Advertisement

ಜಿನಮಂದಿರ ಸುವರ್ಣ ಮಹೋತ್ಸವ ಆರಂಭ

02:05 PM Jan 28, 2020 | Suhan S |

ಚಳ್ಳಕೆರೆ: ನಗರದ ಭಗವಾನ್‌ ಶ್ರೀ ಬಾಹುಬಲಿ ದಿಗಂಬರ ಜೈನ ಟ್ರಸ್ಟ್‌, ಪಾರ್ಶ್ವನಾಥ ಜಿನಮಂದಿರ ಸಮಾಜದ ಸಂಯುಕ್ತಾಶ್ರಯದಲ್ಲಿ ಜಿನಮಂದಿರದ ಸುವರ್ಣ ಮಹೋತ್ಸವ, ಏಕಶಿಲಾ ಭಗವಾನ್‌ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ ಕಾರ್ಯಕ್ರಮಗಳಿಗೆ ಸೋಮವಾರ ಬೃಹತ್‌ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಯಿತು.

Advertisement

ನಗರದ ಬೆಂಗಳೂರು ರಸ್ತೆಯಲ್ಲಿರುವ ಮಾಜಿ ಸಚಿವ ಡಿ. ಸುಧಾಕರ್‌ ನಿವಾಸದಿಂದ ಜೈನ ಸಮುದಾಯದವರು ಮಂಗಳ ಸ್ನಾನದ ನಂತರ ಮುಕುಟ ಧಾರಣೆ ಮಾಡಿಕೊಂಡರು. ಇಂದ್ರ, ಇಂದ್ರಾಣಿ, ಅಷ್ಟ ಕುಮಾರಿಯರ ಸಹಿತ ಮಂಗಳವಾದ್ಯದೊಂದಿಗೆ ಮೆರವಣಿಗೆ ಪ್ರಾರಂಭವಾಯಿತು. ನೆಹರೂ ವೃತ್ತ, ಬೆಂಗಳೂರು ರಸ್ತೆ, ಮಹಾದೇವಿ ರಸ್ತೆ ಮೂಲಕ ಮೆರವಣಿಗೆ ಜೈನ ಮಂದಿರವನ್ನು ತಲುಪಿತು. ಅಲಂಕೃತ ಆನೆಯನ್ನು ಮೆರವಣಿಗೆಯಲ್ಲಿ ಕರೆತಂದಿದ್ದು ವಿಶೇಷ. ದಕ್ಷಿಣಕನ್ನಡ ಜಿಲ್ಲೆಯ ಚಂಡೆ ಕುಣಿತ ನೆರೆದವರನ್ನು ಆಕರ್ಷಿಸಿತು.

ಮೆರವಣಿಗೆ ಜಿನಮಂದಿರ ತಲುಪಿದ ನಂತರ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಮಾಜಿ ಸಚಿವ ಡಿ. ಸುಧಾಕರ್‌, ಅವರ ಪತ್ನಿ ಹರ್ಷಿಣಿ, ಬಾಹುಬಲಿ ದಿಗಂಬರ ಜೈನ ಟ್ರಸ್ಟ್‌ ಅಧ್ಯಕ್ಷ ಡಿ. ಭರತ್‌ ರಾಜ್‌- ಜ್ವಾಲ, ಪುರಸಭೆ ಮಾಜಿ ಅಧ್ಯಕ್ಷ ಎನ್‌.ಜೆ. ವೆಂಕಟೇಶ್‌-ಗೀತಾ, ಜೈನ ಸಮಾಜದ ಹಿರಿಯ ಮುಖಂಡ ಡಿ. ಅಂಬಣ್ಣ-ಪದ್ಮ, , ಮಹಾವೀರ ಸೂಜಿ, ಸುಭಾಷ್‌ಚಂದ್ರ, ಗೌರಿಪುರ ಪಾರ್ಶ್ವನಾಥ, ಪದ್ಮರಾಜ್‌ ಹಾಗೂ ಡಿ. ಪ್ರಭಾಕರ ದಂಪತಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next