Advertisement
ಈ ಕುರಿತು ಆರೋಗ್ಯ ಇಲಾಖೆಯು ರವಿವಾರ ಜಿಲ್ಲಾವಾರು ಸಭೆ ನಡೆಸಿದೆ. 2ನೇ ಡೋಸ್‌ಗೆ ಅರ್ಹರಾಗಿರುವ ಫಲಾನುಭವಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುವಂತೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಅಧಿಕಾರಿ ಗಳಿಗೆ ಸೂಚಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಾಹಿತಿ ಕೊರತೆಯಿಂದ ಪೋರ್ಟಲ್‌ಗೆ ಹೆಸರನ್ನು ನೀಡಲು ಸಾಧ್ಯವಾಗಿಲ್ಲ. ಅಂತಹ ಕಡೆಗಳಲ್ಲಿ ಒಂದು ದಿನ ತಡವಾಗಿ ಎರಡನೇ ಡೋಸ್ ಆರಂಭವಾಗಲಿದೆ. ಎರಡನೇ ಡೋಸ್ ಪಡೆಯುವುದು ಒಂದೆರಡು ದಿನ ವ್ಯತ್ಯಯವಾದರೂ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ರಾಜ್ಯದಲ್ಲಿ ಈವರೆಗೆ 5.17 ಲಕ್ಷ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 11.08 ಲಕ್ಷ ಮಂದಿಯನ್ನು ಲಸಿಕೆಗೆ ಆಹ್ವಾನಿಸಿದ್ದು, ಆ ಮೂಲಕ ಒಟ್ಟಾರೆ ಶೇ.47ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ಅದರಲ್ಲೂ ಆರೋಗ್ಯ ಕಾರ್ಯಕರ್ತರಲ್ಲಿ ಶೇ. 53, ಇತರ ಇಲಾಖೆಯ ಮುಂಚೂಣಿ ಕಾರ್ಯಕರ್ತರಲ್ಲಿ ಶೇ.30 ರಷ್ಟು ಗುರಿಸಾಧನೆಯಾಗಿದೆ. 15 ಅಡ್ಡಪರಿಣಾಮ ಪ್ರಕರಣಗಳು ವರದಿಯಾಗಿವೆ. ಮುಂದಿನ ಒಂದು ವಾರ ಮೊದಲ ಡೋಸ್ ನೀಡುವ ಪ್ರಕ್ರಿಯೆ ನಡೆಯಲಿದೆ.