Advertisement
ಅಪರೂಪದ ಜೀರಿಗೆ ಅಪ್ಪೆಮಿಡಿಯ ಪರಿಮಳವನ್ನು ಸಂಗ್ರಹಿಸಿ ಪಲ್ಯ ಪದಾರ್ಥ ತಂಬುಳಿಗಳಿಗೆ ಉಪಯೋಗಿಸಿ ವರುಷ ಪೂರ್ತಿ ಅಪ್ಪೆಯ ಹಸಿತನವನ್ನು ಉಳಿಸಿ ಊಟವನ್ನು ಮಾವುಮಯ ಮಾಡೋ ವಿಧಾನ ತುಂಬಾನೇ ಇಷ್ಟವಾಯಿತು. ನಾಲಗೆಯಲ್ಲಿನ್ನೂ ಅದ್ರದ್ದೇ ಪರಿಮಳ.
Related Articles
Advertisement
ಉಜಿರೆಯಲ್ಲಿ ಎಂ.ಸಿ.ಜೆ ಓದುತ್ತಿದ್ದ ದಿನಗಳು. ನಮ್ಮ ರೂಮು ಚಾರ್ಮಾಡಿ ರಸ್ತೆಯಲ್ಲಿ 7 ಕಿ.ಮೀ ದೂರ. ಸೋಮಂತಡ್ಕದ ಕಾಡಿನ ಒಳಗೆ. ವಡಕ್ಕನ್ ನರ್ಸರಿ ನಮ್ಮ ಸ್ಟಾಪು. ಗವರ್ನಮೆಂಟು ಬಸ್ಸಿದೆ. ಆದ್ರೂ ಜನ ಜೀಪುಗಳಲ್ಲೇ ಹೆಚ್ಚು ಓಡಾಡೋದು. ಆ ಕತ್ತಲಿಗೆ ಏನೂ ಇಲ್ಲ ಅಂದಾಗ ಅವಳ ಸ್ಕೂಟಿ ಇದೆ. ಕೈಯಲ್ಲಿ ಕೀ. ಆಗ ಎಲ್ಲಿವರೆಗಿನ ದಡ್ಡತನವೆಂದರೆ ಕೀ ಹಾಕಿದ್ದೇನೆ. ಸ್ಟಾರ್ಟ್ ಮಾಡೋದು ಗೊತ್ತಿರಲಿಲ್ಲ. ಆದ್ರೆ ಹುಡುಗಿ ಮುಂದೆ ಅವಮಾನ ಬೇಡ ಅಂತ ಗೊತ್ತಿರೋನ ಹಾಗೇ ನಟಿಸಿದ್ದೆ. ಆದ್ರೆ ಸ್ಟಾರ್ಟ್ ಆಗ್ಬೇಕಲ್ಲಾ.
ಕ್ಲಾಸಲ್ಲಿ ಯಾವತ್ತೂ ಮಲಗೋನು ನಾನು. ಚಂದ್ರಕಲಾ ಮೇಡಂ “ಮಂಜುನಾಥ್… ಮಂಜುನಾಥ್…’ ಅಂತ ರಾಗವೆಳೆದು ನನ್ನನ್ನು ಎಬ್ಬಿಸೋದನ್ನು ಕೇಳಿ ಕೇಳಿ ಇಡೀ ಕ್ಲಾಸಿಗೆ ಬೇಜಾರಾಗಿತ್ತು. ಆ ಹೊತ್ತಿಗೆ “ಅಯ್ಯೋ ಮಂಜಣ್ಣ ಯಾಕ್ ಹೀಗೆ ದಿನಾಲೂ ಬೈಗುಳ ತಿಂತೀಯಾ? ಇನ್ನು ನಾನು ನಿನ್ನ ಜೊತೆ ಕೂರ್ತೆàನೆ. ನಿದ್ದೆ ಬಂದಾಗ್ಲೆಲ್ಲ ಎಬ್ಬಿಸ್ತೇನೆ’ ಅಂತ ಪಕ್ಕ ಕೂತವಳು ಇವತ್ತಿಗೂ ಆತ್ಮೀಯ ಸ್ನೇಹಿತೆ.
ಆದ್ರೆ ಆ ದಿನ ಮಾತ್ರ ಜೀವ ಬಾಯಿಗೆ ಬಂದಿತ್ತು. ಹುಡುಗನಾಗಿ ಸೋಲೊಪ್ಪಬಾರದು. ಸ್ಟಾರ್ಟ್ ಆದ್ಮೇಲೆ ಏನೂ ಕಷ್ಟವಿಲ್ಲ. ಅಪರೂಪಕ್ಕೊಮ್ಮೆ, ಮನೆಯಲ್ಲಿದ್ದ ಲೂನಾವನ್ನು ನಾನೇ ಬಿಟ್ಕೊಂಡು ಹೋಗಬೇಕೆಂದಾಗ ಅಪ್ಪನೇ ಸ್ಟಾರ್ಟ್ ಮಾಡಿಕೊಡುತ್ತಿದ್ದರು.
ಈಗ ಇವಳನ್ನೇ, “ಸ್ಟಾರ್ಟ್ ಮಾಡಿ ಕೊಡೇ ಸೀಮಾ’ ಅನ್ನಲು ನಾಚಿಕೆ. ಅವಳಿಗೆ ಗೊತ್ತಾಗೊØàಯ್ತು. “ಅಯ್ಯೋ ಮಂಜಣ್ಣ ಮೊದಲೇ ಹೇಳ್ಳೋದಲ್ವಾ?’ ಅಂತ ಸ್ಟಾರ್ಟ್ ಮಾಡಿ ಕೊಟ್ಟಳು. ಅಷ್ಟೇ ಅಲ್ಲ, ಸ್ಟಾರ್ಟ್ ಮಾಡಲು ಕಲಿಸಿದಳು. ಆಮೇಲೆ ಒಂದು ವರುಷಗಳವರೆಗೆ ಆ ಸ್ಕೂಟಿ ನನ್ನದೇ ಅನ್ನೋ ರೀತಿ ಇತ್ತು. ಆ ಸ್ಕೂಟಿ ಅವಳ ಹತ್ರ ಇರೋಕಿಂತ ಜಾಸ್ತಿ ನನ್ನ ಬಳಿಯೇ ಜಾಸ್ತಿ ಇರುತ್ತಿತ್ತು.
ಆ ಸ್ಕೂಟೀಲೂ ಚಾರ್ಮಾಡಿ ಹತ್ತಿದ್ದೇನು, ದಿಡುಪೆ ಸುತ್ತಿದ್ದೇನು! ಸೀಮಾ ಯಾವತ್ತೂ ಭೂತದ ಕೋಲವನ್ನು ನೋಡಿಯೇ ಇರಲಿಲ್ಲವಂತೆ. ಅವಳಿಗಾಗಿ ಎಲ್ಲಿ ಕೋಲವಿದೆ ಅಂತ ಹುಡುಕಾಡಿ ಗಡಾಯಿಕಲ್ಲಿನ ಬಳಿ ಯಾವುದೋ ಹಳ್ಳಿಯಲ್ಲಿದ್ದ ಕೊರಗಜ್ಜ ದೈವದ ಕೋಲವನ್ನು ತೋರಿಸಲು ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿಬಂದಿದ್ದೆ. ವಿದ್ಯಾರ್ಥಿಗಳೇ ತಯಾರಿಸುತ್ತಿದ್ದ “ನಮ್ಮೂರ ವಾರ್ತೆ’ ನ್ಯೂಸ್ ಬುಲೆಟಿನ್‌ಗಾಗಿ ವಿಡಿಯೋ ತರಲು ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ ಅಂತೆಲ್ಲಾ ಸುತ್ತಿದ್ದೇನು!
ಹೀಗೆ ಸ್ಕೂಟೀಲಿ ಹುಟ್ಟಿದ ಸುತ್ತಾಟದ ಪ್ರೀತಿ ಬುಲೆಟ್‌ವರೆಗೆ ತಲುಪಿದೆ. ಮುಂದೆ ಇಂಡಿಯಾದಿಂದ ಲಂಡನ್ನಿಗೆ ಕಾಳಿಂಗನೊಂದಿಗೆ ಪಯಣಿಸುವ ಕನಸು. ಪಾಕಿಸ್ತಾನ ಸೇರಿದಂತೆ 13 ದೇಶಗಳ ಗಡಿ ದಾಟುವ ಮನಸು. ವಿಶ್ವಶಾಂತಿಗಾಗಿ ನನ್ನದೂ, ಕಾಳಿಂಗನದೂ ಸಣ್ಣದೊಂದು ಪ್ರವಾಸ ಪ್ರಯತ್ನದ ಕನಸೂ ಇದೆ, ಮುಂದೆ. ನೋಡೋಣ…(ಮುಗಿಯಿತು) – ಮಂಜುನಾಥ್ ಕಾಮತ್