Advertisement
ತ್ತೈಮಾಸಿಕ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಇಲ್ಲದಿದ್ದರೆ ಬಸ್ ಚಾಲಕ, ನಿರ್ವಾಹಕರಿಗೆ ಸಂಬಳ ಕೊಟ್ಟು, ಇಂಧನ ತುಂಬಿಸಲು ಹಣ ಸಾಕಾಗುವುದಿಲ್ಲ. ಈಗ ಬಹುತೇಕರು ಸ್ವಂತ ವಾಹನಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಎಲ್ಲಾ ಆಯಾಮದಲ್ಲೂ ಖಾಸಗಿ ಬಸ್‌ಗಳ ಮಾಲೀಕರಿಗೆ ನಷ್ಟವಾಗುತ್ತದೆ ಎಂದು ಸರ್ಕಾರದ ಗಮನ ಸೆಳೆದಿದ್ದರು. ಆದರೆ ಸರ್ಕಾರ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದರು. ಆದರೆ ಇನ್ನೆಷ್ಟು ದಿನ ಕಾಯುವುದು, ಬಸ್‌ಗಾಗಿ ಹಾಕಿದ ಬಂಡವಾಳವೂ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಕೆಲವು ಮಾಲೀಕರು ಧೈರ್ಯ ಮಾಡಿ ಸೋಮವಾರ ಬಸ್‌ಗಳನ್ನು ರಸ್ತೆಗಿಳಿಸಿದ್ದಾರೆ. ನಗರದ ಖಾಸಗಿ ಬಸ್ ನಿಲ್ದಾಣವನ್ನು ಸಂಪೂರ್ಣ ಶುಚಿಗೊಳಿಸಿ ಬಸ್‌ಗಳಿಗೆ ಸ್ಯಾನಿಟೈಸ್ ಮಾಡಲಾಯಿತು. ಪ್ರಯಾಣಿಕರಿಗೆ ಸ್ಯಾನಿಟೈಸರ್ ಹಾಕಿ ಮಾಸ್ಕ್ ಕಡ್ಡಾಯಗಿಳಿಸಲಾಗಿತ್ತು. ಪ್ರತಿ ಬಸ್‌ನಲ್ಲಿ 30 ಜನ ಪ್ರಯಾಣಿಸುವಂತೆ ನೋಡಿಕೊಳ್ಳಲಾಯಿತು.
ಚಳ್ಳಕೆರೆ: ಕೊರೊನಾ ಲಾಕ್‌ಡೌನ್‌ನಿಂದ ಕಳೆದ ನಾಲ್ಕು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಸೋಮವಾರದಿಂದ ಪುನರಾರಂಭಗೊಂಡಿತು. ಆದರೆ ಖಾಸಗಿ ಬಸ್ ಗಳನ್ನು ಹತ್ತಲು ಪ್ರಯಾಣಿಕರು ಹಿಂದೇಟು ಹಾಕುತ್ತಿರುವುದು ಕಂಡು ಬಂತು. ಖಾಸಗಿ ಬಸ್ ಮಾಲೀಕರು ಸರ್ಕಾರದ ನಿರ್ದೇಶನದಂತೆ ಲಾಕ್‌ಡೌನ್ ಅವಧಿಯಲ್ಲಿ ರಸ್ತೆಗೆ ಇಳಿಸಿರಲಿಲ್ಲ. ಲಾಕ್‌ಡೌನ್ ತೆರವುಗೊಳಿಸಿದ ನಂತರ ಚಾಲಕರು, ನಿರ್ವಾಹಕರು, ಏಜೆಂಟರು
ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ತಮ್ಮ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಇಂದು ಬೆರಳಣಿಕೆ ಬಸ್‌ಗಳು ಸಂಚರಿಸಿದವು.
ಬಹುತೇಕ ಬಸ್‌ಗಳು ಖಾಲಿಯಾಗಿ ಓಡಾಡುತ್ತಿರುವುದು ಬಸ್ ಮಾಲೀಕರ ಚಿಂತೆಗೆ ಕಾರಣವಾಗಿದೆ. ನಮ್ಮ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿಲ್ಲ. ಗ್ರಾಮೀಣ ಭಾಗದ ಜನತೆ ಖಾಸಗಿ ಬಸ್ ಗಳನ್ನೇ ಅವಲಂಬಿಸಿರುವುದರಿಂದ ಅನಿವಾರ್ಯವಾಗಿ ಧೈರ್ಯ ಮಾಡಿ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಆ. 5 ರಿಂದ ಮತ್ತಷ್ಟು ಬಸ್‌ಗಳು ಸಂಚರಿಸಲಿವೆ.
ಬಿ.ಎ. ಲಿಂಗಾರೆಡ್ಡಿ, ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರು.