Advertisement

ಭತ್ತ ಖರೀದಿ ಕೇಂದ್ರ ಶೀಘ್ರ ಆರಂಭಿಸಿ: ಸಚಿವೆ ಶೋಭಾ ಕರಂದ್ಲಾಜೆ

01:20 AM Oct 15, 2022 | Team Udayavani |

ಉಡುಪಿ: ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಇದೆಲ್ಲದರ ನಡುವೆ ಕರಾವಳಿಗರಿಗೆ ಕುಚ್ಚಲಕ್ಕಿ ನೀಡಲು ಕೇಂದ್ರ ಸರಕಾರ ಅನುಮತಿ ನೀಡಿದೆ.

Advertisement

ಹೀಗಾಗಿ ರಾಜ್ಯ ಸರಕಾರ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿ, ರೈತರು ಭತ್ತ ಖರೀದಿ ಕೇಂದ್ರಕ್ಕೆ ಭತ್ತ ನೀಡಲು ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟಾವು ಪೂರ್ವದಲ್ಲೇ ಕೇಂದ್ರ ಸರಕಾರ ಅನುಮತಿ ನೀಡಿರುವುದರಿಂದ ರಾಜ್ಯ ಸರಕಾರ ಕೂಡ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಇಂದ್ರಾಳಿ ರೈಲ್ವೇ ಬ್ರಿಡ್ಜ್ ಸಮಸ್ಯೆ ಗಡ್ಕರಿ ಗಮನಕ್ಕೆ
ಇಂದ್ರಾಳಿ ರೈಲ್ವೇ ಬ್ರಿಡ್ಜ್ ಸಮಸ್ಯೆಯನ್ನು ಈಗಾಗಲೇ ಕೇಂದ್ರದ ಹೆದ್ದಾರಿ ಇಲಾಖೆಯ ಸಚಿವ ನಿತಿನ ಗಡ್ಕರಿ ಅವರ ಗಮನಕ್ಕೆ ತರಲಾಗಿದೆ. ಹೊಸ ಪ್ರಸ್ತಾವನೆಗೆ ರೈಲ್ವೇ ಇಲಾಖೆಯಿಂದ ಅನುಮತಿ ದೊರೆಯುವ ಹಂತದಲ್ಲಿದೆ. ಇದಾದ ತತ್‌ಕ್ಷಣವೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅನುಮತಿ ಸಿಗಲಿದೆ.

ರೈಲ್ವೇ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆ ಹಾಗೂ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. 200 ಮೀಟರ್‌ಗೂ ಕಡಿಮೆ ಇರುವ ಬ್ರಿಡ್ಜ್ ಇದಾಗಿದೆ. ಎರಡೂ ಇಲಾಖೆ ಸೇರಿ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದರು.

Advertisement

ರಾಹುಲ್‌ ಫಿಟ್‌ನೆಸ್‌ ಯಾತ್ರೆ
ಭಾರತ್‌ ಜೋಡೋ ಮೂಲಕ ರಾಹುಲ್‌ ಗಾಂಧಿಯವರ ದೈಹಿಕ ಫಿಟ್‌ನೆಸ್‌ನ ಪ್ರದರ್ಶನ ವಾಗುತ್ತಿದೆ. ದೇಶದ ನೇತೃತ್ವದ ವಹಿಸಲು ಅವರಿಗೆ ಸಾಧ್ಯವೇ? ರಾಹುಲ್‌ ಗಾಂಧಿ ದೈಹಿಕವಾಗಿ ಫಿಟ್‌ ಆಗಿರಬಹುದು. ಮಾನಸಿಕವಾಗಿ ಫಿಟ್‌ ಆಗಿದ್ದಾರಾ? ದೇಶ ಆಳಲು ಅವರು ಶಕ್ತರಿದ್ದಾರಾ ಎಂಬುದನ್ನು ಜನ ನಿರ್ಧರಿಸಿ ತಿರಸ್ಕರಿಸಿದ್ದಾರೆ ಎಂದರು.

ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ?
ಹಿಜಾಬ್‌ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರು ಭಿನ್ನ ತೀರ್ಪು ನೀಡಿರುವುದರಿಂದ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಈ ದೇಶದಲ್ಲಿ ಹಿಜಾಬ್‌ನ ಅಗತ್ಯ ಇದೆಯೋ ಅಥವಾ ಇಲ್ಲವೋ ಎನ್ನುವುದನ್ನು ನ್ಯಾಯಾಲಯ ತೀರ್ಮಾನಿಸಲಿದೆ. ಹಿಜಾಬ್‌ ನಿರಾಕರಣೆ ಸಂಬಂಧ ಇರಾನಿನ ಘಟನೆಗಳು ಭಾರತದ ಮುಸ್ಲಿಂ ಮಹಿಳೆಯರಿಗೆ ಮಾರ್ಗದರ್ಶಕವಾಗಲಿ ಎಂದರು.

ಬೆದರಿಕೆಗೆ ಬಗ್ಗುವುದಿಲ್ಲ
ಪಿಎಫ್ಐ ನಿಷೇಧದ ಬಳಿಕ ಕೆಲವರು ಹತಾಶರಾಗಿ ದ್ದಾರೆ. ಹೀಗಾಗಿ ಹಿಂದೂ ವಿಚಾರಗಳನ್ನು ಮಾತ ನಾಡುವವರಿಗೆ ಬೆದರಿಕೆ ಕರೆ ಮಾಡುತ್ತಿದ್ದು, ಇದ್ಯಾವುದಕ್ಕೂ ಜಗ್ಗುವುದಿಲ್ಲ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next