮೊದಲ ಅಧಿವೇಶನ ಇದಾಗಿದ್ದು,  ವಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ರಾಜ್ಯ ಸರಕಾರದ ವಿರುದ್ಧ  ಬಳಸಲು ಅನೇಕ ಅಸ್ತ್ರಗಳನ್ನು ಇಟ್ಟುಕೊಂಡಿವೆ. ನಾಯಕತ್ವ ಬದಲಾವಣೆಯಾಗಿರುವುದರಿಂದ ಸರಕಾರದಲ್ಲಿ ಒಗ್ಗಟ್ಟಿಲ್ಲ ಎಂಬ ಆರೋಪದ ಮೂಲಕ ಕಾಂಗ್ರೆಸ್‌ ನಾಯಕರು ಸರಕಾರವನ್ನು ಕಟ್ಟಿಹಾಕಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಬೊಮ್ಮಾಯಿ   :

ಬೆಂಗಳೂರು, ಸೆ. 9: ಸಂಪುಟದಲ್ಲಿ  ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ  ಜೆ.ಪಿ.ನಡ್ಡಾ ಜತೆ ಚರ್ಚೆ ನಡೆಸಿಲ್ಲ. ನಡ್ಡಾ ಅವರ ಆರೋಗ್ಯ ಸರಿ ಇಲ್ಲದ ಕಾರಣ  ಚರ್ಚೆ ನಡೆಸಲಾಗಿಲ್ಲ.  ಪಕ್ಷ ಸಂಘಟನೆ ಬಗ್ಗೆ ಗಮನ ಕೊಡಲು ಸೂಚನೆ ನೀಡಿದ್ದಾರೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 

ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲು ಯಾವುದೇ ಅಡ್ಡಿಯಿಲ್ಲ. ಆದರೆ, ಮಾಸ್ಕ್, ಸ್ಯಾನಿಟೈಸರ್‌, ಭೌತಿಕ ಅಂತರದಂಥ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಿಸಿ ಸಂಘಟಕರು ಕೆಲವು ವಿಚಾರ ಹೇಳಿದ್ದಾರೆ. ಆ ಬಗ್ಗೆ ಪರಿಶೀಲಿಸಲಾಗುವುದು. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next