Advertisement

ಐಟಿಐ ಕಾಲೇಜುಗಳಲ್ಲಿ 2011 ಹುದೆ ªಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ

07:04 AM Mar 17, 2017 | |

ವಿಧಾನಪರಿಷತ್‌: ರಾಜ್ಯದ ಐಟಿಐ ಕಾಲೇಜುಗಳಲ್ಲಿ ಖಾಲಿಯಿರುವ 2011 ಹುದ್ದೆ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

Advertisement

ಪ್ರಶ್ನೋತ್ತರ ಚರ್ಚೆ ವೇಳೆ ಬಿಜೆಪಿಯ ಮಹಾಂತೇಶ ಕವಟಗಿ ಮಠ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಬಹಳಷ್ಟು ಹುದ್ದೆಗಳು ಖಾಲಿಯಿರುವುದು ನಿಜ. ತರಬೇತಿಗೆ ಅಗತ್ಯವಾದ ಸಲಕರಣೆಗಳೆಲ್ಲ ಇದ್ದು, ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿದೆ. ತುರ್ತು ಅಗತ್ಯವಿರುವ 2011 ಹುದ್ದೆ ಭರ್ತಿ ಪ್ರಸ್ತಾವ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಒಪ್ಪಿಗೆ ದೊರೆತ ಕೂಡಲೇ ನೇಮಕ ಮಾಡಿಕೊಳ್ಳಲಾಗುವುದು ಎಂದರು.

2014-15ನೇ ಸಾಲಿನಲ್ಲಿ 100 ಹೊಸ ಐಟಿಐ ಕಾಲೇಜು ಆರಂಭಿಸಲಾಯಿತು. 55 ಕಡೆ ಸರ್ಕಾರಿ ಕಟ್ಟಡಗಳಲ್ಲಿ, 45 ಕಡೆ ಬಾಡಿಗೆ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಭೂಮಿ ಲಭ್ಯವಾದ ಕೂಡಲೇ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೂ ಮೊದಲು ಮಾತನಾಡಿದ ಮಹಾಂತೇಶ ಕವಟಗಿಮಠ, “100 ಐಟಿಐ ಕಾಲೇಜುಗಳು
ಶುರುವಾದರೂ ಉಪನ್ಯಾಸಕರು, ತರಬೇತಿದಾರರ ಕೊರತೆ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಶೇ.50ರಷ್ಟು ಹುದ್ದೆಗಳು ಖಾಲಿಯಿರುವುದು ಆತಂಕದ ವಿಷಯ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next