Advertisement

ಈ ಯೋಜನೆ ಪಡೆದುಕೊಳ್ಳಿ, ನಿವೃತ್ತ ಬದುಕಿನಲ್ಲಿ ಪ್ರತಿ ತಿಂಗಳು ನಿಮ್ಮ ಕೈಸೇರಲಿದೆ 5000ರೂ.!?

01:24 PM Apr 10, 2021 | |

ನವ ದೆಹಲಿ : ನಿಮ್ಮ ನಿವೃತ್ತ ಬದುಕಿಗೆ  ಈ ಯೋಜನೆ ಹೇಳಿ ಮಾಡಿಸಿದಂತಿದೆ. ನಿಮಗೆ 18 ವರ್ಷ ವಯಸ್ಸು ತುಂಬಿದರೆ ನೀವು ಈ ಯೋಜನೆಯನ್ನು ಮಾಡಿಸಿಕೊಳ್ಳುವುದರಿಂದ ನಿಮ್ಮ ನಿವೃತ್ತಿ ಬದುಕಿಗೆ ಉತ್ತಮ ಆದಾಯದ ಮೂಲವಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಪಡಬೇಕಾಗಿಲ್ಲ.

Advertisement

ಹೌದು, ಅಟಲ್‌ ಪೆನ್ಷನ್‌ ಯೋಜನೆಯು ಅತ್ಯುತ್ತಮ ಪಿಂಚಣಿ ಯೋಜನೆಯಾಗಿದೆ. 18 ವರ್ಷ ತುಂಬಿದ ನಮ್ಮ ದೇಶದ ಪ್ರತಿಯೊಬ್ಬರು ಕೂಡ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಓದಿ : ಕಿಡಿಗೇಡಿಗಳ ಕಿಚ್ಚಿಗೆ ಭಸ್ಮವಾದ ಇಸಾಕ್‌ ಗ್ರಂಥಾಲಯದ 11 ಸಾವಿರಕ್ಕೂ ಹೆಚ್ಚು ಪುಸ್ತಕಗಳು

ಅಟಲ್ ಪಿಂಚಣಿ ಯೋಜನೆಗೆ ಸೇರಿಕೊಂಡು ಮಾಸಿಕ 5 ಸಾವಿರ ರೂಪಾಯಿ ಅಥವಾ 60 ಸಾವಿರ ರೂಪಾಯಿ ವಾರ್ಷಿಕ ಪಿಂಚಣಿಗೆ ಖಾತೆ ತೆರೆಯಬೇಕು. ನಂತರ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಜಮಾ ಮಾಡಬೇಕು.ವರ್ಷಕ್ಕೆ 2520 ರೂಪಾಯಿಗಳಾಗುತ್ತದೆ. 60 ವರ್ಷ ವಯಸ್ಸಿನವರೆಗೆ ಮಾಸಿಕ 210 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ನಿಮಗೆ 60 ವರ್ಷವಾದಾಗ, ನಿಮ್ಮ ಖಾತೆಗೆ ಪ್ರತಿ ತಿಂಗಳು 5000 ರೂಪಾಯಿ ಬರುತ್ತದೆ. ಅಂದರೆ ವರ್ಷಕ್ಕೆ 60,000 ರೂಪಾಯಿ ಈ ಯೋಜನೆಯಿಂದ ನಿಮ್ಮ ಕೈ ಸೇರಲಿದೆ

Advertisement

ಈ ಯೋಜನೆಯಲ್ಲಿ ಎರಡು ವಿಧದ ಯೋಜನೆಗಳಿದ್ದು, ತ್ರೈಮಾಸಿಕವಾಗಿ ಹಾಗೂ ಅರ್ಧ ವಾರ್ಷಿಕಕ್ಕೆ ಈ ಯೋಜನೆಯನ್ನು ನಾವು ಪಡೆದುಕೊಳ್ಳಬಹುದು.

ತ್ರೈಮಾಸಿಕ ಯೋಜನೆ: 

ಪ್ರತಿ 3 ತಿಂಗಳಿಗೊಮ್ಮೆ 626 ರೂಪಾಯಿ ಹೂಡಿಕೆ ಮಾಡಬೇಕು.  42 ವರ್ಷಗಳ ಕಾಲ ಹೂಡಿಕೆ ಮಾಡಬೇಕು. 42 ವರ್ಷಗಳಲ್ಲಿ 1.05 ಲಕ್ಷ ರೂಪಾಯಿ ನಿಮ್ಮ ಒಟ್ಟು ಹೂಡಿಕೆಯಾಗಿರುತ್ತದೆ. ಆ ನಂತರ ನಿಮಗೆ 60 ವರ್ಷ ತುಂಬಿದ ಬಳಿಕ ಜೀವನ ಪರ್ಯಂತ ನೀವು ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಧ ವಾರ್ಷಿಕ ಯೋಜನೆ: 

ನೀವು ಪ್ರತಿ 6 ತಿಂಗಳಿಗೊಮ್ಮೆ 1239 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಈ ಹೂಡಿಕೆಯನ್ನು 42 ವರ್ಷಗಳವರೆಗೆ ಮಾಡಬೇಕಾಗುತ್ತದೆ. 1.04 ಲಕ್ಷ ರೂಪಾಯಿ ನಿಮ್ಮ ಒಟ್ಟು ಹೂಡಿಕೆಯಾಗಿರುತ್ತದೆ. 60 ವರ್ಷವಾದಾಗ ಜೀವನ ಪರ್ಯಂತ ನೀವು ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ.

ಓದಿ : ಪೂರ್ಣ ಧ್ವನಿ ಮುದ್ರಿಕೆಯ ಭಾಗವನ್ನು ಬಿಡುಗಡೆ ಮಾಡಿ :  ಪ್ರಶಾಂತ್ ಕಿಶೋರ್ ಸವಾಲು 

Advertisement

Udayavani is now on Telegram. Click here to join our channel and stay updated with the latest news.

Next