Advertisement

ಸ್ಟಾರ್ಟಪ್‌ ಇಂಡಿಯಾ ಇರಲಿ ಷಟಪ್‌ ಇಂಡಿಯಾ ಬೇಡ

07:00 AM Oct 27, 2017 | Harsha Rao |

ಹೊಸದಿಲ್ಲಿ: ಸ್ಟಾರ್ಟ್‌ ಅಪ್‌ ಇಂಡಿಯಾಗೆ ನಮ್ಮ ಬೆಂಬಲ ಇದೆ. ಆದರೆ ಷಟ್‌ಅಪ್‌ ಇಂಡಿಯಾಗೆ ಬೆಂಬಲ ಇಲ್ಲ ಎಂದಿದ್ದಾರೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ. ದಿಲ್ಲಿಯ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಸ್ಟಾರ್ಟಪ್‌ ಇಂಡಿಯಾ ದಿಂದ ದೇಶದ ಅರ್ಥ ವ್ಯವಸ್ಥೆಗೆ ಅನುಕೂಲ ವಾದರೆ, ಕೇಂದ್ರ ಸರಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಬೆಂಬಲ ಇಲ್ಲವೆಂದಿದ್ದಾರೆ. ಯುಪಿಎ ಸರಕಾರದಲ್ಲಿ ಹಲವು ನ್ಯೂನತೆಗಳಿದ್ದವು ಎನ್ನುವುದನ್ನು ಒಪ್ಪಿಕೊಂಡ ಅವರು, ಮೂರೂವರೆ ವರ್ಷಗಳ ಬಳಿಕ ಹಾಲಿ ಬಿಜೆಪಿ ಸರಕಾರದ ಮೇಲೆ ಜನರ ನಂಬಿಕೆ ಹುಸಿಯಾಗುತ್ತದೆ ಎಂದಿದ್ದಾರೆ.

Advertisement

ನೋಟು ಅಮಾನ್ಯ ಮತ್ತು ಜಿಎಸ್‌ಟಿ ಜಾರಿಯ ಮೂಲಕ ಅರ್ಥ ವ್ಯವಸ್ಥೆಯ ಹೃದಯಕ್ಕೆ ದ್ವಿಘಾತವನ್ನು ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇಟಿÉ ನೀಡಿದ್ದಾರೆ ಎಂದು ಟೀಕಿಸಿದ್ದಾರೆ. ಚೀನ ಪ್ರತಿ ದಿನಕ್ಕೆ 50 ಸಾವಿರ ಉದ್ಯೋಗ ಸೃಷ್ಟಿ ಮಾಡುತ್ತಿದ್ದರೆ, ಭಾರತದಲ್ಲಿ ಪ್ರತಿ ದಿನ 450 ಉದ್ಯೋಗ ಸೃಷ್ಟಿ ಮಾತ್ರವೇ ಆಗುತ್ತದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ದೂರಿದ್ದಾರೆ. 

ವಿವಾಹ ಆಗುವಾಗ ಆಗುತ್ತದೆ…
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ “ಯಾವಾಗ ವಿವಾಹವಾಗ್ತಿàರಿ?’ ಎಂಬ ಪ್ರಶ್ನೆ ಅತ್ಯಂತ ಸಹಜ. ಆದರೆ ಪ್ರತಿ ಬಾರಿಯೂ ಇದನ್ನು ಅವರು ನಿರ್ಲಕ್ಷಿಸುತ್ತಾರೆ. ಈ ಬಾರಿ ಚಾಂಪಿಯನ್‌ ಬಾಕ್ಸರ್‌‌ ವಿಜೇಂದರ್‌ ಸಿಂಗ್‌ ಕೇಳಿದ ಪ್ರಶ್ನೆಗೆ ರಾಹುಲ್‌ ಪ್ರತಿಕ್ರಿಯಿಸದೇ ಇರಲು ಸಾಧ್ಯವಾಗಿಲ್ಲ. ಇದಕ್ಕೆ ಉತ್ತರಿಸಿದ ರಾಹುಲ್‌ “ಯಾವಾಗ ಆಗಬೇಕೋ ಅದು ಆಗಿಯೇ ತೀರುತ್ತದೆ. ನಾನು ವಿಧಿಯ ಮೇಲೆ ನಂಬಿಕೆ ಇರಿಸಿದ್ದೇನೆ’ ಎಂದರು. ರಾಹುಲ್‌ ಭಯ್ನಾ ಯಾವಾಗ ವಿವಾÖವಾಗುತ್ತಾರೆ ಎಂದು ಜನರು ಕೇಳುತ್ತಾರೆ. ಎಲ್ಲರೂ ನಿಮ್ಮ ವಿವಾಹಕ್ಕೆ ಎದುರು ನೋಡುತ್ತಿದ್ದಾರೆ. ನೀವು ಪ್ರಧಾನಿಯಾದ ನಂತರ ವಿವಾಹವಾದರೆ ವಿಶಿಷ್ಟವಾಗಿರುತ್ತದೆ ಎಂದು ವಿಜೇಂದರ್‌ ಸಿಂಗ್‌ ಕೇಳಿದರು. ಇದಕ್ಕೆ ರಾಹುಲ್‌ ಇದು ಅತ್ಯಂತ ಹಳೆಯ ಪ್ರಶ್ನೆ ಎಂದು ಮುಗುಳ್ನಗು ಬೀರಿದರು. ಆರಂಭದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಇದಕ್ಕೆ ಉತ್ತರಿಸಲು ನಿರಾಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next