ದೇವನಹಳ್ಳಿ: ತಾಲೂಕಿನಾದ್ಯಂತ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆಸಿ ಪಂಪ್ ಸೆಟ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಶಾಸಕ ನಿಸರ್ಗ ಎಲ್ ಎನ್ ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಕೊರೆಸಿರುವ ಪಂಪ್ ಸೆಟ್‌ಗೆ ಚಾಲನೆ ನೀಡಿ ಮಾತನಾಡಿದರು.
ಶುದ್ಧ ನೀರಿನ ಘಟಕ ನಿರ್ಮಾಣ:ನೀರು ಸಿಗದೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 1200 ರಿಂದ 1500 ಅಡಿಗೆ ಬೋರ್‌ವೆಲ್ ಕೊರೆಸಿದರೂ ನೀರು ಸಿಕ್ಕಿದರೂ ಫ್ಲೋರೈಡ್ ಮುಕ್ತ ನೀರಾಗಿದ್ದು ಇದಕ್ಕಾಗಿ ಶುದ್ಧ ನೀರಿನ ಘಟಕ ನಿರ್ಮಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಇಲ್ಲದೆ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಪರಿಸರ ರಕ್ಷಣೆಗೆ ಮುಂದಾಗಿ: ದಿನದಿಂದ ದಿನಕ್ಕೆ ಭೂಮಿ ಮೇಲಿನ ಶುದ್ಧ ನೀರಿನ ಮಟ್ಟ ಕುಸಿಯುತ್ತಿದೆ. ಈ ಹಿಂದೆ ಗ್ರಾಮಗಳಲ್ಲಿನ ಜಾನುವಾರು, ಪ್ರಾಣಿ ಪಕ್ಷಿಗಳ ಸಂಕುಲ ಜೀವ ಸಂಕುಲ ನಾಡಾಗಿದ್ದು ಇತ್ತೀಚಿನ ದಿನಗಳಲ್ಲಿ ಕುಂಟೆಗಳು ಕಣ್ಮರೆಯಾಗುತ್ತಿದೆ. ಕೆರೆ ಕುಂಟೆಗಳಲ್ಲಿ ಹೂಳೆತ್ತುವ ಮುಖಾಂತರ ಮಳೆ ನೀರನ್ನು ಶೇಖರಿಸಿದರೆ ಬರ ಗಾಲದಲ್ಲಿ ನೀರಿನ ಸಮಸ್ಯೆ ನೀಗಿಸಲು ಸಾಧ್ಯ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಮುನಿ ರಾಜು, ಗ್ರಾಪಂ ಸದಸ್ಯೆ ಧನಲಕ್ಷ್ಮೀ ಹರೀಶ್, ಶ್ರೀಸಾಯಿ ಧರ್ಮ ಚೇತನ ಸೇವಾ ಸಮಿತಿ, ಗ್ರಾಮಸ್ಥರು ಇದ್ದರು.