ಬೆಂಗಳೂರು: ಐಟಿ-ಬಿಟಿ ಮತ್ತು ಸಂಬಂಧಿತ ಉದ್ಯಮಗಳಿಗೆ ಉತ್ತೇಜನ ನೀಡುವ ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್)ಯ 25ನೇ ಆವೃತ್ತಿ ಬುಧವಾರ ಆರಂಭವಾಗಲಿದೆ.
ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಸಹಯೋಗ ದೊಂದಿಗೆ ಬೆಂಗಳೂರು ಅರಮನೆಯಲ್ಲಿ ಶೃಂಗ ಸಭೆ ನಡೆಸಲಾಗುತ್ತಿದೆ. ಶೃಂಗಸಭೆ ನ. 18ರ ವರೆಗೆ ನಡೆಯಲಿದೆ. ಬುಧವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಅವರ ಧ್ವನಿಮುದ್ರಿತ ಸಂದೇಶದೊಂದಿಗೆ ಶೃಂಗಸಭೆಗೆ ಚಾಲನೆ ದೊರೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಫಿನ್‌ಲ್ಯಾಂಡ್ ನ ವಿಜ್ಞಾನ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೂನ್‌ಕೊನೆನ್, ಯುಎಇ ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರ್ಥಿಕತೆ ಮತ್ತು ರಿಮೋಟ್ ವರ್ಕ್ ಅಪ್ಲಿಕೇಶನ್ಸ್‌ನ
ಸಹಾಯಕ ಸಚಿವ ಓಮರ್ ಬಿನ್ ಸುಲ್ತಾನ್ ಅಲ್ ಒಲಾಮ, ಆಸ್ಟ್ರೇಲಿಯಾದ ಸಹಾಯಕ ವಿದೇ ಶಾಂಗ ಸಚಿವ ಟಿಮ್ ವ್ಯಾಟ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶೃಂಗ ಸಭೆಯಲ್ಲಿ 30ಕ್ಕಿಂತ ಹೆಚ್ಚಿನ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 575 ಪ್ರದರ್ಶಕ ಮಳಿಗೆಗಳು ಇರಲಿದ್ದು, 350 ಸ್ಟಾರ್ಟ್‌ಅಪ್ ಗಳಿಗೆ ಸಂಬಂಧಿಸಿದ್ದಾಗಿವೆ.
Related Articles